ಉತ್ತರಕನ್ನಡ : ಈ ಬಡತನ, ಹಸಿವು ಅನ್ನೋದು ಬಹಳ ಕ್ರೂರಿ ಆಗಿರುತ್ತದೆ. ಕೆಲವೊಂದು ಬಾರಿ ನಮ್ಮ ಶತ್ರುಗಳಿಗೂ ಇಂತಹ ಪರಿಸ್ಥಿತಿ ಬರಬಾರದು ಅಂದುಕೊಳ್ಳುತ್ತೇವೆ. ಇದೀಗ ರಾಜ್ಯದಲ್ಲಿ ಹೃದಯ ವಿದ್ರಾವಕ ಘಟನೆ ಒಂದು ನಡೆದಿದ್ದು ಮಹಿಳೆ ಒಬ್ಬರು ಒಂದೊತ್ತಿನ ಊಟಕ್ಕೂ ಗತಿಯಿಲ್ಲದೆ ಮನನೊಂದು ತಮಗೆ ತಾವೇ ಬೆಂಕಿ ಹಚ್ಚಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಹೌದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅನಗೋಡಿನ ಬೆಳ್ತೆರಗದ್ದೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೇ ಮನನೊಂದು ಬಡ ಮಹಿಳೆಯೋರ್ವಳು ಬೆಂಕಿ ಹಚ್ಚಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. ಲಕ್ಷ್ಮೀ ಮಹಾದೇವ ನಾಗೇಶ ಸಿದ್ಧಿ (48) ಮೃತ ಮಹಿಳೆ ಎಂದು ತಿಳಿದುಬಂದಿದೆ. ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಸಾಯಲು ಯತ್ನಿಸಿದ್ದಾರೆ.
ಆದರೆ ದೇಹವೆಲ್ಲ ಸುಟ್ಟು ನರಳಾಟಕ್ಕೆ ಸ್ಥಳೀಯರು ಸಹಕಾರದಿಂದ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾರೆ.ಕೌಟುಂಬಿಕ ಕಾರಣಗಳಿಗಾಗಿ ಲಕ್ಷ್ಮೀ, ಗಂಡನಿಂದ ಬೇರ್ಪಟ್ಟ ಬಳಿಕ ಏಕಾಂಗಿಯಾಗಿ ವಾಸಿಸುತ್ತಿದ್ದರು. ಆದರೆ, ಆರ್ಥಿಕ ಸಂಕಷ್ಟದಿಂದಾಗಿ ಒಂದು ಹೊತ್ತಿನ ಊಟಕ್ಕೂ ಇತರರನ್ನು ಅವಲಂಬಿಸಬೇಕಾದ ದುಸ್ಥಿತಿ ಎದುರಾಗಿತ್ತು.
ಈ ಕಾರಣದಿಂದ ಮಾನಸಿಕವಾಗಿ ಕುಗ್ಗಿದ್ದ ಲಕ್ಷ್ಮೀ, ತಮ್ಮ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಸಾಯಲು ಯತ್ನಿಸಿದ್ದರು. ಸ್ಥಳೀಯರು ತಕ್ಷಣ ಗಮನಿಸಿ, ಆಕೆಯನ್ನು ರಕ್ಷಿಸಿ ಹುಬ್ಬಳ್ಳಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ, ತೀವ್ರ ಸುಟ್ಟಗಾಯಗಳಿಂದಾಗಿ ಚಿಕಿತ್ಸೆ ವಿಫಲವಾಗಿ ಲಕ್ಷ್ಮೀ ಮೃತಪಟ್ಟಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.