ಬೆಂಗಳೂರು: ಕಳೆದ ಹಲವು ದಿನಗಳಿಂದ ವಿವಾದಕ್ಕೀಡಾಗಿದ್ದ ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಧ್ವಜಾರೋಹಣ ಮಾಡಲಾಗಿತ್ತು. ಈ ವೇಳೆ ಮೈದಾನದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
BIGG NEWS: ಬಾಹ್ಯಾಕಾಶ ಕಿಡ್ಜ್ ಇಂಡಿಯಾ ಗ್ರಹದಿಂದ 30 ಕಿಮೀ ಎತ್ತರದಲ್ಲಿ ತಿರಂಗಾ ಹಾರಿಸಿದ VIDEO ವೈರಲ್
ಧ್ವಜಾರೋಹಣ ಮಾಡಿದ ಸ್ಥಳದಲ್ಲಿ ಖಾಕಿ ಫುಲ್ ಅಲರ್ಟ್ ಆಗಿದೆ. ಯಾರಿಗೂ ಪ್ರವೇಶ ನೀಡದಂತೆ ವ್ಯಾರಿಕೇಡ್ ಗಳ ಅಳವಡಿಸಲಾಗಿದೆ. ಈ ವೇಳೆ ಚಾಮರಾಜಪೇಟ್ ನಾಗರಿಕ ಒಕ್ಕೂಟ ವೇದಿಕೆ ಅಧ್ಯಕ್ಷ ಶಿವಕುಮಾರ್ ಅವರು ಮೈದಾನ ಬಳಿ ಹೈಡ್ರಾಮ ಮಾಡಿದ್ದಾರೆ. ಧ್ವಜಾರೋಹಣಕ್ಕೆ ತೆರಳುವ ಸಲುವಾಗಿಗಲಾಟೆ ನಡೆದಿದೆ. ಈದ್ಗಾದಲ್ಲಿ ಧ್ವಜಾರೋಹಣಕ್ಕೆ ಹೋರಾಟ ಮಾಡಿದ್ದೇ ನಾವು. ಈ ವೇಳೆ ನಮಗೆ ಅವಕಾಶ ಇಲ್ಲ ಅಂದ್ರೆ ಹೇಗೆ ಎಂದು ಪೊಲೀಸರ ಜೊತೆಗೆ ವಾಗ್ವಾದ ನಡೆದಿದೆ.
BIGG NEWS: ಬಾಹ್ಯಾಕಾಶ ಕಿಡ್ಜ್ ಇಂಡಿಯಾ ಗ್ರಹದಿಂದ 30 ಕಿಮೀ ಎತ್ತರದಲ್ಲಿ ತಿರಂಗಾ ಹಾರಿಸಿದ VIDEO ವೈರಲ್
ಇನ್ನು ಸಂಜೆ ೬ ಗಂಟೆಗೆ ಸೂರ್ಯಾಸ್ತ ವೇಳೆ ಧ್ವಜ ಇಳಿಸಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳಿಂದಲೇ ಧ್ವಜ ಇಳಿಸುವ ಕಾರ್ಯ ನಡೆಯಲಿದೆ.ಈ ನಿಟ್ಟಿನಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.