ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಈಗಿನ ಪಾಲಕರ ಒಂದೇ ರೋದನೆ ಎಂದರೆ ಸರಿಯಾಗಿ ಊಟ ಮಾಡುವುದಿಲ್ಲ. ಸರಿಯಾಗಿ ಮನೆಯಲ್ಲಿ ಮಾಡಿದ ಅಡುಗೆ ಊಟ ಮಾಡದೇ ಜಂಗ್‌ಫುಡ್, ಬಿಸ್ಕೆಟ್, ಚಾಕಲೇಟ್, ಕೇಕ್‌ಗಳನ್ನೇ ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಇಂತಹ ಜಂಗ್‌ಫುಡ್‌ಗಳನ್ನು ತಿಂದರೆ ಮಕ್ಕಳ ಆರೋಗ್ಯ ಸಮತೋಲನದಲ್ಲಿ ಇರುವುದಿಲ್ಲ.
ಹೇಗಿದ್ದರೂ ಚಿಕ್ಕ ಮಕ್ಕಳು ಸಿಹಿ ಪದಾರ್ಥಗಳನ್ನು, ಸಿಹಿ ತಿಂಡಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಹಾಗಾಗಿ ಅವರಿಗೆ ಪಾಯಸವೊಂದನ್ನು ಮಾಡಿ ತಿನಿಸಿ ಈ ಪಾಯಸ ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದರಿಂದ ಮಕ್ಕಳ ದೇಹದ ತೂಕ ಸಹ ಹೆಚ್ಚಾಗುತ್ತದೆ. ಹೀಗೆ ಮಕ್ಕಳ ಆರೋಗ್ಯ ಕಾಪಾಡುವ ಪಾಯಸ ಯಾವುದೆಂದರೆ ಅದು ಬಾರ್ಲಿ ಪಾಯಸ. ಬಾರ್ಲಿ ಸಿರಿಧಾನ್ಯಗಳಲ್ಲಿ ಒಂದು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬನ್ನಿ ಬಾರ್ಲಿ ಪಾಯಸ ಮಾಡುವ ವಿಧಾನ ತಿಳಿದುಕೊಳ್ಳೋಣ
ಬಾರ್ಲಿ ಪಾಯಸ ಮಾಡುವ ವಿಧಾನ
ಒಂದು ಕಪ್ ಬಾರ್ಲಿಯನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಿ.
ಹುರಿದ ಬಾರ್ಲಿಗೆ ನೀರು ಸೇರಿಸಿ ಕುದಿ ಬರುವವರೆಗೂ ಚೆನ್ನಾಗಿ ಬೇಯಿಸಿಕೊಳ್ಳಿ.
ನೀರಿನೊಂದಿಗೆ ಬಾರ್ಲಿ ಚೆನ್ನಾಗಿ ಬೆಂದ ನಂತರ ಮತ್ತೇ ಒಂದು ಕಪ್ ಹಾಲು ಹಾಕಿ ಕುದಿಸಿ.
ಹೀಗೆ ಕುದಿಯುತ್ತಿರುವಾಗ ಮುಕ್ಕಾಲು ಕಪ್ ಸಕ್ಕರೆ ಅಥವಾ ಬೆಲ್ಲ ಸೇರಿಸಿ, ಸಕ್ಕರೆ ಅಥವಾ ಬೆಲ್ಲ ಕರಗುವವರೆಗೂ ಇನ್ನಷ್ಟು ಕುದಿಸಿಕೊಳ್ಳಿ. ಬೇಕಿದ್ದರೆ ಇನ್ನಷ್ಟು ಹಾಲು ಅಥವಾ ನೀರು ಹಾಕಿ.
ಇದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಗೇರುಬೀಜ ಅಥವಾ ಮಕ್ಕಳಿಗಿಷ್ಟವಾದ ಡ್ರೈಫ್ರುಟ್ಸ್‌ಗಳನ್ನು ಹಾಕಿ.
ಈಗ ಬಾರ್ಲಿ ಪಾಯಸ ಸಿದ್ಧವಾಗಿದೆ. ಈ ಪಾಯಸವನ್ನು ವಾರದಲ್ಲಿ ಎರಡು ಬಾರಿ ಮಕ್ಕಳಿಗೆ ಮಾಡಿಕೊಟ್ಟರೆ ಮಕ್ಕಳ ಆರೋಗ್ಯ ದಷ್ಟಪುಷ್ಟವಾಗಿರುತ್ತದೆ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.