ಕೋಲಾರ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯಲ್ಲಿ ವಾಯುಭಾರ ಕುಸಿತದಿಂದ ಪರಿಣಾಮವಾಗಿ ಕೋಲಾರದಲ್ಲಿ ಭಾರಿ ಗಾಳಿ ಸಮೇತ ವರುಣನ ಆರ್ಭಟ ಜೋರಾಗಿದೆ.
BIGG NEWS: ಮಂಡ್ಯದಲ್ಲಿ ಆಟೋ ಕಳ್ಳರ ಅರೆಸ್ಟ್; 15 ಲಕ್ಷ ರೂ ಮೌಲ್ಯದ ಆಟೋ, ಬೈಕ್ ವಶ
ಬಿರುಗಾಳಿ ಮಳೆಗೆ ಹಲವು ಕಡೆ ಮರಗಳು ಧರೆಗೆ ಉರುಳಿದಿದ್ದು, ಕೆಲವು ಕಡೆ ಕಾರುಗಳು ಮೇಲೆ ಮರಗಳನ್ನು ಧರೆಗೆ ಉರುಳಿದೆ. ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಹಲವು ಬಡಾವಣೆಗಳು ಜಲಾವೃತಗೊಂಡಿದೆ. ನಿವಾಸಿಗಳು ನೀರು ಹೊರಹಾಕಲು ಪರದಾಡುತ್ತಿದ್ದಾರೆ.
ಅತಿವೃಷ್ಠಿಯಿಂದ ಲಕ್ಷ್ಮೀಪುರಂ, ರಾಮಾನುಜ ವೃತ್ತ, ಜೈಭೀಮ್ ನಗರ ಕಾಲೋನಿ ಜಲಾವೃತಗೊಂಡಿದೆ. ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಭೂಮನ ಕರುಣಾಕರ ರೆಡ್ಡಿ ಭೇಟಿ ನೀಡಿದ್ದಾರೆ.
BIGG NEWS: ಮಂಡ್ಯದಲ್ಲಿ ಆಟೋ ಕಳ್ಳರ ಅರೆಸ್ಟ್; 15 ಲಕ್ಷ ರೂ ಮೌಲ್ಯದ ಆಟೋ, ಬೈಕ್ ವಶ
ಕೋಲಾರದಲ್ಲಿ ಮಳೆಯಾ ಆರ್ಭಟ ಮುಂದುವೆರೆದಿದೆ. ಜಿಲ್ಲೆಯಲ್ಲಿ ಗಾಳಿ ಸಹಿತ ಜೋರು ಮಳೆ ಸುರಿಯುತ್ತಿದೆ. ಹೀಗಾಗಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ನೀಡಲಾಗಿದೆ.ಇನ್ನು ಬೆಂಗಳೂರಿನಲ್ಲಿ ಚಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆಯೇ ಮತ್ತೆ ಮಳೆಯ ಕಾಟ ಶುರುವಾಗಿದೆ. ಇದರ ಜೊತೆಗೆ ವಿಪರೀತ ಚಳಿ ಇದ್ದು, ಬೆಳ್ಳಂಬೆಳಗ್ಗೆ ಭಾರಿ ಗಾಳಿ- ಮಳೆ ಸುರಿಯುತ್ತಿದೆ. ಮಾಂಡೋಸ್ ಚಂಡಮಾರುತ ಪರಿಣಾಮದಿಂದಾಗಿ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ.ಇನ್ನು ರಾಜ್ಯದಲ್ಲಿ ನಾಲ್ಕು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.