ಬೆಂಗಳೂರು : ಕಳೆದ ವರ್ಷದಿಂದಲೂ ಮಳೆ ಬಾರದೆ ರೈತರು ಸೇರಿದಂತೆ ಇಡೀ ರಾಜ್ಯದ ಜನತೆ ತೀವ್ರವಾದ ಸಂಕಷ್ಟವನ್ನು ಎದುರಿಸಿದ್ದರು. ಇದೀಗ ರಾಜ್ಯದ ಹಲವಡೆ ಭಾರಿ ಮಳೆ ಆಗುತ್ತಿದ್ದು ಬಿಸಿಲಿನಿಂದ ಬಸವಾಳದಿದ್ದ ಜನತೆಗೆ ಇದೀಗ ವರುಣ ಕೃಪೆ ತೋರಿ, ತಂಪೆರಿದಿದ್ದಾನೆ.
ಅದೇ ರೀತಿಯಾಗಿ ಇಂದು ಬೆಂಗರಲ್ಲೂ ಕೂಡ ವರ್ಷದ ಮೊದಲ ಮಳೆಯಾಗಿದ್ದು, ಬೆಂಗಳೂರು ಮಹಾನಗರದಲ್ಲಿ ಹಲವಡೆ ಭಾರಿ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ಇದೀಗ ವರುಣ ತಂಪೆರಡಿದ್ದಾನೆ. ಕೆಂಗೇರಿ, ಕುಂಬಳಗೋಡು ಸುತ್ತಮುತ್ತ ವರ್ಷಧಾರೆಯಾಗಿದ್ದು, ಯಲಹಂಕ ಸುತ್ತಮುತ್ತ ಕೂಡ ಭಾರಿ ಮಳೆ ಆಗಿರುವುದರಿಂದ ಜನರ ಮುಖದಲ್ಲಿ ಸಂತಸ ಮೂಡಿಸಿದೆ.