ಕೆಎನ್ಎನ್ ಡಿಜಿಟಲ್ ಡೆಸ್ಕ್ : ವ್ಯಕ್ತಿಯೊಬ್ಬ ತನ್ನ ತಾಯಿಗೆ ಅಮೂಲ್ಯ ಉಡುಗೊರೆ ನೀಡಿ ಅಚ್ಚರಿ ಮೂಡಿಸಿರುವ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
40 ಸೆಕೆಂಡುಗಳ ಕ್ಲಿಪ್ ಅನ್ನು ‘ಗುಲ್ಜಾರ್ ಸಾಹಬ್’ ಎಂಬ ಬಳಕೆದಾರರು ಸೋಮವಾರ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. “ಮಮ್ಮಿಗೆ ಸಣ್ಣ ಉಡುಗೊರೆ,” ಎಂದು ಹಿಂದಿಯಲ್ಲಿ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೀಡಿಯೋದಲ್ಲಿ, ವ್ಯಕ್ತಿ ತನ್ನ ತಾಯಿಗೆ ಹೊಸ ಚಿನ್ನದ ಸರದೊಂದಿಗೆ ಸರ್ಪ್ರೈಸ್ ನೀಡುತ್ತಿರುವುದನ್ನು ಕಾಣಬಹುದು. ಅಮ್ಮ ತನ್ನ ಕೆಲಸದಲ್ಲಿ ನಿರತರಾಗಿದ್ದಾಗ ಮಗ ತಾಯಿಯ ಹಿಂದಿನಿಂದ ಬಂದು ಆಕೆಯ ಕುತ್ತಿಗೆಗೆ ಚಿನ್ನದ ಸರ ಹಾಕುವುದನ್ನು ನೋಡಬಹುದು.
छोटा सा गिफ्ट मम्मी के लिए 👩❤️💋👨🎁💐 pic.twitter.com/WPUc7fTvRj
— ज़िन्दगी गुलज़ार है ! (@Gulzar_sahab) November 14, 2022
ಕ್ಲಿಪ್ನ ಕೊನೆಯಲ್ಲಿ, ತಾಯಿಯು ಭವ್ಯವಾದ ಗೆಸ್ಚರ್ನಲ್ಲಿ ಗೋಚರವಾಗಿ ಭಾವುಕರಾಗುವುದನ್ನು ಕಾಣಬಹುದು.
BIGG NEWS : ಮುಂದಿನ ಶೈಕ್ಷಣಿಕ ವರ್ಷದಿಂದಲೇ `NEP’ ಅಧಿಕೃತ ಜಾರಿ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ