Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೆಟ್ರೋ ರೈಲಿನಲ್ಲಿ ಬಿಜೆಪಿ ನಾಯಕರ ಪ್ರಯಾಣ ಬರಿ ನಾಟಕವಷ್ಟೆ : ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಇರಿಸಿದ್ದ ಅಕ್ರಮ ವಿದೇಶಿ ಪ್ರಜೆಗಳು ಪರಾರಿ : ಮತ್ತೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿ ಸಾಧ್ಯತೆ!

ಕೊರಗಜ್ಜನ ಸನ್ನಿಧಿಯಲ್ಲಿ ಹರಕೆ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿದ್ಯಾರ್ಥಿಗಳ ಸೃಜನಶೀಲತೆಗೆ ಇಲ್ಲಿದೆ ಸುವರ್ಣಾವಕಾಶ: ಬೆಂಗಳೂರಲ್ಲಿ ʻವೇದಾಂತ ಮೇಕಥಾನ್’ ಕಾರ್ಯಕ್ರಮ ಆಯೋಜನೆ
KARNATAKA

ವಿದ್ಯಾರ್ಥಿಗಳ ಸೃಜನಶೀಲತೆಗೆ ಇಲ್ಲಿದೆ ಸುವರ್ಣಾವಕಾಶ: ಬೆಂಗಳೂರಲ್ಲಿ ʻವೇದಾಂತ ಮೇಕಥಾನ್’ ಕಾರ್ಯಕ್ರಮ ಆಯೋಜನೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಭಾರತೀಯ ಜ್ಞಾನ ಪರಂಪರೆಯನ್ನು ಆಧುನಿಕ ವಿಜ್ಞಾನದೊಂದಿಗೆ ಬೆಸೆಯುವ ವಿಶಿಷ್ಟ ಪ್ರಯತ್ನವೊಂದಕ್ಕೆ ಉದ್ಯಾನನಗರಿ ಬೆಂಗಳೂರು ಸಾಕ್ಷಿಯಾಗುತ್ತಿದೆ. ಪರಮ್ ಫೌಂಡೇಶನ್ ಮತ್ತು ವೇದಾಂತ ಭಾರತಿ ಜಂಟಿಯಾಗಿ ವಿದ್ಯಾರ್ಥಿಗಳಿಗಾಗಿ ‘ ವೇದಾಂತ ಮೇಕಥಾನ್’ (Vedanta Makeathon) ಎಂಬ ಎರಡು ತಿಂಗಳ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.

ವೇದಾಂತ ಮೇಕಥಾನ್: ಪ್ರಶ್ನೆಗಳು ಅನುಭವಗಳಾಗಿ ಬದಲಾಗುವ ವಿಶಿಷ್ಟ ವೇದಿಕೆ

ಪರಮ್ ಫೌಂಡೇಶನ್ ಮತ್ತು ವೇದಾಂತ ಭಾರತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ‘ವೇದಾಂತ ಮೇಕಥಾನ್’ (Vedanta Makeathon), ಭಾರತೀಯ ಜ್ಞಾನ ಪರಂಪರೆ (Indian Knowledge Systems) ಮತ್ತು ಆಧುನಿಕ ವಿಜ್ಞಾನವನ್ನು ಬೆಸೆಯುವ ಒಂದು ಅಪೂರ್ವ ಪ್ರಯೋಗವಾಗಿದೆ. ಎರಡು ತಿಂಗಳ ಕಾಲ ನಡೆಯುವ ಈ ನವೀನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೇದಾಂತದ ‘ಮಾಯೆ’, ‘ಚೈತನ್ಯ’ದಂತಹ ದಾರ್ಶನಿಕ ವಿಚಾರಗಳನ್ನು ದೃಷ್ಟಿ ಭ್ರಮೆ (Illusions) ಅಥವಾ ನರವಿಜ್ಞಾನದಂತಹ ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸಿ, ಸಂವಾದಾತ್ಮಕ ಪ್ರದರ್ಶಿಕೆಗಳನ್ನು (Interactive Exhibits) ಸಿದ್ಧಪಡಿಸಲಿದ್ದಾರೆ.

ತಜ್ಞರ ಮಾರ್ಗದರ್ಶನದಲ್ಲಿ ಮೂಡಿಬರುವ ಈ ಸೃಜನಶೀಲ ಮಾದರಿಗಳು ಅಂತಿಮವಾಗಿ ಜನವರಿ 29 ರಿಂದ ಫೆಬ್ರುವರಿ 1ರ ವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆಯಲಿರುವ ‘ದಕ್ಷಿಣಾಸ್ಯ ದರ್ಶಿನಿ’ ಸಾರ್ವಜನಿಕ ಪ್ರದರ್ಶನದಲ್ಲಿ ಅನಾವರಣಗೊಳ್ಳಲಿವೆ. ಇದು ಕೇವಲ ಕಲಿಕೆಯಲ್ಲ, ಪ್ರಾಚೀನ ಜ್ಞಾನವನ್ನು ಪ್ರಾಯೋಗಿಕವಾಗಿ ಅನುಭವಿಸುವ ಒಂದು ಅಪೂರ್ವ ಅವಕಾಶ.

ಯುವಜನತೆಯಲ್ಲಿ ಹೊಸ ಆಲೋಚನೆ ಮತ್ತು ಆತ್ಮವಿಶ್ವಾಸ ಮೂಡಿಸಲು ‘ದಕ್ಷಿಣಾಸ್ಯ ದರ್ಶಿನಿ’ ಒಂದು ಉತ್ತಮ ವೇದಿಕೆ. ವೇದಾಂತದ ಸಾರವನ್ನು ವಿಜ್ಞಾನದ ಪ್ರಯೋಗಗಳ ಮೂಲಕ ಇಲ್ಲಿ ವಿವರಿಸಲಾಗುತ್ತದೆ. ಇಂದಿನ ವೇಗದ ಬದುಕಿನಲ್ಲಿ ಯುವಕರಿಗೆ ತಮ್ಮನ್ನು ತಾವು ಅರಿತುಕೊಳ್ಳುವ ಅನಿವಾರ್ಯತೆ ಇದೆ. ಈ ಪ್ರದರ್ಶನದಿಂದ ಸಿಗುವ ತಿಳಿವಳಿಕೆಯು ಜೀವನದ ಸವಾಲುಗಳನ್ನು ಗೆದ್ದು, ಸುಖ-ಶಾಂತಿಯಿಂದ ಬದುಕಲು ಅವರಿಗೆ ಸಹಾಯ ಮಾಡುತ್ತದೆ.​

— ಲಕ್ಷ್ಮೀಶ ಸಿಂಹ, ಧರ್ಮದರ್ಶಿಗಳು, ವೇದಾಂತ ಭಾರತಿ.

ಕಾರ್ಯಕ್ರಮದ ವಿಶೇಷತೆ:

• ಯಾರಿಗೆಲ್ಲ ಅವಕಾಶ?: ವಿಜ್ಞಾನ, ಎಂಜಿನಿಯರಿಂಗ್ ಮಾತ್ರವಲ್ಲದೆ ವಿನ್ಯಾಸ (Design), ಮನೋವಿಜ್ಞಾನ ಮತ್ತು ಮಾನವಿಕ ವಿಭಾಗದ ವಿದ್ಯಾರ್ಥಿಗಳೂ ಭಾಗವಹಿಸಬಹುದು.
• ತರಬೇತಿ-ಮಾರ್ಗದರ್ಶನ: ಆಯ್ಕೆಯಾದ ತಂಡಗಳಿಗೆ ವಿಜ್ಞಾನಿಗಳು, ಕಲಾಕಾರರು ಮತ್ತು ವಿದ್ವಾಂಸರಿಂದ ಎರಡು ತಿಂಗಳ ಕಾಲ ಮಾರ್ಗದರ್ಶನ ನೀಡಲಾಗುತ್ತದೆ.
• ಕಲಿಕೆ: ತತ್ವಶಾಸ್ತ್ರದ ವಿಚಾರಗಳನ್ನು ಸೆನ್ಸಾರ್‌ಗಳು, ಎಐ (AI) ಮತ್ತು ಎಂಜಿನಿಯರಿಂಗ್ ಬಳಸಿ ಪ್ರದರ್ಶಿಕೆಗಳಾಗಿ ಮಾಡುವ ಕಲೆ ಇಲ್ಲಿ ಸಿದ್ಧಿಸುತ್ತದೆ.

ಪ್ರಮುಖ ದಿನಾಂಕಗಳು ಮತ್ತು ವಿವರ:

• ನೋಂದಣಿ ಅವಧಿ: ನೋಂದಣಿ ಈಗಾಗಲೇ ಆರಂಭವಾಗಿದ್ದು, ಜನವರಿ 15 ರವರೆಗೆ ಇರಲಿದೆ.
• ತಂಡದ ಮಿತಿ: ಪ್ರತಿ ತಂಡದಲ್ಲಿ ಗರಿಷ್ಠ 5 ಸದಸ್ಯರಿರಬಹುದು.
• ಸ್ಥಳ: ಪರಮ್ ಮೇಕರ್ ಸ್ಪೇಸ್, ಜಯನಗರ, ಬೆಂಗಳೂರು.
• ಓರಿಯಂಟೇಶನ್: ಜನವರಿ 15ರಂದು ನಡೆಯಲಿರುವ ಕಾರ್ಯಾಗಾರ.

ಅಂತಿಮ ಪ್ರದರ್ಶನ:

ಈ ಮೇಕಥಾನ್ನಲ್ಲಿ ತಯಾರಾದ ಅತ್ಯುತ್ತಮ ಮಾದರಿಗಳನ್ನು ಜನವರಿ 29 ರಿಂದ ಫೆಬ್ರುವರಿ 1ರ ವರೆಗೆ ಬೆಂಗಳೂರಿನ ಅರಮನೆ ಮೈದಾನದ (ತ್ರಿಪುರ ವಾಸಿನಿ) ಬೃಹತ್ ವೇದಿಕೆಯಲ್ಲಿ ನಡೆಯುವ ‘ದಕ್ಷಿಣಾಸ್ಯ ದರ್ಶಿನಿ’ ಎಂಬ ಸಾರ್ವಜನಿಕ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: vedanta-makeathon@paraminnovation.org

ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ: ಕೌನ್ಸಿಲಿಂಗ್ ಮೂಲಕ ಮುಖ್ಯ ಶಿಕ್ಷಕರ ಹುದ್ದೆಯ ಬಡ್ತಿಗೆ ವೇಳಾಪಟ್ಟಿ ಪ್ರಕಟ

KSDL, ಕೃಷಿ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ: ಜನವರಿ.10, 12 ಬದಲಿಗೆ ಜ.18ಕ್ಕೆ ನೇಮಕಾತಿ ಪರೀಕ್ಷೆ

Share. Facebook Twitter LinkedIn WhatsApp Email

Related Posts

ಮೆಟ್ರೋ ರೈಲಿನಲ್ಲಿ ಬಿಜೆಪಿ ನಾಯಕರ ಪ್ರಯಾಣ ಬರಿ ನಾಟಕವಷ್ಟೆ : ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

1 Min Read

ಬೆಂಗಳೂರಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಇರಿಸಿದ್ದ ಅಕ್ರಮ ವಿದೇಶಿ ಪ್ರಜೆಗಳು ಪರಾರಿ : ಮತ್ತೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿ ಸಾಧ್ಯತೆ!

1 Min Read

ಕೊರಗಜ್ಜನ ಸನ್ನಿಧಿಯಲ್ಲಿ ಹರಕೆ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್!

1 Min Read
Recent News

ಮೆಟ್ರೋ ರೈಲಿನಲ್ಲಿ ಬಿಜೆಪಿ ನಾಯಕರ ಪ್ರಯಾಣ ಬರಿ ನಾಟಕವಷ್ಟೆ : ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಇರಿಸಿದ್ದ ಅಕ್ರಮ ವಿದೇಶಿ ಪ್ರಜೆಗಳು ಪರಾರಿ : ಮತ್ತೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿ ಸಾಧ್ಯತೆ!

ಕೊರಗಜ್ಜನ ಸನ್ನಿಧಿಯಲ್ಲಿ ಹರಕೆ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್!

SHOCKING : `ಕಾಲಿಗೆ ಬೀಳ್ತೀನಿ ಸಾರ್, ಒಂದು ಗಾಂಜಾ ಪ್ಯಾಕೆಟ್ ಕೊಡಿಸಿ’ : ಟವರ್ ಏರಿ ಯುವಕನ ಹೈಡ್ರಾಮಾ | WATCH VIDEO

State News
KARNATAKA

ಮೆಟ್ರೋ ರೈಲಿನಲ್ಲಿ ಬಿಜೆಪಿ ನಾಯಕರ ಪ್ರಯಾಣ ಬರಿ ನಾಟಕವಷ್ಟೆ : ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

By ಸುರೇಶ್‌ KARNATAKA 1 Min Read

ಬೆಂಗಳೂರಿನಲ್ಲಿ ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ…

ಬೆಂಗಳೂರಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಇರಿಸಿದ್ದ ಅಕ್ರಮ ವಿದೇಶಿ ಪ್ರಜೆಗಳು ಪರಾರಿ : ಮತ್ತೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿ ಸಾಧ್ಯತೆ!

ಕೊರಗಜ್ಜನ ಸನ್ನಿಧಿಯಲ್ಲಿ ಹರಕೆ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್!

BREAKING : ಮದ್ಯ ಪ್ರೀಯರಿಗೆ ಬಿಗ್ ಶಾಕ್ : ನೂತನ ಅಬಕಾರಿ ಸುಂಕ ಜಾರಿ ಮಾಡಿದ ರಾಜ್ಯ ಸರ್ಕಾರ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.