ನವದೆಹಲಿ : ಮುಂದಿನ 4-5 ದಿನಗಳಲ್ಲಿ ಉತ್ತರಾಖಂಡ, ಉತ್ತರ ಪ್ರದೇಶ, ಪಶ್ಚಿಮ ಮಧ್ಯಪ್ರದೇಶ ಮತ್ತು ಪೂರ್ವ ರಾಜಸ್ಥಾನದಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ತಮಿಳುನಾಡು, ಕರ್ನಾಟಕ, ಕರಾವಳಿ ಆಂಧ್ರಪ್ರದೇಶ ಮತ್ತು ರಾಯಲಸೀಮಾ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಸಹ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದೇಳಿದೆ.
ಮುಂದಿನ ಎರಡು ದಿನಗಳ ಕಾಲ ಮುಂಬೈ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಾದ ಥಾಣೆ, ಪಾಲ್ಘರ್ ಮತ್ತು ಕೊಂಕಣ ಪ್ರದೇಶಗಳಿಗೆ ‘ಹಳದಿ ಅಲರ್ಟ್’ ಘೋಷಿಸಲಾಗಿದೆ.
- ಅ.7 ರಿಂದ 11 ಅಕ್ಟೋಬರ್ ವರೆಗೆ ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಅ 8 & 9 ರಂದು ಹರಿಯಾಣ, ಅ 7 ರಿಂದ 9 ರ ಅವಧಿಯಲ್ಲಿ ಪೂರ್ವ ರಾಜಸ್ಥಾನ ಮತ್ತು 7 ರಿಂದ 10 ರವರೆಗೆ ಪಶ್ಚಿಮ ಮಧ್ಯಪ್ರದೇಶ; ಅಕ್ಟೋಬರ್ 7 ಮತ್ತು 11 ರಂದು ಪೂರ್ವ ಮಧ್ಯಪ್ರದೇಶದಲ್ಲಿ ಮಳೆಯಾಗಲಿದೆ.
- ಅ.07 ರಿಂದ 09 ರವರೆಗೆ ಉತ್ತರಾಖಂಡ ಮತ್ತು ಪಶ್ಚಿಮ ಉತ್ತರ ಪ್ರದೇಶದ ಮೇಲೆ ಪ್ರತ್ಯೇಕವಾದ ಭಾರೀ ಮಳೆಯಾಗುವ ಸಾಧ್ಯತೆಯಿದೆ.
- ಗುಜರಾತಿನ ಪ್ರದೇಶದಲ್ಲಿ ಮಧ್ಯಮ ಪ್ರಮಾಣದಲ್ಲಿ ಮಳೆಯಾಗಲಿದೆ. ಅ. 07ನೇ-10ನೇ ಮಧ್ಯ ಮಹಾರಾಷ್ಟ್ರ ಮತ್ತು ಕರಾವಳಿ ಆಂಧ್ರಪ್ರದೇಶ ಮತ್ತು ಅ 07 ರಂದು ಕೊಂಕಣ ಮತ್ತು ಗೋವಾ ಮತ್ತು ತೆಲಂಗಾಣ ಹಾಗೂ ರಾಯಲಸೀಮಾ ಮತ್ತು ತಮಿಳುನಾಡು, ಪುದುಚೇರಿ & ಕಾರೈಕಲ್ ,ಕರ್ನಾಟಕ, ಕೇರಳಲ್ಲಿ ಅಕ್ಟೋಬರ್ 9 ಮತ್ತು 10 ರಂದು ಮಳೆಯಾಗಲಿದೆ.
- ಅ.07 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ಮಳೆ ಬೀಳುವ ಸಾಧ್ಯತೆಯಿದೆ. ಅ.8 ಮತ್ತು 9 ರಂದು ಉಪ-ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ. ಅ. 9 ಮತ್ತು 10 ರಂದು ಒಡಿಶಾ, ಅಕ್ಟೋಬರ್ 11 ರಂದು ಬಿಹಾರದಲ್ಲಿ ಮಳೆಯಾಗಲಿದೆ.
- ಅ.7ನೇ-11ನೇ ಅವಧಿಯಲ್ಲಿ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಮತ್ತು ಮೇಘಾಲಯದಲ್ಲಿ ಮತ್ತು ಅಕ್ಟೋಬರ್ 10 ಮತ್ತು 11ರಂದು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಸಾಕಷ್ಟು ಮಳೆಯಾಗಲಿದೆ.
BREAKING: ಶೀಘ್ರವೇ RBIನಿಂದ ಸೀಮಿತ ಬಳಕೆಗೆ ಪ್ರಾಯೋಗಿಕವಾಗಿ ‘ಇ-ರೂಪಾಯಿ’ ಬಿಡುಗಡೆ | RBI to soon launch e-rupee