ಕೆಎನ್ ಎನ್ ನ್ಯೂಸ್ ಡೆಸ್ಕ್ : ಹೆಣ್ಣಾಗಲಿ, ಗಂಡಾಗಲಿ ಪ್ರತಿಯೊಬ್ಬರಿಗೂ ಒಂದೆಲ್ಲ ಬಂದು ಕನಸು ಇರುತ್ತದೆ. ಮದುವೆಯಾದ ಮೇಲೆ ಹೆಣ್ಣು ಮಕ್ಕಳು ತುಂಬಾ ಕನಸು ಕಂಡಿರುತ್ತಾರೆ. ನನ್ನ ಮದುವೆಯಾಗುವ ಗಂಡ ಹಾಗೆ ಇರುಬೇಕು. ಹೀಗೆ ಇರಬೇಕು ಎಂದುಕೊಂಡಿರುತ್ತಾರೆ. ಜೊತೆಗೆ ಗಂಡನ ಜೊತೆಗೆ ಸಾಮಾರಸ್ಯದಿಂದ ಸಮಯ ಕಳೆಯಬೇಕು ಎಂದುಕೊಂಡಿರುತ್ತಾರೆ.
ನವರಾತ್ರಿಯ ವಿಶೇಷತೆಯೇನು? ಘಟಸ್ಥಾಪನೆ ಯಾವಾಗ? ಘಟಸ್ಥಾಪನೆ ಹೇಗಿರಬೇಕು ? ಇಲ್ಲಿದೆ ಮಾಹಿತಿ
ಅದೇ ರೀತಿ ಗಂಡನಿಗೂ ಹೆಂಡತಿಯ ಜೊತೆ ಪ್ರೀತಿ ಭಾಂದ್ಯವದಿಂದ ಕಳೆಯಬೇಕು ಅನಿಸುತ್ತದೆ. ಆದರೆ ಮದುವೆಯಾದ ಮೇಲೆ ಕೆಲವರ ಅದೃಷ್ಟದಿಂದ ಚೆನ್ನಾಗಿರುತ್ತಾರೆ, ಇನ್ನೂ ಕೆಲವರ ಜೀವನ ಚೆನ್ನಾಗಿರಲಿಲ್ಲ. ಅದು ಒಂದು ಮನೆಯ ವಾಸ್ತುವಾಗಿರಬಹುದು. ಅದು ದೋಷವಿದ್ದರೆ ಇಬ್ಬರ ನಡುವೆ ಕಲಹ, ಮನಸ್ತಾಪ ತಂದುಬಿಡುತ್ತದೆ. ಇದಕ್ಕೆ ನಾನಾ ಕಾರಣಗಳಿರುತ್ತದೆ. ಆದರೆ ವಾಸ್ತುಶಾಸ್ತ್ರದಲ್ಲಿ ಪತಿ-ಪತ್ನಿ ಅನ್ಯೋನ್ಯವಾಗಿರಲು ಕೆಲವೊಂದು ಸಲಹೆಗಳನ್ನು ನೀಡಲಾಗಿದೆ.
ನವರಾತ್ರಿಯ ವಿಶೇಷತೆಯೇನು? ಘಟಸ್ಥಾಪನೆ ಯಾವಾಗ? ಘಟಸ್ಥಾಪನೆ ಹೇಗಿರಬೇಕು ? ಇಲ್ಲಿದೆ ಮಾಹಿತಿ
* ಮಲಗುವ ಕೋಣೆಯಲ್ಲಿ ಬಾಗಿಲಿನ ಪಕ್ಕದಲ್ಲಿ ಹಾಸಿಗೆ ಇದ್ದರೆ ದಾಂಪತ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಈ ವಿಷಯವನ್ನು ಪರಿಶೀಲಿಸಿ ಸರಿ ಮಾಡಿಕೊಳ್ಳವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ.
* ರೂಮ್ ನಲ್ಲಿ ಕಿಟಕಿಯನ್ನ ತೆರೆದಿಡಬೇಕು. ಕೋಣೆಗಳಿಗೆ ಬೆಳಕನ್ನು ಕೊಡುತ್ತದೆ.
ಹೀಗಿದ್ದಾಗ ದಾಂಪತ್ಯದಲ್ಲಿ ಸುಖವನ್ನು ತರುತ್ತದೆ. ಮಲಗುವ ಕೋಣೆಯ ಕಿಟಕಿಯಿಂದ ಉತ್ತಮ ಬೆಳಕು ಬರುವಂತೆ ನೋಡಿಕೊಳ್ಳಬೇಕು.
* ವೈವಾಹಿಕ ಸಂಬಂಧಗಳನ್ನು ಸುಧಾರಿಸಲು ಮಲಗುವ ಕೋಣೆಯಲ್ಲಿ ಒಂದಕ್ಕಿಂತ ಹೆಚ್ಚು ಸಸ್ಯಗಳನ್ನು ಇಡಲು ಸೂಚಿಸಲಾಗಿದೆ. ಮಲಗುವ ಕೋಣೆಯಲ್ಲಿ ಲ್ಯಾವೆಂಡರ್ ಅಥವಾ ಲಿಲ್ಲಿ ಹೂವಿನ ಗಿಡವನ್ನು ಇರಿಸಬೇಕು. ಇದರಿಂದ ದಾಂಪತ್ಯದ ಸುಖ ಹೆಚ್ಚಾಗುತ್ತದೆ.
*ಪತಿ ಮತ್ತು ಪತ್ನಿ ಈಶಾನ್ಯ ದಿಕ್ಕಿನಲ್ಲಿ ಮಲಗುವುದನ್ನು ತಪ್ಪಿಸಿ. ಈ ದಿಕ್ಕಿನಲ್ಲಿ ಮಲಗಿದರೆ ದಂಪತಿಗಳಲ್ಲಿ ಕಲಹ , ಅನುಮಾನ ಹೆಚ್ಚಾಗುವ ಸಾಧ್ಯತೆ ಇದೆ.
* ನೀವು ಮಲಗುವ ಕೋಣೆಯಲ್ಲಿ ಕನ್ನಡಿ ಇದ್ದರೆ ಕೂಡಲೇ ಅದನ್ನು ಸ್ಥಳಾಂತರಿಸಿ, ಏಕೆಂದರೆ ಮಲಗುವ ಕೋಣೆಯಲ್ಲಿ ಕನ್ನಡಿ ಇದ್ದರೆ ಅದು ವಿರುದ್ಧ ಶಕ್ತಿಗಳನ್ನು ಪ್ರತಿಬಿಂಬಿಸುತ್ತದೆ.