ಶಿವಮೊಗ್ಗ: ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಗ್ಗಿಗೆ ಕಾರು ಇಳಿದ್ದನ್ನು ಕಂಡ ಗೃಹ ಸಚಿವ ಕೂಡಲೇ ತಮ್ಮ ಕಾರನ್ನು ನಿಲ್ಲಿಸಿದ ಅಪಘಾತಗೊಂಡ ಕಾರನ್ನು ಮೇಲೆತ್ತುವಲ್ಲಿ ನೆರವಿಗೆ ನಿಂತು ಮಾನವೀಯತೆ ಮೆರೆದರು .
ಗೃಹ ಸಚಿವರು ಶಿವಮೊಗ್ಗಕ್ಕೆ ಬರುತ್ತಿದ್ದಾಗ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಗ್ರಾಮದ ಬಳಿ ಶಿವಮೊಗ್ಗದಿಂದ ಕಾರ್ಕಳಕ್ಕೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಗ್ಗಿಗೆ ಇಳಿದಿತ್ತು.
ಈ ಸಂದರ್ಬದಲ್ಲಿ ಕಾರನ್ನು ಮೇಲೆ ಎತ್ತೋದಕ್ಕೆ ಚಾಲಕ ಹರಸಾಹಸ ಪಡುತ್ತಿದ್ದನ್ನು ಈ ಘಟನೆಯನ್ನು ಕಂಡ ಗೃಹ ಸಚಿವ ಕೂಡಲೇ ತಮ್ಮ ಕಾರನ್ನು ರಸ್ತೆ ಬದಿಯಲ್ಲೇ ನಿಲ್ಲಿಸಿ ಸಹಾಯಕ್ಕೆ ಮುಂದಾಗಿದ್ದಾರೆ.
ಅಪಘಾತಗೊಂಡ ಕಾರಿನಲ್ಲಿದ್ದವರಿಗೆ ಗಾಯ ಸಂಭವಿಸಿಲ್ಲ. ಶಿವಮೊಗ್ಗದ ವಿದ್ಯಾರ್ಥಿ ಪರೀಕ್ಷೆ ಬರೆಯಲು ಕಾರ್ಕಳಕ್ಕೆ ಹೊರಟಿದ್ದರು. ಈ ಸಂರ್ಭದಲ್ಲಿ ಈ ಘಟನೆ ನಡೆದಿದೆ ವಿಚಾರ ತಿಳಿದು ಅರಗ ಜ್ಙಾನೇಂದ್ರ ಅವರು ವಿದ್ಯಾರ್ಥಿಯೊಂದಿಗೆ ಮಾತನಾಡಿ, ಅಶುಭ ಎಂದು ಹೇಳುತ್ತ ಮಾತನಾಡಿ ಮುಂದೆ ಸಂಚಾರ ಮಾಡಿದರು.