ಕೆಎನ್ ಎನ್ ನ್ಯೂಸ್ ಡೆಸ್ಕ್ : ಚಳಿಗಾಲ ಬಂತು ಅಂದರೆ ಆರೋಗ್ಯದ ಮೇಲೆ ನಿಗಾ ವಹಿಸಬೇಕಾಗುತ್ತದೆ. ಅದರಲ್ಲೂ ಪ್ರತಿಯೊಬ್ಬರಿಗೂ ರೋಗನಿರೋಧಕ ಶಕ್ತಿ ಎನ್ನುವುದು ಹೆಚ್ಚಿನ ಪ್ರಮಾಣದಲ್ಲಿ ಇರಬೇಕಾಗುತ್ತದೆ.
ಬೆಡ್ಕಾಫಿ ಕುಡಿಯೋ ಅಭ್ಯಾಸ ನಿಮಗಿದ್ಯಾ? ಡಯಾಬಿಟಿಸ್ ಕಾಯಿಲೆ ಗ್ಯಾರಂಟಿ : ಸಂಶೋಧನೆ | Diabetes disease
ಏಕೆಂದರೆ ಈ ಸಮಯದಲ್ಲಿ ಸಣ್ಣಪುಟ್ಟ ಕಾಯಿಲೆಗಳು ಆವರಿಸಿಕೊಳ್ಳುವುದು ಜಾಸ್ತಿ. ವ್ಯಕ್ತಿಯ ವಯಸ್ಸು, ದೇಹದ ಗಾತ್ರ ಇದ್ಯಾವುದನ್ನು ಕಾಯಿಲೆಗಳು ನೋಡುವುದಿಲ್ಲ.ಸಣ್ಣ ಪುಟ್ಟ ನೆಗಡಿ, ಕೆಮ್ಮು, ಜ್ವರ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಜೊತೆಗೆ ಮನೆಯಲ್ಲಿರುವವರಿಗೆ ಹರಡುತ್ತದೆ.. ಮನೆಯಲ್ಲಿ ಒಂದು ಒಳ್ಳೆ ಮಕ್ಕಳಿಗೆ ಹೀಗಾದರೆ ದೊಡ್ಡವರಾದವರಿಗೆ ಅದನ್ನು ನೋಡಲು ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಹಣ್ಣು ತರಕಾರಿಗಳನ್ನು ಹೆಚ್ಚು ತಿನ್ನಲು ಕೊಡಬೇಕು ಎಂಬುದು ವೈದ್ಯರ ಹೇಳುತ್ತಾರೆ. ಹಣ್ಣುಗಳು ಎಂದ ತಕ್ಷಣ ಮೊದಲಿಗೆ ನಮಗೆ ನೆನಪಿಗೆ ಬರುವುದು ಬಾಳೆಹಣ್ಣು.
ಬೆಡ್ಕಾಫಿ ಕುಡಿಯೋ ಅಭ್ಯಾಸ ನಿಮಗಿದ್ಯಾ? ಡಯಾಬಿಟಿಸ್ ಕಾಯಿಲೆ ಗ್ಯಾರಂಟಿ : ಸಂಶೋಧನೆ | Diabetes disease
ಬಾಳೆಹಣ್ಣು ಎಲ್ಲ ಸಮಯದಲ್ಲೂ ಸಿಗುತ್ತದೆ, ಚಳಿಗಾಲದಲ್ಲೂ ಕೂಡ. ಮಕ್ಕಳಿಗೆ ಈ ಸಮಯದಲ್ಲಿ ಬಾಳೆಹಣ್ಣು ತಿನ್ನಲು ಕೊಡಬಹುದಾ ಎನ್ನುವ ಪ್ರಶ್ನೆ ಪ್ರತಿ ಪೋಷಕರಿಗೆ ಬರದೇ ಇರದು. ಇದಕ್ಕೆ ಮಕ್ಕಳ ತಜ್ಞರಾದ ಡಾ. ಕೆ ರಾಮಲಿಂಗಂ ಏನು ಹೇಳಿದ್ದಾರೆ ನೋಡಿ
ಮಕ್ಕಳಿಗೆ ಚಳಿಗಾಲದಲ್ಲಿ ಯಾವ ರೀತಿಯ ಆಹಾರ ಕೊಡಬೇಕು. ಎಂತಹ ಆಹಾರಗಳಲ್ಲಿ ಕಾಯಿಲೆಗಳು ಬರಬಹುದಾದ ಸಾಧ್ಯತೆ ಕಡಿಮೆ ಇರುತ್ತದೆ ಎನ್ನುವುದು ಪೋಷಕರಿಗೆ ಗೊಂದಲದ ವಿಚಾರವಾಗಿದೆ.
ಏಕೆಂದರೆ ತಂಪಾದ ಆಹಾರಗಳು ಮಕ್ಕಳ ಆರೋಗ್ಯ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆ. ಬಾಳೆಹಣ್ಣು ಕೂಡ ತಂಪಾದ ಆಹಾರ ಪದಾರ್ಥ.
ಬೆಡ್ಕಾಫಿ ಕುಡಿಯೋ ಅಭ್ಯಾಸ ನಿಮಗಿದ್ಯಾ? ಡಯಾಬಿಟಿಸ್ ಕಾಯಿಲೆ ಗ್ಯಾರಂಟಿ : ಸಂಶೋಧನೆ | Diabetes disease
ಇದು ಒಂದು ವೇಳೆ ಸಮಸ್ಯೆಯನ್ನು ಹೆಚ್ಚು ಮಾಡುತ್ತಾ ಎಂದು ಕೇಳಿದರೆ ವೈದ್ಯರು ಇಲ್ಲ ಎಂದು ಹೇಳುತ್ತಾರೆ. ಏಕೆಂದರೆ ನೆಗಡಿ, ಕೆಮ್ಮು ಬರುವುದು ವೈರಲ್ ಸೋಂಕಿನಿಂದ ಎನ್ನುವುದು ಅವರ ಉತ್ತರ.
ಬಾಳೆಹಣ್ಣು ಕೊಡುವ ಬಗ್ಗೆ ಪೋಷಕರು ಆಲೋಚನೆ ಮಾಡಬೇಕಾಗಿಲ್ಲ. ಒಂದು ವೇಳೆ ನಿಮ್ಮ ಮಗು ಈಗಾಗಲೇ ನೆಗಡಿ, ಕೆಮ್ಮು ಸಮಸ್ಯೆಯನ್ನು ಹೊಂದಿದ್ದರೆ ಬಾಳೆಹಣ್ಣು ಕೊಡುವುದು ಬೇಡ. ಏಕೆಂದರೆ ಇದು ಎದೆಯ ಭಾಗದಲ್ಲಿ ಮೊದಲೇ ಇರುವ ಕಫ ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆ