ಬೆಂಗಳೂರು: ನಗರದಲ್ಲಿ ವರುಣನ ಆರ್ಭಟ ಜೋರಾಗಿದೆ. ಬೆಂಗಳೂರಿನ ಹಲವೆಡೆ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಸಂಚಾರ ವ್ಯತ್ಯಯ ಉಂಟಾಗಿದೆ. ಟ್ರಾಫಿಕ್ ಜಾಮ್ ಅಲ್ಲಲ್ಲಿ ಉಂಟಾದ ಪರಿಣಾಮ, ವಾಹನ ಸವಾರರು ಪರದಾಡುತ್ತಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಹಲವೆಡೆ ಮಳೆ ಆರಂಭಗೊಂಡಿದೆ. ನಗರದ ಮೆಜೆಸ್ಟಿಕ್, ಹೆಚ್ಎಎಲ್, ದೊಡ್ಡನೆಕ್ಕುಂದಿ, ಮಾರತಹಳ್ಳಿ, ಕುಂದ್ಲಹಳ್ಳಿ, ಮುರುಗೇಶ ಪಾಳ್ಯ, ದೊಮ್ಮಲೂರು, ಸಿವಿ ರಾಮನ್ ನಗರ, ಈಜಿಪುರ, ಶಾಂತಿನಗರ, ವಿಜಯನಗರದಲ್ಲಿ ಭಾರೀ ಮಳೆಯಾಗುತ್ತಿದೆ.
ಇದಲ್ಲದೇ ಜಯನಗರ, ಕೆ ಆರ್ ಮಾರ್ಕೆಟ್, ಬನಶಂಕರಿ, ಕಾರ್ಪೊರೇಷನ್, ಮೈಸೂರು ಬ್ಯಾಂಕ್ ಸರ್ಕಲ್, ವಿಧಾನಸೌಧ ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ. ಮಳೆಯಿಂದಾಗಿ ರಸ್ತೆಗೆ ನೀರು ನುಗ್ಗಿದ ಪರಿಣಾಮ ಸಂಚಾರ ವ್ಯತ್ಯಯ ಉಂಟಾಗಿದೆ.
ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಮಳೆಯಲ್ಲಿ ನೆನೆದುಕೊಂಡೇ ಬೈಕ್ ಸವಾರರು ತೆರಳುತ್ತಿರುವುದು ಅಲ್ಲಲ್ಲಿ ಕಂಡು ಬಂದಿದೆ.
Good News: ‘ಅಂತಾರಾಷ್ಟ್ರೀಯ ಕ್ರೀಡಾಪಟು’ಗಳಿಗೆ ರಾಜ್ಯ ಸರ್ಕಾರದಿಂದ ‘ಸರ್ಕಾರಿ ನೌಕರಿ’ ಭಾಗ್ಯ
ಬೆಂಗಳೂರಲ್ಲಿ 2ನೇ ವಿಮಾನ ನಿಲ್ದಾಣ ಫಿಕ್ಸ್: ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ