ಶಿವಮೊಗ್ಗ : ಶಿವಮೊಗ್ಗದಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು, ರಾಷ್ಟ್ರೀಯ ಅಪಘಾತದಲ್ಲಿ ಹಸೆಮಣೆ ಎರಬೇಕಿದ್ದ ಜೋಡಿ ಸಾವನ್ನಪ್ಪಿದ್ದಾರೆ. ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್ ಬಳಿ ಈ ಒಂದು ಘಟನೆ ಸಂಭವಿಸಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ.
ಓಮಿನಿ ವಾಹನ ಮತ್ತು ಬೈಕ್ ನಡುವೆ ಮುಖಾಮುಖಿಯಾಗಿ ಬೈಕ್ ನಲ್ಲಿ ಇದ್ದಂತಹ ಹಸೆಮಣೆ ಎರಬೇಕಿದ್ದ ಜೋಡಿಗಳು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಶಿಕಾರಿಪುರ ತಾಲೂಕಿನ ಮಟ್ಟಿಕೊಪ್ಪ ಗ್ರಾಮದ ರೇಖಾ (20) ಹಾಗೂ ಗಂಗೊಳ್ಳಿ ಗ್ರಾಮದ ಬಸವನಗೌಡ ದ್ಯಾಮನಗೌಡ (25) ಸಾವನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ರೇಖಾ ಹಾಗೂ ಬಸವನಗೌಡ ಅವರಿಗೆ ಕಳೆದ ಶ್ರಾವಣ ಮಾಸದಲ್ಲಿ ಮದುವೆ ನಿಶ್ಚಿತಾರ್ಥವಾಗಿತ್ತು. ಆದರೆ, ನಿನ್ನೆ ನಡೆದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ರೇಖಾ ಶಿಕಾರಿಪುರ ತಾಲೂಕು ಮತ್ತಿಕೋಟೆ ಗ್ರಾಮದ ನಿವಾಸಿ. ಬಸವನಗೌಡ( 24) ಸೊರಬ ತಾಲೂಕು ಗಂಗೊಳ್ಳಿ ಗ್ರಾಮದ ನಿವಾಸಿ. ಮಂಗಳವಾರ ಮಾವನ ಮನೆಗೆ ಬಂದಿದ್ದ ಬಸವನಗೌಡ ನಿನ್ನೆ ಸಂಗಾತಿಯ ತವರೂರಾದ ಮತ್ತಿಕೋಟೆ ಗ್ರಾಮದಿಂದ ತೊಗರ್ಸಿ ದೇವಸ್ಥಾನಕ್ಕೆ ಬೈಕಿನಲ್ಲಿ ತೆರಳುತ್ತಿದ್ದರು.
ಈ ವೇಳೆ ಶಿಕಾರಿಪುರದ ಅಂಬಾರಕೊಪ್ಪ ಕ್ರಾಸ್ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮುಂಭಾಗದಲ್ಲಿ ವೇಗವಾಗಿ ಬರುತ್ತಿದ್ದ ಎಕೋ ವಾಹನ ಇವರ ಬೈಕಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ರೇಖಾಳ ತಂದೆ ಬಸವರಾಜಪ್ಪ ಮತ್ತು ಕುಟುಂಬದವರು, ‘ಬೈಕ್ ಬಿಟ್ಟು ಬಸ್ಗೆ ಹೋಗಿ ಎಂದು ಎಷ್ಟು ಸಲ ಹೇಳಿದರೂ ನನ್ನ ಮಾತು ಕೇಳದೇ ಬೈಕ್ ಮೇಲೆ ಹೊರಟ ಜೋಡಿ ಮದುವೆಯ ಮುಂಚೆ ಮಸಣ ಸೇರಿದ್ದಾರೆ’ ಎಂದು ದುಃಖ ವ್ಯಕ್ತಪಡಿಸಿದ್ದಾರೆ.