ಕೆಎನ್ಎನ್ ಡಿಜಿಟಲ್ ಡೆಸ್ಕ್ : ಹೊಟ್ಟೆ ತುಂಬಾ ಬೊಜ್ಜು ತುಂಬಿಕೊಂಡಿದ್ದರೆ ಅದನ್ನು ಕರಗಿಸುವುದು ಹೇಗೆ ಎನ್ನುವ ಚಿಂತೆ ಕಾಡುವುದು ಸಹಜ. ಇಂದಿನ ಜೀವನ ಶೈಲಿ ಮತ್ತು ಆಹಾರ ಕ್ರಮದಿಂದಾಗಿ ಹೆಚ್ಚಿನವರಲ್ಲಿ ಬೊಜ್ಜು ಕಾಣಿಸಿಕೊಳ್ಳುತ್ತದೆ ಹೊಟ್ಟೆಯ ಕೊಬ್ಬು ಆರೋಗ್ಯಕ್ಕೆ ತುಂಬಾ ಹಾನಿಕರ. ಇದರಿಂದಾಗಿ ಮಧುಮೇಹದಿಂದ ಹಿಡಿದು ಹೃದಯದ ಸಮಸ್ಯೆ, ನಿದ್ರಾಹೀನತೆ ಮತ್ತು ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿ ಕೊಳ್ಳಬಹುದು. ಅದಕ್ಕಾಗಿ ನೀವು ಇಂದಿನಿಂದಲೇ ನಿಮ್ಮ ಆರೋಗ್ಯದ ಬಗ್ಗೆ ಯೋಚನೆ ಮಾಡಿ ಅತಿ ವೇಗವಾಗಿ ಕೊಬ್ಬು ಇಳಿಸಿಕೊಳ್ಳೋದಕ್ಕೆ ಈ ನಿಯಮಗಳನ್ನು ಪಾಲಿಸೋ ಉತ್ತಮ ಈ ಕುರಿತ ಮಾಹಿತಿ ಇಲ್ಲಿದೆ ಓದಿ
ವರ್ಕ್ ಫ್ರಂ ಹೋಮ್ ನಡುವೆ ಈ ದೇಶದ Pornography ನೋಡ್ತಾರಂತೆ: ಎಲ್ಲಿ ಗೊತ್ತಾ?
ಕೊಬ್ಬು ಇಳಿಸುವಂತಹ ಆಹಾರಗಳನ್ನು ಸೇವಿಸಿ
ಹೊಟ್ಟೆಯ ಕೊಬ್ಬು ಇಳಿಸಿಕೊಳ್ಳುವ ಮೊದಲು ಬಯುಸವವರು ಮುಖ್ಯವಾಗಿ ಪಾಲಿಸಬೇಕಾಗಿರುವಂತಹ ವಿಚಾರವೆಂದರೆ ಅದು ಸರಿಯಾದ ಆಹಾರ ಕ್ರಮ ಮತ್ತು ವ್ಯಾಯಮ. ಹೊಟ್ಟೆ ಕೊಬ್ಬು ಕರಗಿಸಲು ವ್ಯಾಯಾಮವು ಅತೀ ಮಹತ್ವದ್ದಾಗಿದೆ. ವ್ಯಾಯಾಮದ ಬಗ್ಗೆ ಕೆಳಗೆ ತಿಳಿಸಿಕೊಡಲಿದ್ದೇವೆ. ಇದಕ್ಕೆ ಮೊದಲು ನೀವು ಕೊಬ್ಬು ಕರಗಿಸುವ ಹತ್ತು ಆಹಾರಗಳ ಬಗ್ಗೆ ತಿಳಿಯಿರಿ.
ಮೆಣಸು
ತುಂಬಾ ಖಾರವಾಗಿರುವಂಹತ ಮೆಣಸುಗಳು ಹೊಟ್ಟೆಯ ಕೊಬ್ಬು ಕರಗಿಸುವಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುವುದು ಮತ್ತು ಹಸಿವನ್ನು ಇದು ಕಡಿಮೆ ಮಾಡುವುದು. ಇದು ಆರೋಗ್ಯಕಾರಿ ಚಯಾಪಚಯ ಕ್ರಿಯೆ ವೃದ್ಧಿಸುವ ವಿಟಮಿನ್ ಸಿಯನ್ನು ಒದಗಿಸುವುದು.
ಮೊಟ್ಟೆ
ಪ್ರೋಟೀನ್ ಹೊಂದಿರುವಂತಹ ಮೊಟ್ಟೆಯು ನಿಮ್ಮ ಹಸಿವನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದರಿಂದಾಗಿ ನೀವು ಕಡಿಮೆ ತಿನ್ನುವಿರಿ ಮತ್ತು ಹೊಟ್ಟೆಯ ಕೊಬ್ಬು ವೇಗವಾಗಿ ಕರಗುವುದು. ಆರೋಗ್ಯಕಾರಿ ಪ್ರೋಟೀನ್ ಸೇವನೆಯಿಂದ ಕೊಬ್ಬು ಕರಗಿಸಿಕೊಳ್ಳಬಹುದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ.
ವರ್ಕ್ ಫ್ರಂ ಹೋಮ್ ನಡುವೆ ಈ ದೇಶದ Pornography ನೋಡ್ತಾರಂತೆ: ಎಲ್ಲಿ ಗೊತ್ತಾ?
ಬೀನ್ಸ್
ಹೊಟ್ಟೆಯ ಕೊಬ್ಬು ಕರಗಿಸುವ ವಿಚಾರಕ್ಕೆ ಬಂದರೆ ಆಗ ಮುಖ್ಯವಾಗಿ ಬೀನ್ಸ್ ಪ್ರಕೃತಿಯು ಮನುಷ್ಯನಿಗೆ ನೀಡಿರುವಂತಹ ಒಂದು ಉಡುಗೊರೆ ಎಂದು ಹೇಳಬಹುದು. ಇದು ಕಾರ್ಬ್ಸ್ ಮತ್ತು ಪ್ರೋಟೀನ್ ನ ಸಮತೋಲನ ಕಾಪಾಡುವುದು ಮತ್ತು ದೀರ್ಘಕಾಲ ತನಕ ಹೊಟ್ಟೆಯು ತುತುಂಬಿರುವಂತೆ ಮಾಡುವುದು. ಕಪ್ಪು ಬೀನ್ಸ್, ಕಿಡ್ನಿ ಬೀನ್ಸ್, ಮಸೂರ, ಗಾರ್ಬಾಂಜೊ ಮತ್ತು ಕ್ಯಾನೆಲ್ಲಿನಿ ಇದಕ್ಕೆ ಒಳ್ಳೆಯ ಆಯ್ಕೆಯಾಗಿದೆ.
ವರ್ಕ್ ಫ್ರಂ ಹೋಮ್ ನಡುವೆ ಈ ದೇಶದ Pornography ನೋಡ್ತಾರಂತೆ: ಎಲ್ಲಿ ಗೊತ್ತಾ?