ಕೋಲಾರ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಮಳೆಯಾ ಆರ್ಭಟ ಮುಂದುವೆರೆದಿದೆ. ಜಿಲ್ಲೆಯಲ್ಲಿ ಗಾಳಿ ಸಹಿತ ಜೋರು ಮಳೆ ಸುರಿಯುತ್ತಿದೆ. ಹೀಗಾಗಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ನೀಡಲಾಗಿದೆ.
ಇನ್ನು ಬೆಂಗಳೂರಿನಲ್ಲಿ ಚಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆಯೇ ಮತ್ತೆ ಮಳೆಯ ಕಾಟ ಶುರುವಾಗಿದೆ. ಇದರ ಜೊತೆಗೆ ವಿಪರೀತ ಚಳಿ ಇದ್ದು, ಬೆಳ್ಳಂಬೆಳಗ್ಗೆ ಭಾರಿ ಗಾಳಿ- ಮಳೆ ಸುರಿಯುತ್ತಿದೆ. ಮಾಂಡೋಸ್ ಚಂಡಮಾರುತ ಪರಿಣಾಮದಿಂದಾಗಿ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ.
ಇನ್ನು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ನಾಲ್ಕು ದಿನ ಮಳೆ ಸುರಿಯಲಿದೆ. ಜೊತೆಗೆ ರಣ ಚಳಿ ಬೆಂಗಳೂರಿಗರನ್ನ ಮನೆಯಲ್ಲಿ ಕೂರುವಂತೆ ಮಾಡುತ್ತಿದೆ. ಮಾಂಡೋಸ್ ಚಂಡಮಾರುತ ಗಂಟೆಗೆ 85 ಕಿಲೋ ಮೀಟರ್ ವೇಗವಾಗಿ ಭೂಮಿಗೆ ಅಪ್ಪಳಿಸಿದ್ದು, ಇದರಿಂದಾಗಿ ರಣ ಮಳೆ ಜೊತೆಗೆ ವಿಪರೀತ ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.