ರಾಂಚಿ: ಜೆಎಂಎಂ ನಾಯಕ ಹೇಮಂತ್ ಸೊರೇನ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ನವೆಂಬರ್.26ರಂದು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಅವರು ಸ್ವೀಕರಿಸಲಿದ್ದಾರೆ ಅಂತ ಮೂಲಗಳು ತಿಳಿಸಿವೆ.
ಈ ಬಗ್ಗೆ ಎನ್ ಡಿಟಿವಿ ವರದಿ ಮಾಡಿದ್ದು, ಇಂದು ಹೇಮಂತ್ ಸೊರೇನ್ ಅವರು ರಾಜ್ಯಪಾಲ ಸಂತೋಷ್ ಗಂಗ್ವಾರ್ ಅವರನ್ನು ಭೇಟಿ ಮಾಡಿ, ತಮ್ಮ ಸರ್ಕಾರ ರಚನೆಯ ಹಕ್ಕು ಮಾಡಿಸೋದಾಗಿ ತಿಳಿದು ಬಂದಿದೆ.
ಅಂದಹಾಗೆ ನವೆಂಬರ್.13 ಮತ್ತು 20ರಂದು ಜಾರ್ಖಂಡ್ ವಿಧಾನಸಭೆಗೆ ಚುನಾವಣೆ ನಡೆದಿತ್ತು. ನವೆಂಬರ್.23ರಂದು ಮತಏಣಿಕೆ ನಡೆದು, ಫಲಿತಾಂಶ ಹೊರಬಿದ್ದಿತ್ತು. ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟವು 81 ಸ್ಥಾನಗಳ ಪೈಕಿ 56 ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಜೆಎಂಎಂ 34 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದರೇ, ಇಂಡಿಯಾ ಮೈತ್ರಿ ಕೂಟದ ಮಿತ್ರಪಕ್ಷಗಳಾದಂತ ಕಾಂಗ್ರೆಸ್ ಹಾಗೂ ಆರ್ ಜೆಡಿ ಕ್ರಮವಾಗಿ 16 ಮತ್ತು 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು.
ಚಳಿಗಾಲದಲ್ಲಿ ‘ನೆಲ್ಲಿಕಾಯಿ’ಯನ್ನು ಹೆಚ್ಚಾಗಿ ಸೇವಿಸಿ, ಈ ಪ್ರಯೋಜನ ಪಡೆಯಿರಿ | Amla Eating Benefits
BREAKING : ಬೆಂಗಳೂರಿನ ಬಸವನಗುಡಿಯಲ್ಲಿ ‘ಕಡಲೆಕಾಯಿ ಪರೀಷೆ’ ಆರಂಭ : ಹರಿದು ಬಂದ ಜನಸ್ತೋಮ