ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಮ್ಮ ಕೂದಲು ಮತ್ತು ಚರ್ಮ ಬಹಳ ಸೂಕ್ಷ್ಮವಾಗಿರುವುದರಿಂದ, ವಾತಾವರಣದಲ್ಲಿ ಉಂಟಾಗುವ ಬದಲಾವಣೆಯು ನೇರವಾಗಿ ಇದರ ಮೇಲೆ ಪರಿಣಾಮ ಬೀರಬಹುದು. ಪ್ರತೀ ಋತುವಿನಲ್ಲಿ ನಮ್ಮ ಚರ್ಮ ಹಾಗೂ ಕೂದಲಿನ ಬಗ್ಗೆ ನಾವು ಕಾಳಜಿ ವಹಿಸಬೇಕಾಗುತ್ತದೆ.
ಸಾಮಾನ್ಯವಾಗಿ ಚಳಿಗಾಲವು ಚರ್ಮ ಹಾಗೂ ಕೂದಲಿನ ಮೇಲೆ ಪರಿಣಾಮ ಬೀರುವುದು ಸ್ವಾಭಾವಿಕವಾದುದು. ಚಳಿಗಾಲದಲ್ಲಿ ಬೀಸುವ ಗಾಳಿ, ತುಂಬಾ ಒಣದಾಗಿರುತ್ತದೆ, ಹಾಗೂ ಅಂತಹ ಒಣ ಗಾಳಿ ಕೂದಲಿನ ತೇವಾಂಶವನ್ನು ಬದಲಾಯಿಸಿ ಒರಟುಗೊಳಿಸುತ್ತದೆ.
ಚಳಿಗಾಲದಲ್ಲಿ ನಮ್ಮ ಚರ್ಮ ತೇವಾಂಶವನ್ನು ಕಳೆದುಕೊಳ್ಳುವುದರ ಜೊತೆಗೆ ನಮ್ಮ ತಲೆಕೂದಲಿನ ಮೇಲೂ ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ. ಪ್ರತೀ ವರ್ಷ ವಿಭಿನ್ನ ರೀತಿಯ ತಲೆ ಕೂದಲಿನ ಸಮಸ್ಯೆಯನ್ನು ನಾವು ಕಂಡುಕೊಳ್ಳುತ್ತೇವೆ. ಹೆಚ್ಚಾಗಿ ಕಂಡುಬರುವ ತಲೆಕೂದಲಿನ ಸಮಸ್ಯೆ ಅಂದರೆ, ಒಣ ಕೂದಲು, ಒರಟಾಗಿರುವ ಕೂದಲು, ತಲೆಹೊಟ್ಟು (ಡ್ಯಾಂಡ್ರಫ್). ಇಂತಹ ಸಮಸ್ಯೆಯನ್ನು ಹೋಗಲಾಡಿಸಲು ನಾವು ಹೆಚ್ಚು ಗಮನ ನೀಡಬೇಕಾಗುತ್ತದೆ.
ಚಳಿಗಾಲದಲ್ಲಿ ಕಂಡುಬರುವ ಕೂದಲಿನ ಸಮಸ್ಯೆ ಕೂದಲಿನ ಪ್ರಕಾರದ ಮೇಲೆ ಅವಲಂಬಿರುತ್ತದೆ. ಪ್ರತೀಯೊಂದು ಕೂದಲಿಗೂ ವಿಭಿನ್ನ ರೀತಿಯ ತಲೆಕೂದಲಿನ ಅವಶ್ಯಕತೆ ಇದೆ. ಸಾಮಾನ್ಯವಾಗಿ ಎಲ್ಲಾ ಕೂದಲಿಗೂ ಸರಿಹೊಂದುವ ಕೆಲವೊಂದು ಉತ್ತಮ ವಿಧಾನವನ್ನು ಈ ಕೆಳಗೆ ನೀಡಲಾಗಿದೆ.
ಬಿಸಿ ಎಣ್ಣೆಯ ಮಸಾಜ್ :
ಚಳಿಗಾಲದಲ್ಲಿ ಕೂದಲು ಒರಟು ಹಾಗೂ ಒಣಗಿದಂತೆ ಕಾಣುತ್ತದೆ. ಇದು ಮಾಯಿಶ್ಚರೈಸ್ ಅನ್ನು ಕಳೆದುಕೊಳ್ಳುತ್ತದೆ ಹಾಗೂ ಕೂದಲಿನ ಅಂದವನ್ನು ಬದಲಾಯಿಸುತ್ತದೆ. ಹಾಗಾಗಿ ಬಿಸಿ ಎಣ್ಣೆಯ ಮಸಾಜ್ ಕೂದಲಿನ ಶೈಲಿಯನ್ನು ಬದಲಾಯಿಸುತ್ತದೆ, ಹಾಗೂ ಮರು – ಹೈಡ್ರೇಟ್ಸ್ ಅನ್ನು ಒದಗಿಸುತ್ತದೆ. ಬಿಸಿ ಎಣ್ಣೆಯು ಚಳಿಗಾಲದಲ್ಲಿ ಉಂಟಾಗಿರುವ ಕೂದಲಿನ ಒರಟನ್ನು ಹೋಗಲಾಡಿಸುತ್ತದೆ. ಬಿಸಿ ಎಣ್ಣೆ ಮಸಾಜ್ ಅನ್ನು ಯಾವುದೇ ಎಣ್ಣೆಯನ್ನು ಬಳಸಿಕೊಂಡು ಕೂಡ ಮಾಡಬಹುದು. ಚಲಿಗಾಲದಲ್ಲಿ ಇದನ್ನು ನಿರಂತರವಾಗಿ ಮಾಡಿದರೆ, ತುಂಬಾ ಉಪಯುಕ್ತವಾಗಿರುತ್ತದೆ.
ಹೇರ್ ಪ್ಯಾಕ್ಗಳು: ಹೇರ್ ಪ್ಯಾಕ್ಗಳನ್ನು ನೈಸರ್ಗಿಕ ಸಾಮಾಗ್ರಿಗಳಿಂದ ಮಾಡಿಕೊಳ್ಳುವುದು ತುಂಬಾ ಉತ್ತಮವಾದುದು. ಈ ಹೇರ್ ಪ್ಯಾಕ್ಗಳು ಕೂದಲಿಗೆ ತೇವಾಂಶವನ್ನು ಒದಗಿಸುವುದರೊಂದಿಗೆ, ತಲೆಹೊಟ್ಟನ್ನು ನಿವಾರಿಸಿ ಕೂದಲಿನ ಉತ್ತಮ ಬೆಳವಣಿಗೆಗೆ ಸಹಕಾರಿಯಾಗಿರುತ್ತವೆ. ನೈಸರ್ಗಿಕವಾಗಿ ದೊರೆಯುವ ಮನೆಯಲ್ಲೇ ಮಾಡಿಕೊಳ್ಳಬಹುದಾದ ಹೇರ್ ಪ್ಯಾಕ್ಗಳು ಸಾಕಷ್ಟಿವೆ, ಆದರೆ ಅವುಗಳ ಉಪಯೋಗವನ್ನು ನಾವು ಯೋಗ್ಯ ರೀತಿಯಲ್ಲಿ ಮಾಡಿಕೊಳ್ಳಬೇಕು. ಅಂದರೆ ಮೊಸರು, ಹೆನ್ನಾ (ಮದರಂಗಿ), ಹಾಲು, ಬೇವು ಹಾಗೂ ಲಿಂಬೆ ಹಣ್ಣು. ಈ ಸಾಮಾಗ್ರಿಗಳಿಂದ ಮಾಡಿದ ಹೇರ್ ಪ್ಯಾಕ್ಗಳು ಉತ್ತಮ ಫಲಿತಾಂಶವನ್ನು ನೀಡುವುದರಲ್ಲಿ ಸಂಶಯವಿಲ್ಲ.
ಕಂಡೀಷನರ್ಗಳು: ಚಳಿಗಾಲಕ್ಕೆ ಕಂಡೀಷನರ್ಗಳು ತುಂಬಾ ಉತ್ತಮವಾದುದು. ಉತ್ತಮ ಗುಣಮಟ್ಟದ ಕಂಡೀಷನರ್ಗಳಿಂದ ಕೂದಲಿನ ತುದಿ ಸೀಳಾಗುವಿಕೆ ಕಡಿಮೆಯಾಗುತ್ತದೆ. ಚಳಿಗಾಲದಲ್ಲಿ ಕಂಡೀಷನ್ನ ಬಳಕೆ ಅತ್ಯವಶ್ಯಕವಾದುದು.ನೀವು ಶ್ಯಾಂಪು ಬಳಸುವುದಕ್ಕಿಂತ ಮುನ್ನ ಕಂಡೀಷನರ್ ಅನ್ನು ಬಳಸಬಹುದು. ಕಂಡೀಷನರ್ ಅನ್ನು ಹಚ್ಚಿ 5 ನಿಮಿಷಗಳ ಕಾಲ ಹಾಗೆ ಬಿಡಿ. ಕೂದಲಿನ ತುದಿಗೆ ಹಚ್ಚುವುದು ಉತ್ತಮ ಬುಡಕ್ಕೆ ಕಂಡೀಷನರ್ ಅಗತ್ಯವಿಲ್ಲ. ನಂತರ ತಣ್ಣೀರಿನಲ್ಲಿ ಕೂದಲು ತೊಳೆಯಿರಿ. ಶ್ಯಾಂಪೂ ಬಳಸಿದ ನಂತರ ಕೂಡ ಈ ವಿಧಾನವನ್ನು ಮಾಡಿ.
ಕೇಶವಿನ್ಯಾಸ ಮತ್ತು ಆರೈಕೆ: ಚಳಿಗಾಲದ ತಂಪು ಹವೆಯು ನಿಮ್ಮ ಕೂದಲಿಗೆ ಹಾನಿಯನ್ನುಂಟು ಮಾಡಬಹುದು. ನಿಮ್ಮ ಕೂದಲನ್ನು ತೆರೆದಿಟ್ಟುಕೊಳ್ಳಬೇಡಿ. ನಿಮ್ಮ ಕೂದಲನ್ನು ಜಡೆ ಹಾಕಿಕೊಳ್ಳಿ ಅಥವಾ ಕಟ್ಟಿಕೊಳ್ಳಿ. ಕೂದನ್ನು ಆಗಾಗ್ಗೆ ಬಾಚಿಕೊಳ್ಳುವುದನ್ನು ಕಡಿಮೆ ಮಾಡಿ ಇಲ್ಲದಿದ್ದರೆ ತುದಿ ಸೀಳುವಿಕೆಗೆ ಕೂದಲು ಒಳಗಾಗಬಹುದು. ನಿಮ್ಮ ಕೇಶವಿನ್ಯಾಸವನ್ನು ಸರಳವಾಗಿಟ್ಟುಕೊಳ್ಳುವುದು ಚಳಿಗಾಲಕ್ಕೆ ಉತ್ತಮ
ಹೀಟ್ ಅಪ್ಲಿಕೇಶನ್ಗಳು: ಚಳಿಗಾಲದಲ್ಲಿ ಕೂದಲನ್ನು ಹೀಟ್ ಮಾಡಿಕೊಳ್ಳುವ ಸಾಧನದಿಂದ ದೂರವಿರುವುದು ಒಳ್ಳೆಯದು. ಹೇರ್ ಡ್ರಯರ್ಗಳು, ಬ್ಲಾವೊರ್ಗಳು ಮತ್ತು ಸ್ಟ್ರೈಟನರ್ಗಳನ್ನು ತ್ಯಜಿಸಬೇಕು. ಹೆಚ್ಚು ಹೀಟ್ ಅನ್ನು ಕೂದಲಿಗೆ ಬಳಸುವುದರಿಂದ ಅದು ಇನ್ನಷ್ಟು ಒಣಗಾಗುತ್ತದೆ.
ಶ್ಯಾಂಪು ಮತ್ತು ಕಂಡೀಷನರ್ಗಳು: ಪ್ರತಿ ಋತುವಿಗೆ ಅನುಗುಣವಾಗಿ ನಿಮ್ಮ ಶ್ಯಾಂಪು ಮತ್ತು ಕಂಡೀಷನರ್ಗಳನ್ನು ಬದಲಾಯಿಸಿ. ನಿಮ್ಮ ಕೂದಲಿಗೆ ಹೊಂದಿಕೊಳ್ಳುವ ಶ್ಯಾಂಪುವನ್ನು ಚಳಿಗಾಲದಲ್ಲಿ ಬಳಸಿ. ಕೂದಲು ತಜ್ಞರನ್ನು ಭೇಟಿ ಮಾಡಿ ಅವರ ಸಲಹೆಯಂತೆ ಶ್ಯಾಂಪು ಮತ್ತು ಕಂಡೀಷನರ್ ಬಳಸಿ.