ಬೆಂಗಳೂರು : ಬೆಂಗಳೂರಲ್ಲಿ ಬಿಸಿಲಿನಿಂದ ಕಂಗೆಟ್ಟ ಜನರಿಗೆ ಇದೀಗ ವರುಣ ತಂಪೆರೆದಿದ್ದಾನೆ. ಮೊನ್ನೆಯಷ್ಟೇ ಸಾಕಷ್ಟು ಮಳೆಯಾಗಿ ಅವಾಂತರ ಸೃಷ್ಟಿಯಾಗಿದ್ದು ಇದೀಗ ಬೆಂಗಳೂರಿನಲ್ಲಿ ಟೌನ್ ಹಾಲ್ ಬಳಿ ಭಾರಿ ಮಳೆಯಾಗಿದ್ದು ಸಂಜೆ ಆಫೀಸ್ ಮುಗಿಸಿಕೊಂಡು ಹೋಗುವಂತಹ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಹೌದು ಇಂದು ಬೆಂಗಳೂರಿನಲ್ಲಿ ಬಿರುಗಾಳಿ ಹಾಗೂ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಸಂಜೆ ಕೆಲಸ ಮುಗಿಸಿ ಮನೆಗೆ ಹೊರಟ ವಾಹನ ಸವಾರರು ರಸ್ತೆಯಲ್ಲಿ ಧಾರಾಕಾರ ಮಳೆಯಿಂದ ಪರದಾಟ ನಡೆಸಿದರು. ಕಾರ್ಪೊರೇಷನ್ ವಿಧಾನಸೌಧ ಸುತ್ತಲೂ ಧಾರಾಕಾರ ಮಳೆಯಾಗಿದೆ.
ಭಾರಿ ಮಳೆಯಾಗಿದ್ದರಿಂದ ಕಾರ್ಪೊರೇಷನ್ ಸುತ್ತಮುತ್ತಲು ಸಂಚಾರ ದಟ್ಟಣೆ ಉಂಟಾಗಿದೆ. ಮಡಿವಾಳ ಅಡಗೋಡಿಯಲ್ಲಿ ತುಂತುರು ಮಳೆಯಾಗಿದೆ.11ನೇ ತಾರೀಖಿನವರೆಗೆ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆಯು ಇಂದು ಅಥವಾ ನಾಳೆ ಎಲ್ಲೋ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಎಂ ಜಿ ರಸ್ತೆ ಗುಟ್ಟಹಳ್ಳಿ ಕೆ ಆರ್ ಸರ್ಕಲ್ ಯಲಹಂಕ ಪರೀಕ್ಷೆ ಮಂಡ್ ಟೌನ್ ಮಡಿವಾಳ ಸದಾಶಿವನಗರ್ ಹೆಬ್ಬಾಳ ಅರಮನೆ ಮೈದಾನ ಮಲ್ಲೇಶ್ವರಂ ಶಿವಾನಂದ ವೃತ್ತ ಮಂತ್ರಿ ಮಾಲ್ ರೇಸ್ ಕೋರ್ಸ್ ರಸ್ತೆ ಆನಂದ ರಾವ್ ಸರ್ಕಲ್ ನೆಲಮಂಗಲ ಸೇರಿದಂತೆ ಹಲವಡೆ ಭಾರಿ ಮಳೆಯಾಗಿದೆ.