ನವದೆಹಲಿ: ನಗರದಲ್ಲಿ ಇಷ್ಟು ದಿನ ಬಿಸಿಗಾಳಿಯಿಂದ ಹೈರಾಣಾಗಿದ್ದ ಜನರು ಇಂದು ನಿಟ್ಟುಸಿರುಬಿಟ್ಟಿದ್ದಾರೆ. ಯಾಕೆಂದರೆ ನಗರದ ಸುತ್ತಮುತ್ತ ಇಂದು ಬೆಳ್ಳಂಬೆಳ್ಳಗೆ ಮಳೆಯಾಗಿದೆ. ದೆಹಲಿಯ ಎನ್ ಸಿಆರ್ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ.
#WATCH | Delhi witnesses rainfall in several parts of the national capital. Visuals from Krishi Bhavan pic.twitter.com/tibB78vccN
— ANI (@ANI) July 12, 2022
ಇದಲ್ಲದೆ, ಮುಂದಿನ ಎರಡು ಗಂಟೆಗಳಲ್ಲಿ ಉತ್ತರ ಪ್ರದೇಶ ಮತ್ತು ಹರಿಯಾಣದ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.ಇನ್ನು ಮುಂಬೈ ಮತ್ತು ಅದರ ನೆರೆಹೊರೆಯ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ, ಹವಾಮಾನ ಇಲಾಖೆ ನಗರಕ್ಕೆ ಆರೆಂಜ್ ಅಲರ್ಟ್ ಘೋಷಿಸಿದೆ.