ಬೆಂಗಳೂರು: ನಗರದಲ್ಲಿ ಇಂದು ಬಿಸಿಲ ಬೇಗೆಯಿಂದ ತತ್ತರಿಸಿದ್ದಂತ ಜನರಿಗೆ ತಂಪು ಎನ್ನುವಂತೆ ಆಲಿಕಲ್ಲು ಸಹಿತ ಭಾರೀ ಮಳೆ ಹಲವೆಡೆಯಾಗುತ್ತಿದೆ. ಹೀಗಾಗಿ ಅಲ್ಲಲ್ಲಿ ಸಂಚಾರ ದಟ್ಟಣೆ ಕೂಡ ಉಂಟಾಗಿದೆ.
ಬೆಂಗಳೂರಿನ ಸಂಜಯನಗರ, ಭೂಪಸಂದ್ರ, ಹೆಬ್ಬಾಳ, ಮೇಖ್ರಿ ಸರ್ಕಲ್ ಸೇರಿದಂತೆ ಹಲವೆಡೆ ದಿಢೀರ್ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಮಳೆಯಿಂದಾಗಿ ವಾಹನ ಸವಾರರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮೆಜೆಸ್ಟಿಕ್, ಶಾಂತಿನಗರ, ಕೆ ಆರ್ ಮಾರ್ಕೆಟ್, ಹಲಸೂರು, ಜಯನಗರ ಸೇರಿದಂತೆ ವಿವಿಧೆಡೆ ಮಳೆಯಾಗಿತ್ತು. ಭಾರೀ ಮಳೆಯಿಂದಾಗಿ ಬೆಂಗಳೂರು ಜನತೆ ಬಿಸಿಲಿನ ಝಳಕ್ಕೆ ತಂಪನ್ನು ಎರೆಯಲಾಗಿತ್ತು. ಇದೀಗ ಇಂದು ಬೆಂಗಳೂರಲ್ಲಿ ದಿಢೀರ್ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗುತ್ತಿದೆ.
ಕುಡಿದ ಮತ್ತಲ್ಲಿ ‘108 ಆಂಬುಲೆನ್ಸ್’ಗೆ ಕರೆಮಾಡಿದ ಕುಡುಕ: ಮುಂದೇನಾಯ್ತು ಗೊತ್ತಾ?
ಥಿಯೇಟರ್‌ನಲ್ಲಿ IPL ಪಂದ್ಯಗಳ ಪ್ರಸಾರಕ್ಕೆ BCCIನೊಂದಿಗೆ ಪಿವಿಆರ್ ಐನಾಕ್ಸ್ ಒಪ್ಪಂದ | PVR-INOX