ಹಾಸನ: ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಮುಂದುವರೆದಿದೆ. ಇದೀಗ ಬಂದ ಮಾಹಿತಿಯಂತೆ ಹಾಸನಾಂಬೆ ದೇವಾಲಯದ ಹಿಂಭಾಗದಲ್ಲಿಯೇ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಹಾಸನ ಜಿಲ್ಲೆಯಲ್ಲಿ ಹೃದಯಾಘಾತದ ಪ್ರಕರಣಗಳು ಮುಂದುವರೆದಿವೆ. ಇದೀಗ ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದೆ. ಹೃದಯಾಘಾತದಿಂದ ಸತ್ಯನಾರಾಯಣರಾವ್(63) ಎಂಬುವರು ಸಾವನ್ನಪ್ಪಿದ್ದಾರೆ.
ಹಾಸನಾಂಬ ದೇಗುಲದ ಹಿಂಭಾಗದಲ್ಲಿ ಇಂದು ಈ ಘಟನೆ ನಡೆದಿದೆ. ಹಾಸನ ನಗರದ ರಂಗೋಲಿ ಹಳ್ಳ ಬಡಾವಣೆಯ ನಿವಾಸಿ ಸತ್ಯನಾರಾಯಣ ಆಗಿದ್ದಾರೆ. ಇಂದು ಒಂದೇ ದಿನ ಹಾಸನ ಜಿಲ್ಲೆಯಲ್ಲಿ ನಾಲ್ವರು ಹೃದಯಾಘಾತಕ್ಕೆ ಬಲಿಯಾದಂತೆ ಆಗಿದೆ. ಹೀಗಾಗಿ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.
BREAKING: ತೆಲಂಗಾಣ ಕೈಗಾರಿಕಾ ಘಟಕದಲ್ಲಿ ಭೀಕರ ಸ್ಫೋಟ: 10 ಮಂದಿ ಸಾವು, ಹಲವರಿಗೆ ಗಾಯ