ಕೆಎನ್ಎನ್ ಡಿಜಿಟಲ್ ಡೆಸ್ಕ್: ರಾಜ್ಯದ ಪ್ರವಾಸಿ ತಾಣಗಳ ಮಾಹಿತಿ ಒಂದೇ ಸೂರಿನಡಿ ಲಭ್ಯವಾಗುವಂತೆ ಮಾಡಲಾಗಿದೆ. ಈ ಮೂಲಕ ಕರ್ನಾಟಕದ ಜಿಲ್ಲಾ, ತಾಲ್ಲೂಕುವಾರು ಪ್ರವಾಸಿ ಸ್ಥಳಗಳ ಮಾಹಿತಿಯನ್ನು ನೀವು ಕುಳಿತಲ್ಲೇ ಸಿಗುವಂತೆ ಮಾಡಿರೋದು ಕರ್ನಾಟಕ Explore.
ಹೌದು.. ನೀವು https://kannada.karnatakaexplore.com/ ಎನ್ನುವಂತ ವೆಬ್ ಸೈಟ್ ಒಂದಕ್ಕೆ ಭೇಟಿ ನೀಡಿದರೇ, ಕರ್ನಾಟಕದ ಪ್ರವಾಸಿ ತಾಣಗಳ ಒಂದಷ್ಟು ಮಾಹಿತಿ ಕುಳಿತಲ್ಲೇ ಸಿಗಲಿದೆ.
8-9 ಜಿಲ್ಲೆಗಳ ಮಾಹಿತಿಯನ್ನು ಈಗಾಗಲೇ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ತಾಲ್ಲೂಕು ವಾರು ಪ್ರವಾಸಿ ತಾಣಗಳ ಮಾಹಿತಿಯನ್ನು ನೀವು ತಿಳಿಯಬಹುದು. ಆ ಪ್ರವಾಸಿ ತಾಣಗಳನ್ನು ನೋಡೋದಕ್ಕೂ ಪ್ಲಾನ್ ಮಾಡಿ ತೆರಳಬಹುದಾಗಿದೆ.
ಅಂದಹಾಗೇ ಕರ್ನಾಟಕ ಎಕ್ಸ್ ಪ್ಲೋರ್ ವೆಬ್ ಸೈಟ್ ನಲ್ಲಿ ಪ್ರವಾಸಿ ಸ್ಥಳಗಳು, ಕರ್ನಾಟಕದ ಕಲೆ ಮತ್ತು ಸಂಸ್ಕೃತಿ, ತಿನಿಸುಗಳು, ಹಬ್ಬಗಳ ಮಾಹಿತಿಯನ್ನು ಪಡೆಯಬಹುದಾಗಿದೆ.
ಇನ್ನೂ ಪರಂಪರೆಯ ತಾಣ, ಧಾರ್ಮಿಕ ಸ್ಥಳಗಳು, ವನ್ಯಜೀವಿ ಪ್ರಿಯರಾಗಿದ್ದರೇ ವನ್ಯಜೀವಿ ಸ್ಥಳಗಳು, ಕೋಟೆ, ಅರಮನೆ, ಕಡತೀರಗಳು, ವಸ್ತು ಸಂಗ್ರಹಾಲಯ, ಮೃಗಾಲಯಗಳ ಮಾಹಿತಿಯೂ ಕರ್ನಾಟಕ Explore ವೆಬ್ ಸೈಟ್ ನಲ್ಲಿ ನಿಮಗೆ ಲಭ್ಯವಿದೆ.
ಸೋ ಇನ್ನೇಕೆ ತಡ, ನೀವು ಪ್ರವಾಸಕ್ಕೆ ತೆರಳೋದಾದರೇ, ಬೀಚ್ ಗೆ ಹೋಗೋ ಪ್ಲಾನ್ ಮಾಡಿದ್ದರೇ, ಆ ಎಲ್ಲಾ ಮಾಹಿತಿಗಾಗಿ https://kannada.karnatakaexplore.com/ ಜಾಲ ತಾಣಕ್ಕೆ ಭೇಟಿ ನೀಡಿ ತಪ್ಪದೇ ಪಡೆಯಿರಿ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ 09901028100 ಸಂಖ್ಯೆಗೂ ಸಂಪರ್ಕಿಸಿ ಪಡೆಯಬಹುದಾಗಿದೆ.