ಧಾರವಾಡ : ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತಿದ್ದಂತೆ ಆಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮಕ್ಕೆ ಸಂಪರ್ಕ ಕಳೆದುಕೊಳ್ಳುವ ಭೀತಿಯಲ್ಲಿ ಹೆಚ್ಚಾಗಿದೆ.
ಕಂಬಾರ ಗಣವಿ ಗ್ರಾಮಕ್ಕೆ ಸಂಪರ್ಕ ಮಾಡೋದಕ್ಕೆ ಇರೋದು ಇದೊಂದೆ ಏಕೈಕ ಮಾರ್ಗ ಆಗಿತ್ತು. ಮಳೆಯ ಆರ್ಭಟದಿಂದ ಅಕ್ಕಪಕ್ಕ ಗುಡ್ಡಗಳಿಂದ ಹರಿದು ಬರುತ್ತಿರುವ ನೀರು ಸೇತುವೆ ಮೇಲೆ ರಭಸವಾಗಿ ಹರಿಯುತ್ತಿದೆ.
ಹಾಗಾಗಿ ಕುಂಬಾರಗಣವಿಗೆ ಬಸ್ ಸಂಚಾರ ಸ್ಥಗಿತ ಮಾಡಲಾಗಿದ್ದು, ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣ ಉಂಟಾಗಿದೆ. ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.