ಉಡುಪಿ : ರಾಜ್ಯಾದ್ಯಂತ ಗ್ಯಾಸ್ ಸಿಲಿಂಡರ್ ಸಮಸ್ಯೆ ಎದುರಾಗಿದ್ದು ಜನರು ಹಾಗೂ ಆಟೋ ಚಾಲಕರು ಸಿಲಿಂಡರ್ ನಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ಗ್ಯಾಸ್ ಸಿಲಿಂಡರ್ otp ಇಂದ ಒಂದು ವೃದ್ಧನ ಜೀವ ಇದೀಗ ಬದುಕಿಸಿದೆ. ಬಾವಿಗೆ ಬಿದ್ದಂತಹ ವೃದ್ಧನನ್ನ ಗ್ಯಾಸ್ ಎಜೇನ್ಸಿ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಉಡುಪಿ ನಗರದ ಕೊಡವುರು ವಾರ್ಡ್ನಲ್ಲಿ ಒಂದು ಘಟನೆ ನಡೆದಿದೆ. ಕೊಡವು ರು ವಾರ್ಡ್ ಕಂಬ್ಳಕಟ್ಟದಲ್ಲಿ ಈ ಒಂದು ಅಪರೂಪದ ಘಟನೆ ನಡೆದಿದೆ.
ಹೌದು ಗ್ಯಾಸ್ ಏಜೆನ್ಸಿಯ ಸಿಬ್ಬಂದಿ ಶ್ರೀನಿವಾಸ್ ಆಚಾರ ಎನ್ನುವವರ ಜೀವವನ್ನು ಉಳಿಸಿದ್ದಾರೆ. 15 ರಿಂದ 20 ಅಡಿ ಬಾವಿಯಲ್ಲಿ ಶ್ರೀನಿವಾಸ್ ಆಚಾರಿ ಅವರು ಬಿದ್ದಿರುತ್ತಾರೆ. ಸಿಂಗಲ್ ಸಿಲಿಂಡರ್ ಹೊಂದಿರುವಂತಹ ಶ್ರೀನಿವಾಸ್ ಆಚಾರ್ಯ ಅವರು ನಿರ್ಜನ ಪ್ರದೇಶದ ಮನೆಯಲ್ಲಿ ವಾಸಿಸುತ್ತಾರೆ. ಬಾವಿಗೆ ಹಾಕಿದಂತಹ ಪಂಪ್ ನಲ್ಲಿ ಇರುವ ಕಸ ಕ್ಲೀನಿಂಗ್ ಮಾಡುವ ಪ್ರಯತ್ನ ಮಾಡುತ್ತಾರೆ. ಈ ವೇಳೆ ಬಾವಿಯಲ್ಲಿ ಬೀಳುತ್ತಾರೆ.
ಮನೇಲಿ ಒಬ್ಬರೇ ಇರುವುದರಿಂದ ಯಾರೂ ಕೂಡ ಇರುವುದಿಲ್ಲ. ಎಷ್ಟೇ ಕೂಗಿದರು ಸುತ್ತಲೂ ಯಾರು ಇರುವುದಿಲ್ಲ. ಬಾವಿಯಲ್ಲಿ ಪೈಪ್ ಹಿಡಿದುಕೊಂಡೆ ಶ್ರೀನಿವಾಸ ಆಚಾರ್ಯ ಕುಳಿತಿರುತ್ತಾರೆ. ಈ ವೇಳೆ ಮನೆಗೆ ಬಂದ ಗ್ಯಾಸ್ ಏಜೆನ್ಸಿ ಸಿಬ್ಬಂದಿ, ಅದನ್ನು ಗಮನಿಸುತ್ತಾರೆ ತಕ್ಷಣ ವೃದ್ಧರನ್ನು ಬಾವಿಯಿಂದ ಮೇಲಕ್ಕೆ ಎತ್ತಿ ರಕ್ಷಣೆ ಮಾಡುತ್ತಾರೆ.








