ಬೆಂಗಳೂರು: ಇಂದು ಮುಂಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಬಹುಮಹಡಿಕಟ್ಟಡಗಳಿಗೆ 1% ಸೆಸ್ ತೆರಿಗೆ ವಿಧಿಸುವುದು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಆರ್ ಸಿ ಬಿ ಸೇರಿದಂತೆ ಇತರೆ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಒಪ್ಪಿಗೆ ನೀಡಲಾಯಿತು. ಇದಲ್ಲೇ ಇತರೆ ಮಹತ್ವದ ನಿರ್ಧಾರಗಳನ್ನು ಇಂದಿನ ಸಚಿವ ಸಂಪುಟದಲ್ಲಿ ಕೈಗೊಳ್ಳಲಾಗಿದೆ. ಆ ಪ್ರಮುಖ ನಿರ್ಧಾರಗಳ ಹೈಲೈಟ್ಸ್ ಮುಂದಿದೆ ಓದಿ.
ಸ್ಪೇಸ್‌ಟೆಕ್‌ನಲ್ಲಿ ಉತ್ಕೃಷ್ಠತಾ ಕೇಂದ್ರ
ಸ್ಪೇಸ್‌ಟೆಕ್‌ನಲ್ಲಿ ಉತ್ಕೃಷ್ಠತಾ ಕೇಂದ್ರ (CoE) ವನ್ನು ಐದು ವರ್ಷಗಳ ಅವಧಿಯಲ್ಲಿ ಒಟ್ಟು ರೂ.10.00 ಕೋಟಿಗಳ ಆಯವ್ಯಯದಲ್ಲಿ ಸ್ಥಾಪಿಸಲು; ಸ್ಪೇಸ್‌ಟೆಕ್‌ನಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ಕಂಪನಿ ಕಯ್ದೆ, 2013ರಡಿ ಸೆಕ್ಷನ್-ಬಿ ಕಂಪನಿಯಾಗಿ ಸ್ಥಾಪಿಸಲು; ಸ್ಪೇಸ್‌ಟೆಕ್‌ನಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸುವ ಕುರಿತು Satellite Communication Industry Association (SIA-India) ಅನ್ನು ಅನುಷ್ಠಾನ ಪಾಲುದಾರರಾಗಿ ಆಯ್ಕೆ ಮಾಡಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999ರ ಸೆಕ್ಷನ್ 4(ಜಿ) ರಡಿ ವಿನಾಯಿತಿ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.
ಇಸ್ರೋ, ಡಿಆರ್‌ಡಿಒ ಮತ್ತು ಇತರ ಸರ್ಕಾರಿ ಪರೀಕ್ಷಾ ಸೌಲಭ್ಯಗಳು ಸಂಪೂರ್ಣ ಸಾಮರ್ಥ್ಯ ತಲುಪಿರುವುದರಿಂದ ಮತ್ತು ತಮ್ಮದೇ ಆದ ಮಿಷನ್‌ಗಳತ್ತ ಗಮನಹರಿಸುವ ಅಗತ್ಯದಿಂದಾಗಿ ಪರೀಕ್ಷಾ ಸೌಲಭ್ಯಗಳಲ್ಲಿ ಕೊರತೆಯುಂಟಾಗಿದೆ. ನವೋದ್ಯಮ ವಲಯವು ಪ್ರತಿ ತಿಂಗಳು ಕನಿಷ್ಠ 30 ಕಾರ್ಯನಿರತ ಮಾದರಿಗಳನ್ನು ಪರೀಕ್ಷೆಗೆ ಸಿದ್ದವಾಗಿ ಹೊರತರುತ್ತದೆ. ನವೋದ್ಯಮ ವಲಯದಿಂದ ಪರೀಕ್ಷಾ ಸೌಲಭ್ಯಗಳಿಗೆ ಬಲವಾದ ಬೇಡಿಕೆಯಿದೆ. ಆದ್ದರಿಂದ ಸ್ಪೇಸ್‌ಟೆಕ್‌ನಲ್ಲಿ ಉತ್ಕೃಷ್ಟತಾ ಕೇಂದ್ರ ಅಗತ್ಯವಿದೆ ಎಂದು ಪ್ರಸ್ತಾಪಿಸಲಾಗಿತ್ತು.
ಐದು (5) ವರ್ಷಗಳ ಅವಧಿಯಲ್ಲಿ ರೂ.1000.00 ಕೋಟಿಗಳ ಒಟ್ಟು ಬಜೆಟ್ ಹಂಚಿಕೆಯೊಂದಿಗೆ ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮವನ್ನು (LEAP) ಪ್ರಾರಂಭಿಸುವುದು. ಮೊದಲ ವರ್ಷದಲ್ಲಿ LEAP ಯೋಜನೆಯ ಅನುಷ್ಟಾನಕ್ಕಾಗಿ ರೂ.200.00 ಕೋಟಿಗಳ ಮೊತ್ತವನ್ನು ಮಂಜೂರು ಮಾಡಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ತಿಳಿಸಿದರು.
LEAP (Local Economy Accelerator Program) ಎಂಬುದು ಕರ್ನಾಟಕದ ಉದಯೋನ್ಮುಖ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುವ ಒಂದು ಉಪಕ್ರಮವಾಗಿದ್ದು, ಈ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ನವೋದ್ಯಮಗಳಿಗೆ ನಿರ್ಣಾಯಕ ಮತ್ತು ಅಗತ್ಯ ಬೆಂಬಲವನ್ನು ಒದಗಿಸುವ ಉದ್ದೇಶದಿಂದ ಐಇಂP ಕರ್ನಾಟಕವನ್ನು ಜಗತ್ತಿಗೆ ಭವಿಷ್ಯದ ಸಿದ್ಧ ನವೋದ್ಯಮ ನಾಯಕನನ್ನಾಗಿಸಲು ಮುಂದಿನ 5 ವರ್ಷಗಳಲ್ಲಿ ರೂ.1000.00 ಕೋಟಿ ಬಂಡವಾಳ ಹೂಡುವ ಮಹಾತ್ವಾಕಾಂಕ್ಷಿ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.
ಜಾಗತಿಕ ಸಾಮರ್ಥ್ಯ ಕೇಂದ್ರ ನೀತಿಗೆ ತಿದ್ದುಪಡಿ
ಕರ್ನಾಟಕ ಜಾಗತಿಕ ಸಾಮರ್ಥ್ಯ ಕೇಂದ್ರ ನೀತಿ 2024-2029ಕ್ಕೆ ತಿದ್ದುಪಡಿ ಮಾಡಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ನೀತಿ ದಾಖಲೆಯಲ್ಲಿ ಸ್ಪಷ್ಟತೆ ಮತ್ತು ಸ್ಥಿರತೆಯನ್ನು ಹೆಚ್ಚಿಸಲು ಅಗತ್ಯ ತಿದ್ದುಪಡಿಗಳು ಮತ್ತು ಸ್ಪಷ್ಟಿಕರಣಗಳನ್ನು ಮಾಡಲು ಇಲಾಖೆ ಪ್ರಸ್ತಾಪಿಸಿದೆ. ಈ ಮಾರ್ಪಾಡುಗಳು ಕೇವಲ ಭಾಷೆ ಮತ್ತು ನಿರೂಪಣೆಯ ಸುಧಾರಣೆಗೆ ಮಾತ್ರ ಸೀಮಿತವಾಗಿವೆ, ಅದರ ಮೂಲ ನಿಬಂಧನೆಗಳು ಅಥವಾ ಮೂಲ ಉದ್ದೇಶವನ್ನು ಬದಲಾಯಿಸದೆ ನಿಖರವಾದ ವ್ಯಾಖ್ಯಾನವನ್ನು ಖಚಿತಪಡಿಸಿಕೊಳ್ಳಲು, ಸಂಭಾವ್ಯ ಅಸ್ಪಷ್ಟತೆಯನ್ನು ತಪ್ಪಿಸಲು ಮತ್ತು ಎಲಾ ಪಾಲುದಾರರಿಂದ ಅನುಷ್ಠಾನವನ್ನು ಸುಗಮಗೊಳಿಸಲು ಇದು ಅತ್ಯಗತ್ಯ. ಆದ್ದರಿಂದ ಜಿಸಿಸಿ ನೀತಿಯನ್ನು ತಿದ್ದುಪಡಿಸಲು ಮಾಡಲು ಪ್ರಸ್ತಾಪಿಸಲಾಗಿತ್ತು.
ರಾಯಚೂರಿನಲ್ಲಿ ಪೆರಿಫರಲ್ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ
ರಾಯಚೂರಿನ ರಾಜೀವ್‌ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ರೂ.20.00 ಕೋಟಿಗಳ ಸಿವಿಲ್ ಕಾಮಗಾರಿ ಹಾಗೂ ರೂ.30.00 ಕೋಟಿಗಳ ಉಪಕರಣಗಳ ಖರೀದಿಯನ್ನೊಳಗೊಂಡAತೆ ಒಟ್ಟು ರೂ.50.00 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಫೆರಿಫೆರಲ್ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪಿಸಲು ಹಾಗೂ ಸದರಿ ವೆಚ್ಚವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಭರಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ತಿಳಿಸಿದರು.
ರಾಯಚೂರಿನಲ್ಲಿ ಫೆರಿಫೆರಲ್ ಕ್ಯಾನ್ಸರ್ ಚಿಕಿತ್ಸಾ ಘಟಕವನ್ನು ಸ್ಥಾಪಿಸುವುದರಿಂದ ಸುತ್ತಮುತ್ತಲಿನ ಜಿಲ್ಲೆಗಳ ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ನೀಡಲು ಸಹಕಾರಿಯಾಗುತ್ತದೆ.
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಸಾಮರ್ಥ್ಯ ಹೆಚ್ಚಳ
ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸ್ಥಾಪಿಸಲು ಹೆಚ್ಚುವರಿಯಾಗಿ ಅವಶ್ಯವಿರುವ ವೈದ್ಯಕೀಯ ಉಪಕರಣ, ಪೀಠೋಪಕರಣ ಹಾಗೂ ಇತರೆ ಬಾಬ್ತುಗಳ ಒಟ್ಟಾರೆ ರೂ.62.00 ಕೋಟಿಗಳ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಇಂದಿರಾಗಾAಧಿ ಮಕ್ಕಳ ಆರೋಗ್ಯ ಸಂಸ್ಥೆಯ 450 ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡ ನಿರ್ಮಾಣದಿಂದಾಗಿ ರಾಜ್ಯದ ಬಡಮಕ್ಕಳಿಗೆ ಅಗತ್ಯವಿರುವ ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ಕಡಿಮೆ ದರದಲ್ಲಿ ಪರಿಣಾಮಕಾರಿಯಾಗಿ ಒದಗಿಸಲು ಪ್ರಸ್ತಾಪಿಸಲಾಗಿತ್ತು.
ಕೆರೆಗಳ ವಿಸ್ತೀರ್ಣಕ್ಕೆ ಬಫರ್ ಜೋನ್ ತಿದ್ದುಪಡಿ
ಕೆರೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್ ಜೋನ್ ನಿಗದಿಪಡಿಸುವುದಕ್ಕಾಗಿ; ಕೆರೆಯ ಬಫರ್ ಜೋನ್‌ನಲ್ಲಿ ಹಾಗೂ ಕೆರೆಯಲ್ಲಿ ಸಾರ್ವಜನಿಕ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ಕೈಗೊಳ್ಳಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ 2014ಕ್ಕೆ ತಿದ್ದುಪಡಿ ತರುವುದಕ್ಕಾಗಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ 2025ನ್ನು ವಿಧಾನ ಮಂಡಲದಲ್ಲಿ ಮಂಡಿಸಲು; ಸಚಿವ ಸಂಪುಟ ಅನುಮೋದಿಸಿದೆ.
ಕಂದಾಯ ಇಲಾಖೆಯಡಿ ಕಾರ್ಯನಿರ್ವಹಿಸುವ 07 ಪ್ರಾಧಿಕಾರಗಳ ಅಧ್ಯಕ್ಷತೆಯನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿತ್ತು. ಮುಖ್ಯಮಂತ್ರಿಗಳಿಗಿರುವ ಕಾರ್ಯಭಾರದ ಜೊತೆ ಈ ಮಂಡಳಿ/ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸುವುದು ಕಷ್ಟಸಾಧ್ಯವಾಗುವುದರಿಂದ ಕಂದಾಯ ಸಚಿವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ಅಧಿಸೂಚನೆ ಹೊರಡಿಸಿರುವುದರಿಂದ ಪ್ರಸ್ತಾವಿತ ಮಂಡಳಿ/ಪ್ರಾಧಿಕಾರಿಗಳ ಅಧಿನಿಯಮ ತಿದ್ದುಪಡಿ ಮಾಡಲು ನಿರ್ಣಯಿಸಲಾಗಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
1. ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ 2025.
2. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ 2025.
3. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ಮಸೂದೆ 2025.
4. ಬನವಾಸಿ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ 2025.
5. ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ 2025.
6. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ 2025.
7. ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ 2025.
ಮೇಲಿನ ಮಸೂದೆಗಳನ್ನು ವಿಧಾನಮಂಡಲದ ಮುಂದೆ ಮಂಡಿಸಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಯರಗಟ್ಟಿ ಏತ ನೀರಾವರಿ ಆಧುನೀಕರಣ
ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕಿನಲ್ಲಿ ಅಸ್ಥಿತ್ವದಲ್ಲಿರುವ ಯರಗಟ್ಟಿ ಏತ ನೀರಾವರಿ ಯೋಜನೆಯ ನವೀಕರಣ ಕಾಮಗಾರಿಯನ್ನು ರೂ.25.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಸವದತ್ತಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಯರಗಟ್ಟಿ ಏತ ನೀರಾವರಿ ಯೋಜನೆಯು 1985 ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಮೇಲ್ಪಟ್ಟ ಮತ್ತು ಕೆಳಮಟ್ಟ ಎಂದು ಎರಡು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಎರಡು ವಿಭಾಗಗಳಿಂದ ಸವದತ್ತಿ ತಾಲ್ಲೂಕಿನ ಹಾಲಿಕಟ್ಟಿ, ಮಲಸೂರ, ಯರಗಟ್ಟೆ, ಜೀವಾಪೂರ, ರೈನಾಪೂರ, ಸೊಪ್ಪಡ್ಲ, ಕಟಕೋಳ, ಗೊಂದಿ ಗ್ರಾಮಗಳ ಒಟ್ಟು 16850 ಎಕರೆ (6819.10 ಹೆಕ್ಟೇರ್) ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದ್ದು, ಮಲಪ್ರಭಾ ಯೋಜನಾ ವಲಯದ 10 ಏತ ನೀರಾವರಿ ಯೋಜನೆಗಳನ್ನು ಪರಿವೀಕ್ಷಣೆ ಮಾಡಿ, ಸದರಿ ಏತ ನೀರಾವರಿ ಯೋಜನೆಯ ಪಂಪಿಂಗ್ ಮಷಿನರಿಗಳನ್ನು ಬದಲಾಯಿಸಿ, ನವೀಕರಣ ಗೊಳಿಸಲು ಪ್ರಸ್ತಾಪಿಸಿ, ಈ ಯೋಜನೆ ರೂಪಿಸಲಾಗಿದೆ.
ರೇಣುಕಾ ಏತ ನೀರಾವರಿ ನವೀಕರಣ
ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕಿನಲ್ಲಿ ಅಸ್ಥಿತ್ವದಲ್ಲಿರುವ ರೇಣುಕಾ ಏತ ನೀರಾವರಿ ಯೋಜನೆಯ ನವೀಕರಣ ಕಾಮಗಾರಿಯನ್ನು ರೂ.20.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಸವದತ್ತಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ರೇಣುಕಾ ಏತ ನೀರಾವರಿ ಯೋಜನೆಯು 1978 ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಸವದತ್ತಿ ತಾಲ್ಲೂಕಿನ ಕುರುವಿನಕೊಪ್ಪ, ಹೂಲಿ, ಹೊಲಿಕಟ್ಟಿ, ಉಗರಗೊಳ, ಹರಳಕಟ್ಟಿ, ಗ್ರಾಮಗಳ ಒಟ್ಟು 20176 ಎಕರೆ (8165.11 ಹೆಕ್ಟೇರ್) ಪ್ರದೇಶಕ್ಕೆ ಸೌಲಭ್ಯ ಒದಗಿಸಲಾಗುತ್ತಿದ್ದು, ಈ ಮೋಟಾರುಗಳು ಸುಮಾರು 35 ವರ್ಷಗಳಿಂದ ಚಾಲನೆಯಲ್ಲಿದ್ದು, ಅವುಗಳ ಕಾರ್ಯಕ್ಷಮತೆ ಕುಂಠಿತವಾಗಿದ್ದು, ಆದ್ದರಿಂದ ಸದರಿ ಏತ ನೀರಾವರಿ ಯೋಜನೆಯ ಪಂಪಿAಗ್ ಮಷೀನ್‌ಗಳನ್ನು ಬದಲಾಯಿಸಿ, ನವೀಕರಣಗೊಳಿಸಲು ಪ್ರಸ್ತಾಪಿಸಲಾಗಿತ್ತು.
ಸಾಲಗುಂದ ಏತ ನೀರಾವರಿ ಆಧುನೀಕರಣ
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಾಲಗುಂದ ಗ್ರಾಮದ ಹತ್ತಿರ ತುಂಗಭದ್ರಾ ನದಿಯಿಂದ ನೀರನ್ನೆತ್ತಿ ತುಂಗಭದ್ರಾ ಎಡದಂಡೆ ಕಾಲುವೆಯ ಡಿ-32 ಮತ್ತು ಡಿ-36 ವ್ಯಾಪ್ತಿಯ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ರೂ.178.00 ಕೋಟಿ ಅಂದಾಜು ಮೊತ್ತದ (2023-24ನೇ ಸಾಲಿನ ಏಕರೂಪ ದರಪಟ್ಟಿಯನ್ವಯ) ಸಾಲಗುಂದ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಮತ್ತು ಸದರಿ ಯೋಜನೆಯನ್ನು ಎರಡು ಹಂತದಲ್ಲಿ ಅಂದರೆ ಮೊದಲನೇ ಹಂತದಲ್ಲಿ ರೂ.71.00 ಕೋಟಿ ಹಾಗೂ ಎರಡನೇ ಹಂತದಲ್ಲಿ ರೂ.107.00 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ತುಂಗಭದ್ರಾ ಎಡದಂಡೆ ಕಾಲುವೆಯ ಡಿ-32 ಮತ್ತು ಡಿ-36ರ ವ್ಯಾಪ್ತಿಯ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಸಾಲಗುಂದ ಏತ ನೀರಾವರಿಯ ಬಾಧಿತ ರೈತರು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಕೋರಿಕೆಯ ಮೇರೆಗೆ ಬಾಧಿತ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಮಸ್ಯೆಯನ್ನು ಸರಿದೂಗಿಸುವ ಸಲುವಾಗಿ ಸಾಲಗುಂಧ ಏತ ನೀರಾವರಿಯನ್ನು ಪ್ರಸ್ತಾಪಿಸಲಾಗಿದೆ.
ಸಿಂಧನೂರು ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ಮುಳ್ಳೂರು ಗ್ರಾಮದ ಬಳಿ ಸಿಂಧನೂರು ಹಳ್ಳಕ್ಕೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಿ, ತುಂಗಭದ್ರಾ ಎಡದಂಡೆ ಕಾಲುವೆಯ ಉಪ ವಿತರಣಾ ಕಾಲುವೆ 54/3ಆರ್ ರಡಿಯ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಯೋಜನೆಯನ್ನು ರೂ.29.00 ಕೋಟಿಗಳ ಅಂದಾಜು ಮೊತ್ತದ (2023-24ನೇ ಸಾಲಿನ ಏಕರೂಪ ದರಪಟ್ಟಿಯನ್ವಯ) ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ತುಂಗಭದ್ರಾ ಎಡದಂಡೆ ಕಾಲುವೆಯ ಉಪ ವಿತರಣಾ ಕಾಲುವೆ 54/3ಆರ್ ಕೊನೆ ಅಂಚಿನ ಪಗಡದಿನ್ನಿ, ಮುಳ್ಳೂರು ಮತ್ತು ಕಲ್ಲೂರು ಗ್ರಾಮಗಳ ಸುಮಾರು 2,098.20 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಹಲವು ವರ್ಷಗಳಿಂದ ನೀರು ತಲುಪುತ್ತಿಲ್ಲವಾದ್ದರಿಂದ ಸಿಂಧನೂರು ತಾಲ್ಲೂಕಿನ ಮುಳ್ಳೂರು-ಮಲ್ಲಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಮುಳ್ಳೂರು ಗ್ರಾಮದ ಹತ್ತಿರ ಸಿಂಧನೂರು ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್‌ನ್ನು ನಿರ್ಮಿಸಿ, ಮಳೆಗಾಲದ ಅವಧಿಯಲ್ಲಿ 0.103 ಟಿಎಮ್‌ಸಿ ಪ್ರಮಾಣದ ನೀರನ್ನೆತ್ತಿ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಈ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.
ಎತ್ತಿನಹೊಳೆ ಯೋಜನೆ ಕುಡಿಯುವ ನೀರಿನ ಘಟಕಕ್ಕೆ ಅನುಮೋದನೆ
ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನಲ್ಲಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಕುಡಿಯುವ ನೀರಿಗಾಗಿ ಹಂಚಿಕೆಯಾಗಿರುವ 0.512 ಟಿಎಂಸಿ ನೀರನ್ನು ಸಂಗ್ರಹಣಾ ಸ್ಥಳಕ್ಕೆ ಪೂರೈಸಲು ಅರಸೀಕೆರೆ ತಾಲ್ಲೂಕಿನ 10 ಕೆರೆಗಳಿಗೆ ನೀರು ತುಂಬಿಸುವ ರೂ.148.80 ಕೋಟಿಗಳ ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಈ ಪ್ರಸ್ತಾವನೆಯು ಈ ಹಿಂದೆ ಸಲ್ಲಿಸಲಾದ ರೂ.372.80 ಕೋಟಿ ಮೊತ್ತದ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನಲ್ಲಿ ಎತ್ತಿನಹೊಳೆ ಗುರುತ್ವಾಕರ್ಷಣೆಯ ಕಾಲುವೆಯಿಂದ 55.800 ಕಿ.ಮೀ ನಿಂದ 102.870 ಕಿ.ಮೀ ರವರೆಗೆ ಸಣ್ಣ ನೀರಾವರಿ ಇಲಾಖೆಯ 32 ಕೆರೆಗಳನ್ನು ತುಂಬಿಸುವ ಪರಿಷ್ಕೃತ ಪ್ರಸ್ತಾವನೆಯನ್ನು ಕುಡಿಯುವ ನೀರಿಗೆ ಆದ್ಯತೆ ನೀಡಿ, ಅಂದಾಜು ಮೊತ್ತವನ್ನು ರೂ.148.80 ಕೋಟಿಗಳಿಗೆ ಪರಿಷ್ಕರಿಸಿ ಪ್ರಸ್ತಾಪಿಸಲಾಗಿದೆ.
ಸರ್ಕಾರಿ ನೌಕರರ ಸೇವಾ ವಹಿಯನ್ನು HRMS 2.0 ತಂತ್ರಾಂಶದಲ್ಲಿ ನಿರ್ವಹಣೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ
WATCH VIDEO: ಭೀಮನ ಅಮಾವಾಸ್ಯೆಯ ಪ್ರಯುಕ್ತ ಸಿಂಗದೂರು ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ: ಹರಿದು ಬಂದ ಭಕ್ತಸಾಗರ