ಶಿವಮೊಗ್ಗ : 2024ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR TET-2024) ಜೂ. 30 ರಂದು ನಡೆಯಲಿದ್ದು, ಮೊದಲ ಅಧಿವೇಶನಕ್ಕೆ 2874 ಹಾಗೂ 2ನೇ ಅಧಿವೇಶನಕ್ಕೆ 4676 ಅಭ್ಯರ್ಥಿಗಳು ಪರೀಕ್ಷೆ ಬರಿಯಲಿದ್ದಾರೆ.
ಪರೀಕ್ಷೆಯು ಬೆಳಗ್ಗಿನ ಅವಧಿ 9.30 ರಿಂದ 12.00ರವರೆಗೆ 11 ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ಮಧ್ಯಾಹ್ನದ ಅವಧಿಯು 2.00 ರಿಂದ 4.30ರವರೆಗೆ 17 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತದೆ.
ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಿಲಿನ 200 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿಗಳು ಘೋಷಿಸಿರುತ್ತಾರೆ. ಪರೀಕ್ಷಾರ್ಥಿಗಳು ಪ್ರವೇಶ ಪತ್ರದ ಜೊತೆ ಕಡ್ಡಾಯವಾಗಿ ಯಾವುದಾದರೂ ಗುರುತಿನ ಚೀಟಿ ತರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಿದ್ಯಾರ್ಥಿಗಳೇ ಗಮನಿಸಿ: ಜುಲೈ.13, 14ರಂದು ನಿಗದಿ ಪಡಿಸಿದ್ದ ‘PG CET-2024ರ ಪರೀಕ್ಷೆ’ ಮುಂದೂಡಿಕೆ
ಜುಲೈ 2ನೇ ವಾರದಲ್ಲಿ ಬೆಂಗಳೂರಿನ ‘ಯಲಹಂಕದ ಅನಿಲ ವಿದ್ಯುತ್ ಘಟಕ’ ಲೋಕಾರ್ಪಣೆ: ಸಚಿವ ಕೆ.ಜೆ ಜಾರ್ಜ್