ಕೆಎನ್ಎನ್ ಡಿಜಿಟಲ್ ಡೆಸ್ಕ್ : ಚೀನಾದಲ್ಲಿ ಕೊರೊನಾ ಸ್ಫೋಟಗೊಂಡಿದೆ. ಅಲ್ಲಿನ ಆಸ್ಪತ್ರೆಗಳು, ಸ್ಮಶಾನಗಳು ಲಕ್ಷಾಂತರ ರೋಗಿಗಳಿಂದ ತುಂಬಿ ತುಳಿಕುತ್ತಿರುವ ಭಯಾನಕ ವಿಡಿಯೋಗಳು ವೈರಲ್ ಆಗ್ತಿವೆ.
ಆರೋಗ್ಯ ತಜ್ಞ ಎರಿಕ್ ಫೀಗಲ್-ಡಿಂಗ್ ಅವರು ಟ್ವಿಟರ್ ಚೀನಾದಲ್ಲಿನ ಕೋವಿಡ್ ಚಿತ್ರಣದ ವಿಡಿಯೋವನ್ನು ಹಂಚಿಕೊಡಂಇದ್ದಾರೆ. ಅದರಲ್ಲಿ ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರ ಶವಗಳನ್ನು ಶವಸಂಸ್ಕಾರ ಮಾಡಲು ಗಂಟೆಗಳ ಕಾಲ ಸಾಗಿಸುವ ಹೃದಯ ವಿದ್ರಾವಕ ದೃಶ್ಯಗಳನ್ನು ತೋರಿಸುತ್ತದೆ.
ಚೀನಾವು ಕೊರೊನಾದ ಮತ್ತೊಂದು ತೀವ್ರ ಹೊಡೆತಕ್ಕೆ ತುತ್ತಾಗಿದ್ದು, ದಿನದಲ್ಲಿ ಮಿಲಿಯನ್ ಗಟ್ಟಲೇ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ಅದೇ ಸಮಯದಲ್ಲಿ ಡಿಸೆಂಬರ್ 1 ರಿಂದ ಅನೇಕರು ಸೋಂಕಿಗೆ ಬಲಿಯಾಗುತ್ತಿದ್ದಾರೆ.
35) Epic long lines at crematoriums… imagine having to not just wait for hours to cremate you loved ones, but have to do it carrying their deceased bodies for all those hours… let’s have empathy for the horrific #COVID19 wave 🌊 crashing into China. 🙏
pic.twitter.com/aQcmmjuCTC— Eric Feigl-Ding (@DrEricDing) December 26, 2022
ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದಿಂದ ಸೋರಿಕೆಯಾದ ದಾಖಲೆಯು ದೇಶದಾದ್ಯಂತ ಸುಮಾರು 248 ಮಿಲಿಯನ್ ಜನರು, ಒಟ್ಟು ಜನಸಂಖ್ಯೆಯ ಸರಿಸುಮಾರು 17.56 ಪ್ರತಿಶತದಷ್ಟು ಜನರು ಡಿಸೆಂಬರ್ 1 ಮತ್ತು 20 ರ ನಡುವೆ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂಬುದನ್ನು ಸೂಚಿಸುತ್ತಿದೆ.
ಇತ್ತೀಚಿಗೆ ಚೀನಾದಲ್ಲಿ ಶೂನ್ಯ ಕೋವಿಡ್ ನೀತಿ ವಿರುದ್ಧ ಜನರು ಪ್ರತಿಭಟನೆ ಕೈಗೊಂಡಿದ್ದರು. ಇದರಿಂದ ಅಲ್ಲಿನ ಸರ್ಕಾರ ನೀತಿಯನ್ನು ತೆಗೆದು ಹಾಕಿತ್ತು. ಇದಾದ ಬಳಿಕ ಚೀನಾದಲ್ಲಿ ಕೋವಿಡ್ ಉಲ್ಬಣಗೊಂಡಿದೆ.
Watch: ಪಶ್ಚಿಮ ದೆಹಲಿಯ ಬಹುಮಹಡಿ ಪಾರ್ಕಿಂಗ್ ಸ್ಥಳದಲ್ಲಿಅಗ್ನಿ ಅವಘಡ : 21 ಕಾರುಗಳು ಬೆಂಕಿಗಾಹುತಿ
BIGG NEWS: ಚಾಮರಾಜನಗರದಲ್ಲಿ ಬಿಳಿಕಲ್ಲು ಕ್ವಾರಿ ಕುಸಿದು ಇಬ್ಬರು ಕಾರ್ಮಿಕರು ಸಾವು