ದಾವಣಗೆರೆ : ಕಳೆದ 10 ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಒಂದಲ್ಲ ಒಂದು ಅನಾಹುತ ಸೃಷ್ಠಿಯಾಗ್ತಿದೆ. ಈ ಬೆನ್ನಲ್ಲೇ ಇದೀಗ ದಾವಣಗೆರೆಯ ಬಳಿಯಿರುವ ತುಂಗಭದ್ರಾ ನದಿಯ ನೀರಿನ ಹರಿವು ಹೆಚ್ಚಾಗಿದೆ.
ಹರಿಹರ ಗಂಗಾನಗರದ 15ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ. ನದಿ ಪಕ್ಕದ ಜನರ ಮನೆಯಲ್ಲಿದ್ದ ವಸ್ತುಗಳು ನೀರು ಪಾಲಾಗಿದ್ದು. ಅಲ್ಲೇ ಬಿಟ್ಟುಬರುವಂತಾಗಿದೆ. ಗಂಜಿ ಕೇಂದ್ರದಲ್ಲಿ ಊಟ ಕೊಡ್ತಿದ್ದಾರೆ. ನಮ್ಮ ಮಕ್ಕಳು ಊಟ ಮಾಡಿ ಮನೆ ಬಳಿ ಬಿಡುತ್ತಿದ್ದಾರೆ. ಅದರೆ ಉಳಿದುಕೊಳ್ಳೋದಕ್ಕೆ ಅಗುತ್ತಿಲ್ಲ ಇದಕ್ಕೆ ಶಾಶ್ವತ ಪರಿಹಾರ ನೀಡಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.