ನವದೆಹಲಿ: 2022 ವರ್ಷಾಂತ್ಯ ಸಮೀಪಿಸುತ್ತಿದೆ.2023 ರ ಹೊಸ ವರ್ಷ ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, 2023 ರ ಜನವರಿ ತಿಂಗಳ ಬ್ಯಾಂಕ್ ಗಳಿಗೆ 11 ರಜೆಗಳಿವೆ.ಈ ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರವೂ ಸೇರಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) 2023 ಜನವರಿ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕುಗಳು ರಾಜ್ಯವನ್ನು ಅವಲಂಬಿಸಿ ಎಲ್ಲಾ ಸಾರ್ವಜನಿಕ ರಜಾದಿನಗಳು ಮತ್ತು ಕೆಲವು ಪ್ರಾದೇಶಿಕ ರಜಾದಿನಗಳನ್ನು ಹೊಂದಿರುತ್ತವೆ. ಪ್ರಾದೇಶಿಕ ರಜಾದಿನಗಳನ್ನು ಸಂಬಂಧಪಟ್ಟ ರಾಜ್ಯದ ಸರ್ಕಾರವು ನಿರ್ಧರಿಸುತ್ತದೆ.
2023 ರ ಜನವರಿ ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ
ಜನವರಿ 1, 2023 – ಭಾನುವಾರ
ಜನವರಿ 2, 2023 – ಸೋಮವಾರ, ಹೊಸ ವರ್ಷದ ಆಚರಣೆ (ಐಜ್ವಾಲ್)
ಜನವರಿ 3, 2023 – ಮಂಗಳವಾರ, ಇಮೊಯಿನು ಇರತ್ಪಾ (ಇಂಫಾಲ್
ಜನವರಿ 4, 2023 – ಬುಧವಾರ, ಗಾನ್-ನ್ಗೈ (ಇಂಫಾಲ್)
ಜನವರಿ 8, 2023 – ಭಾನುವಾರ
ಜನವರಿ 14, 2023 – ಎರಡನೇ ಶನಿವಾರ, ಮಕರ ಸಂಕ್ರಾಂತಿ
ಜನವರಿ 15, 2023 – ಭಾನುವಾರ, ಪೊಂಗಲ್
ಜನವರಿ 22, 2023 – ಭಾನುವಾರ
ಜನವರಿ 26, 2023 – ಗುರುವಾರ, ಗಣರಾಜ್ಯೋತ್ಸವ
ಜನವರಿ 28, 2023 – ನಾಲ್ಕನೇ ಶನಿವಾರ
ಜನವರಿ 29, 2023 – ಭಾನುವಾರ ವಾರದ ರಜೆ
‘SSLC ಪಾಸ್ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ಡಿ.28ರಂದು ಶಿವಮೊಗ್ಗದಲ್ಲಿ ‘ಉದ್ಯೋಗ ಮೇಳ’
Health Tips: ಊಟದ ನಂತರ ಹೊಟ್ಟೆ ಉಬ್ಬುತ್ತಿದೆಯೇ? ನಿರ್ಲಕ್ಷಿಸಬೇಡಿ, ಈ ರೋಗದ ಲಕ್ಷಣವಿರಬಹುದು ಪರೀಕ್ಷಿಸಿಕೊಳ್ಳಿ