ಕೊಡಗು : ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಇದೀಗ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು ಮಡಿಕೇರಿ ತಾಲೂಕಿನ ದೋಣಿ ಕಡೂರು ಗ್ರಾಮ ಸಂಪೂರ್ಣವಾಗಿ ಜಲಪ್ರತವಾಗಿದೆ. ಅಲ್ಲದೆ 60 ಕುಟುಂಬಗಳು ಜಲ ದಿಗ್ಬಂಧನಕ್ಕೆ ಒಳಗಾಗಿವೆ.
ಹೌದು ಮಡಿಕೇರಿಯಲ್ಲಿ ಬೇಂಗೂರು ಪರಂಬು ಪೈಸಾರಿ ಸಂಪರ್ಕ ಕಡಿತವಾಗಿದ್ದು, ಸುಮಾರು 60ಕ್ಕೂ ಅಧಿಕ ಕುಟುಂಬಗಳಿಗೆ ಜಲ ದಿಗ್ಬಂಧನವಾಗಿದೆ. ಪ್ರವಾಹ ದಾಟಲು ಮೋಟಾರ್ ಬೋಟ್ ವ್ಯವಸ್ಥೆ ಮಾಡಲಾಗಿದೆ. ಜನರ ಸಂಕಷ್ಟಕ್ಕೆ ಜಿಲ್ಲಾಡಳಿತ ತ್ವರಿತವಾಗಿ ಸ್ಪಂದಿಸಿದ್ದು ಫೈಬರ್ ಬೋಟ್ ರವಾನೆ ಮಾಡಿದ್ದು ಜಲಾವೃತವಾಗಿರುವ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ.








