Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ನಾಚಿಕೆಗೇಡು.! 60 ವರ್ಷದ ತನ್ನ ಅಜ್ಜಿಯನ್ನ ಕಸದ ಬುಟ್ಟಿಗೆ ಎಸೆದ ದುಷ್ಟ ‘ಮೊಮ್ಮಗ’

23/06/2025 5:39 PM

BREAKING: ವಂಚನೆ ಆರೋಪಿ ಐಶ್ವರ್ಯ ಗೌಡಗೆ ‘ED’ ಬಿಗ್ ಶಾಕ್: 3.98 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

23/06/2025 5:31 PM

BREAKING: ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಕೇಸ್: CBI SPP ಹುದ್ದೆಗೆ ಗಂಗಾಧರ ಶೆಟ್ಟಿ ರಾಜೀನಾಮೆ

23/06/2025 5:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Janaspandana: ಹೀಗಿದೆ ಇಂದಿನ ‘ಸಿಎಂ ಸಿದ್ಧರಾಮಯ್ಯ ಜನಸ್ಪಂದನ’ ಕಾರ್ಯಕ್ರಮದ ಸಂಪೂರ್ಣ ‘ಹೈಲೈಟ್ಸ್’
KARNATAKA

Janaspandana: ಹೀಗಿದೆ ಇಂದಿನ ‘ಸಿಎಂ ಸಿದ್ಧರಾಮಯ್ಯ ಜನಸ್ಪಂದನ’ ಕಾರ್ಯಕ್ರಮದ ಸಂಪೂರ್ಣ ‘ಹೈಲೈಟ್ಸ್’

By kannadanewsnow0908/02/2024 7:40 PM

ಬೆಂಗಳೂರು : ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದಲ್ಲಿ ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಒಟ್ಟು 12372 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಸ್ಥಳದಲ್ಲಿಯೇ 246 ಅರ್ಜಿಗಳು ಇತ್ಯರ್ಥವಾಗಿದ್ದು, 12126 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ.

ಕಂದಾಯ ಇಲಾಖೆಗೆ ಅತಿ ಹೆಚ್ಚು ಅರ್ಜಿಗಳು

ಕಂದಾಯ ಇಲಾಖೆಗೆ ಅತಿ ಹೆಚ್ಚು ಅಂದರೆ 3150 ಅರ್ಜಿಗಳು ಸ್ವೀಕಾರವಾಗಿದ್ದರೆ, ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಒಂದು ಅರ್ಜಿ ಸ್ವೀಕಾರವಾಗಿದೆ. ವಸತಿ ಇಲಾಖೆಗೆ 1500 ಅರ್ಜಿಗಳು ಸ್ವೀಕಾರವಾಗಿ ಎರಡನೇ ಸ್ಥಾನದಲ್ಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 903 ಅರ್ಜಿಗಳು ಸಲ್ಲಿಕೆಯಾಗಿವೆ.

ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ, ಮುಖ್ಯ ಕಾರ್ಯದರ್ಶಿಗಳ ಕಾರ್ಯಾಲಯ,ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ( ಇ- ಆಡಳಿತ) ಮುಖ್ಯಮಂತ್ರಿಗಳ ಕಾರ್ಯಾಲಯ, ಸಂಸದೀಯ ವ್ಯವಹಾರಗಳ ಇಲಾಖೆ – ಈ ಐದು ಇಲಾಖೆಗಳಲ್ಲಿ ಯಾವುದೇ ಅರ್ಜಿ ಸ್ವೀಕೃತವಾಗಿಲ್ಲ.

ಬಾಕಿ ಅರ್ಜಿಗಳನ್ನು ಒಂದು ತಿಂಗಳೊಳಗೆ ಇತ್ಯರ್ಥಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸ್ಥಳದಲ್ಲೇ ಮೂವರ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಟ್ಟು 10 ಲಕ್ಷ ರೂ ಪರಿಹಾರ ಘೋಷೊಸಿದ ಸಿಎಂ

1. ರಾಮನಗರ ಜಿಲ್ಲೆಯ ವಿಜಯಕುಮಾರ್‌ ಬಿನ್‌ ನರಸಿಂಹಮೂರ್ತಿ ಎಂಬುವವರಿಗೆ ಕಿಡ್ನಿ ಕಸಿ ಚಿಕಿತ್ಸೆಗಾಗಿ 4 ಲಕ್ಷ ರೂ.ಗಳ ಧನಸಹಾಯವನ್ನು ಮುಖ್ಯಮಂತ್ರಿಗಳು ಸ್ಥಳದಲ್ಲಿಯೇ ಮಂಜೂರು ಮಾಡಿದರು.

2. ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಬಸನಗೌಡ ಬಿರಾದಾರ್‌ ಬೋನ್‌ ಮ್ಯಾರೋ ಕಸಿಗಾಗಿ 4 ಲಕ್ಷ ರೂ.ಗಳ ಧನಸಹಾಯವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸ್ಥಳದಲ್ಲಿಯೇ ಮಂಜೂರು ಮಾಡಿದರು.

3. ತುಮಕೂರು ಜಿಲ್ಲೆಯ 8 ವರ್ಷದ ಶಾಂಭವಿ ಎಂಬ ಮಗುವಿಗೆ ಶ್ರವಣ ಸಾಧನಕ್ಕಾಗಿ 50 ಸಾವಿರ ರೂ.ಗಳನ್ನು ಮುಖ್ಯಮಂತ್ರಿಗಳು ಸ್ಥಳದಲ್ಲಿಯೇ ಮಂಜೂರು ಮಾಡಿದರು.

ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ನಾಗರಾಜಯ್ಯ ಅವರು ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಶಿರಾಸಲ್ಲಿ ರೂಢಿದಾರಿಯನ್ನು ಕತ್ತರಿಸಿರುವುದರಿಂದ 5 ಕಿ.ಮೀ ಬಳಸಿಕೊಂಡು ಓಡಾಡಬೇಕಿದೆ. ಇದನ್ನು ಸರಿಪಡಿಸುವಂತೆ ಕೋರಿದರು. ಅರ್ಜಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಬೆಳಗಾವಿ ಜಿಲ್ಲೆಯ ಸುರೇಶ್ ತುಕಾರಾಂ ಫೋಂಡೆ ತಮ್ಮ ಜಮೀನಿನಲ್ಲಿ ದೀಪಕ್ ಪಾಟೀಲ್ ಎಂಬುವರು ಮಣ್ಣು ತೆಗೆಯುತ್ತಿದ್ದು ಕಳವು ಪ್ರಕರಣ ದಾಖಲಿಸಿಲ್ಲ ಎಂದು ದೂರಿದರು.

ಸ್ಥಳದಲ್ಲಿಯೇ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ಪ್ರಕರಣ ಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ದಯಾನಂದ್ ಅವರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸ್ಥಳದಲ್ಲಿಯೇ ಮಾತನಾಡಿ ಕ್ರಮ ವಹಿಸಿಲು ಸೂಚಿಸಿದರು.

1 ತಿಂಗಳೊಳಗೆ ‘ಜನಸ್ಪಂದನ’ ಅರ್ಜಿ, ಅಹವಾಲು ಬಗೆಹರಿಸಿ: ಅಧಿಕಾರಿಗಳಿಗೆ ‘ಸಿಎಂ ಸಿದ್ಧರಾಮಯ್ಯ’ ಡೆಡ್ ಲೈನ್

ಇಂದು ಜನಸ್ಪಂದನ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇಂದಿನ ಜನ ಸ್ಪಂದನೆಯಲ್ಲಿ 11 ಸಾವಿರ ಅರ್ಜಿಗಳು ಸ್ವೀಕೃತವಾಗಿವೆ. 20 ಸಾವಿರ ಮಂದಿ ಭಾಗಿ ಆಗಿದ್ದಾರೆ. ಆಯಾ ಜಿಲ್ಲೆಗೆ ಸಂಬಂಧಪಟ್ಟ ಅರ್ಜಿಗಳನ್ನು ಆಯಾ ಜಿಲ್ಲಾಧಿಕಾರಿಗಳು ಸಮಯ ಮಿತಿಯೊಳಗೆ ಬಗೆ ಹರಿಸುತ್ತಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅವರ ವ್ಯಾಪ್ತಿಯ ಅರ್ಜಿಗಳನ್ನು ಆದಷ್ಟು ಬೇಗ ಪರಿಹರಿಸಲು ಸೂಚನೆ ನೀಡಿದ್ದೇನೆ ಎಂದರು.

ಮೊದಲ ಜನ ಸ್ಪಂದನೆಯಲ್ಲಿ ಬಂದ ಅರ್ಜಿಗಳಲ್ಲಿ 98% ಪರಿಹಾರ ದೊರಕಿವೆ. ಈ ಬಾರಿಯೂ ಅಷ್ಟೇ ತ್ವರಿತವಾಗಿ ಪರಿಹಾರ ಒದಗಿಸಲು ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳು ಕೆಳ ಹಂತದಲ್ಲೇ ಸಮಸ್ಯೆ ಬಗೆಹರಿಸಿದರೆ ಬೆಂಗಳೂರಿಗೆ ಜನ ಬಂದು ಅರ್ಜಿ ಕೊಡುವ ಸಂದರ್ಭ ಉದ್ಭವಿಸುವುದಿಲ್ಲ. DC, CEO ಗಳ ಮೇಲೆ ಈ ಜವಾಬ್ದಾರಿ ಹೆಚ್ಚು ಎಂದು ಸೂಚಿಸಿದ್ದಾರೆ.

ಆಡಳಿತ ಜಡತ್ವದಿಂದ ಕೂಡಿರಬಾರದು. ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ಕೊಡ್ತೇನೆ. ನಿಮ್ಮ ಹಂತದಲ್ಲೇ ಸಮಸ್ಯೆ ಬಗೆಹರಿಸಿ ಎನ್ನುವ ಎಚ್ಚರಿಕೆ ಕೊಡುತ್ತೇನೆ. ಜನರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಅಂಥವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಒಂದು ತಿಂಗಳೊಳಗೆ ಹೆಚ್ಚು ಅರ್ಜಿ , ಅಹವಾಲು ಪರಿಗರಿಸಿ ಎಂದು DC, CEO ಮತ್ತು ಉಸ್ತುವಾರಿ ಕಾರ್ಯದರ್ಶಿಗಳಿಗೆ ಖಡಕ್ ಸೂಚನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡಿದ್ದಾರೆ.

ಅಂದಹಾಗೇ ಸಿಎಂ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತವಾದಂತ ಎಲ್ಲಾ ಅರ್ಜಿಗಳನ್ನೂ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.

BIGG NEWS: ಈ ರಾಜ್ಯದಲ್ಲಿ ‘ಜೈಲಿನಲ್ಲೇ ಇರುವಾಗಲೇ’ ಗರ್ಭಿಣಿಯಾಗುತ್ತಿದ್ದಾರೆ ಮಹಿಳೆಯರು!

BREAKING : ಅಮೆರಿಕದಲ್ಲಿ ಕಳೆದ 2 ವಾರಗಳಲ್ಲಿ ಭಾರತ ಮೂಲದ ಐವರು ಯುವಕರ ಸಾವು : ಕೇಂದ್ರ ಸರ್ಕಾರ ಕಳವಳ

Share. Facebook Twitter LinkedIn WhatsApp Email

Related Posts

BREAKING: ವಂಚನೆ ಆರೋಪಿ ಐಶ್ವರ್ಯ ಗೌಡಗೆ ‘ED’ ಬಿಗ್ ಶಾಕ್: 3.98 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

23/06/2025 5:31 PM1 Min Read

BREAKING: ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಕೇಸ್: CBI SPP ಹುದ್ದೆಗೆ ಗಂಗಾಧರ ಶೆಟ್ಟಿ ರಾಜೀನಾಮೆ

23/06/2025 5:27 PM1 Min Read

BREAKING: ವಂಚನೆ ಆರೋಪ: ಐಶ್ವರ್ಯಾಗೌಡಗೆ ಸಂಬಂಧಿಸಿದ 3.98 ಕೋಟಿ ಆಸ್ತಿ ಮುಟ್ಟುಗೋಲು ಹಾಕಿದ ED

23/06/2025 5:21 PM1 Min Read
Recent News

SHOCKING : ನಾಚಿಕೆಗೇಡು.! 60 ವರ್ಷದ ತನ್ನ ಅಜ್ಜಿಯನ್ನ ಕಸದ ಬುಟ್ಟಿಗೆ ಎಸೆದ ದುಷ್ಟ ‘ಮೊಮ್ಮಗ’

23/06/2025 5:39 PM

BREAKING: ವಂಚನೆ ಆರೋಪಿ ಐಶ್ವರ್ಯ ಗೌಡಗೆ ‘ED’ ಬಿಗ್ ಶಾಕ್: 3.98 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

23/06/2025 5:31 PM

BREAKING: ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಕೇಸ್: CBI SPP ಹುದ್ದೆಗೆ ಗಂಗಾಧರ ಶೆಟ್ಟಿ ರಾಜೀನಾಮೆ

23/06/2025 5:27 PM

BREAKING: ವಂಚನೆ ಆರೋಪ: ಐಶ್ವರ್ಯಾಗೌಡಗೆ ಸಂಬಂಧಿಸಿದ 3.98 ಕೋಟಿ ಆಸ್ತಿ ಮುಟ್ಟುಗೋಲು ಹಾಕಿದ ED

23/06/2025 5:21 PM
State News
KARNATAKA

BREAKING: ವಂಚನೆ ಆರೋಪಿ ಐಶ್ವರ್ಯ ಗೌಡಗೆ ‘ED’ ಬಿಗ್ ಶಾಕ್: 3.98 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

By kannadanewsnow0923/06/2025 5:31 PM KARNATAKA 1 Min Read

ಬೆಂಗಳೂರು: ವಂಚನೆ ಆರೋಪಿ ಐಶ್ವರ್ಯ ಗೌಡಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ಅವರಿಗೆ ಸೇರಿದ್ದಂತ 3.98 ಕೋಟಿ…

BREAKING: ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಕೇಸ್: CBI SPP ಹುದ್ದೆಗೆ ಗಂಗಾಧರ ಶೆಟ್ಟಿ ರಾಜೀನಾಮೆ

23/06/2025 5:27 PM

BREAKING: ವಂಚನೆ ಆರೋಪ: ಐಶ್ವರ್ಯಾಗೌಡಗೆ ಸಂಬಂಧಿಸಿದ 3.98 ಕೋಟಿ ಆಸ್ತಿ ಮುಟ್ಟುಗೋಲು ಹಾಕಿದ ED

23/06/2025 5:21 PM

ಬೆಂಗಳೂರಿನ ‘DC ಕಚೇರಿ’ಯಲ್ಲಿ ವ್ಯಕ್ತಿಯಿಂದ ಹೈಡ್ರಾಮಾ: ‘IAS ಅಧಿಕಾರಿ’ ಹೊಡೆಯಲು ಬಂದಿದ್ದಾಗಿ ಆರೋಪ

23/06/2025 5:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.