ತಿರುವನಂತಪುರ: ಕೇರಳದಲ್ಲಿ ತಾಯಿಯ ಗರ್ಭದಲ್ಲೇ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ 6 ತಿಂಗಳ ಭ್ರೂಣಕ್ಕೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೀಡಲಾಗಿದೆ.
ಕೇರಳದ ಕಲ್ಲಿಕೋಟೆಯ ವೈದ್ಯರು ಇನ್ನೂ ತಾಯಿಯ ಗರ್ಭದಲ್ಲಿ ಇದ್ದ 6 ತಿಂಗಳ ಭ್ರೂಣಕ್ಕೆ ಯಶಸ್ವಿಯಾಗಿ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದು ಕೇರಳ ರಾಜ್ಯದ ಮೊದಲ, ದೇಶದ 5ನೇ ಪ್ರಕರಣವಾಗಿದೆ. ವಾಲ್ವೋಟಮಿ ಶಸ್ತ್ರಚಿಕಿತ್ಸೆಯನ್ನು 25 ವರ್ಷದ ಗರ್ಭಿಣಿ ಮುಹ್ಸಿನಾ ಅವರ ಆರು ತಿಂಗಳ ಭ್ರೂಣದ ಮೇಲೆ ಅಪರೂಪದ ಮತ್ತು ಸಂಕೀರ್ಣವಾದ ಕೀಹೋಲ್ ಹೃದಯ ಕವಾಟದ ಹಸ್ತಕ್ಷೇಪವನ್ನು ಮಾಡುವ ಮೂಲಕ ವೈದ್ಯಕೀಯ ಇತಿಹಾಸವನ್ನು ನಿರ್ಮಿಸಿದೆ.
ಕಲ್ಲಿಕೋಟೆಯ ವೈದ್ಯರು 25 ವರ್ಷದ ಮುಹ್ಸಿನಾ ಎಂಬಾಕೆಯ 6 ತಿಂಗಳ ಭ್ರೂಣಕ್ಕೆ ಮಹಾಅಪಧಮನಿಯ ವಾಲ್ಲೋಟಮಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಕೆಲ ತಿಂಗಳ ಬಳಿಕ ಮುಹ್ಸಿನಾ ಅವರು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.