Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತೀಯರ ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ, ಆದ್ರೆ ಕಾಂಗ್ರೆಸ್ ಯುದ್ಧವನ್ನ ರಾಜಕೀಯಗೊಳಿಸ್ತಿದೆ : ಪ್ರಧಾನಿ ಮೋದಿ

11/03/2026 10:12 PM

ಹಾರ್ಮುಜ್ ಜಲಸಂಧಿಯಲ್ಲಿ ಕಾಂಡ್ಲಾಗೆ ತೆರಳುತ್ತಿದ್ದ ಹಡಗಿನ ಮೇಲಿನ ದಾಳಿಗೆ ಭಾರತ ಖಂಡನೆ

11/03/2026 9:53 PM

‘ಗೂಗಲ್, ಮೈಕ್ರೋಸಾಫ್ಟ್’ನಂತಹ ಕಂಪನಿಗಳ ಮೇಲೆ ದಾಳಿ ಮಾಡುತ್ತೇವೆ ; ಅಮೆರಿಕ, ಇಸ್ರೇಲ್’ಗೆ ಇರಾನ್ ಎಚ್ಚರಿಕೆ

11/03/2026 9:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಗಡಿ ತಾಲ್ಲೂಕಿಗೆ ಆರೋಗ್ಯ ರಕ್ಷೆ: ಸೆ.1ಕ್ಕೆ ಭಾಗ್ಯನಗರದಲ್ಲಿ ಸಾಯಿ ಸ್ವಾಸ್ಥ್ಯ ವೆಲ್‌ನೆಸ್‌ ಸೆಂಟರ್ ಉದ್ಘಾಟನೆ
KARNATAKA

ರಾಜ್ಯದ ಗಡಿ ತಾಲ್ಲೂಕಿಗೆ ಆರೋಗ್ಯ ರಕ್ಷೆ: ಸೆ.1ಕ್ಕೆ ಭಾಗ್ಯನಗರದಲ್ಲಿ ಸಾಯಿ ಸ್ವಾಸ್ಥ್ಯ ವೆಲ್‌ನೆಸ್‌ ಸೆಂಟರ್ ಉದ್ಘಾಟನೆ

By kannadanewsnow0931/08/2025 8:44 PM

ಚಿಕ್ಕಬಳ್ಳಾಪುರ: ಬಾಗೇಪಲ್ಲಿ (ಭಾಗ್ಯನಗರ) ಪಟ್ಟಣದಲ್ಲಿ ಸೋಮವಾರ (ಸೆ 1) ಶಾಹ್ ಹ್ಯಾಪಿನೆಸ್ ಅರ್ಜೆಂಟ್ ಕೇರ್ ಸಾಯಿ ಸ್ವಾಸ್ಥ್ಯ ವೆಲ್‌ನೆಸ್‌ ಸೆಂಟರ್ ಆರಂಭವಾಗಲಿದೆ. ‘ಒಂದು ಜಗತ್ತು ಒಂದು ಕುಟುಂಬ’ ಪ್ರತಿಷ್ಠಾನವು ಕ್ಯಾಲಿಫೋರ್ನಿಯಾ ಮೂಲದ ದತ್ತಿ ಸಂಸ್ಥೆ ‘ಶಾಹ್ ಹ್ಯಾಪಿನೆಸ್ ಫೌಂಡೇಷನ್’ ಹಾಗೂ ಸರ್ವಮಂಗಳ್ ಕುಟುಂಬ ದತ್ತಿಯ ಸಹಯೋಗದಲ್ಲಿ ಈ ಕೇಂದ್ರವನ್ನು ನಾಡಿಗೆ ಲೋಕಾರ್ಪಣೆ ಮಾಡುತ್ತಿದೆ. ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಈ ಆರೋಗ್ಯ ಕೇಂದ್ರವನ್ನು ನಿರ್ವಹಿಸಲಿದೆ.

ಈ ಆರೋಗ್ಯ ಕೇಂದ್ರವು ‘ಒಂದು ಜಗತ್ತು ಒಂದು ಕುಟುಂಬದ ಸಾಯಿ ಸ್ವಾಸ್ಥ್ಯ ಚಿಕಿತ್ಸಾಲಯ’ ಸಮೂಹದ ಭಾಗವಾಗಲಿದೆ. ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕೆನ್ನುವ ಗುರಿಯನ್ನು ಈ ಚಿಕಿತ್ಸಾಲಯವು ಹೊಂದಿದೆ.

ಸಾಯಿ ಸ್ವಾಸ್ಥ್ಯ ವೆಲ್‌ನೆಸ್‌ ಸೆಂಟರ್‍‌ನಲ್ಲಿ ಲಭ್ಯವಿರುವ ಸೌಲಭ್ಯಗಳು

* ದಿನ ನಿತ್ಯದ ಅನಾರೋಗ್ಯ ಸಮಸ್ಯೆಗಳಿಗೆ ತುರ್ತು ಸೇವೆಗಳು, ಪ್ರಥಮ ಚಿಕಿತ್ಸೆ ಹಾಗೂ ತುರ್ತು ಸಾಮಾನ್ಯ ವೈದ್ಯಕೀಯ ಸೇವೆಗಳು
* ಎಕ್ಸ್-ರೇ, ಪ್ರಯೋಗಾಲಯ ಹಾಗೂ ಆಪ್ಟೋಮೆಟ್ರಿ ಘಟಕಗಳು ಸೇರಿದಂತೆ ಡಯೋಗ್ನಸ್ಟಿಕ್ ಸೌಲಭ್ಯಗಳು
* ಶ್ರೀಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಾರ್ಡಿಯಾಲಜಿ ಮತ್ತು ಕಾರ್ಡಿಯೋಥೊರಾಸಿಕ್ ಸರ್ಜಿ (ಸಿಟಿವಿಎಸ್), ಆರ್ಥೋಪೆಡಿಕ್ಸ್, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಜನರಲ್ ಸರ್ಜರಿ, ಜನರಲ್ ಮೆಡಿಸಿನ್, ಪೀಡಿಯಾಟ್ರಿಕ್ಸ್, ನೇತ್ರವಿಜ್ಞಾನ ಹಾಗೂ ಇಎನ್‌ಟಿ ಮುಂತಾದ ವಿಭಾಗಗಳ ತಜ್ಞರೊಂದಿಗೆ ವಿಶೇಷ ಸಮಾಲೋಚನೆ
* ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳೂ ಸೇರಿದಂತೆ ಸಾಂಕ್ರಾಮಿಕವಲ್ಲದ ಕಾಯಿಲೆಗಳ ನಿರ್ವಹಣೆ
* ಶ್ರೀಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ತಜ್ಞರೊಂದಿಗೆ ಟೆಲಿ ಮೆಡಿಸಿನ್ ಸೇವೆಗಳ ಮೂಲಕ ವರ್ಚುವಲ್ ಸಮಾಲೋಚನೆ, ಅನುಪಾಲನಾ ಆರೈಕೆ ಮತ್ತು ಮೇಲ್ವಿಚಾರಣೆ
* ಅಗತ್ಯವಿರುವ ರೋಗಿಗಳಿಗೆ ಮುದ್ದೇನಹಳ್ಳಿಯ ಶ್ರೀಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಕರೆದೊಯ್ಯಲು ಸುಗಮ ಸಾರಿಗೆ ಮತ್ತು ಸುಧಾರಿತ ಮಧ್ಯಂತರ ಚಿಕಿತ್ಸಾ ಸೌಲಭ್ಯ

ಲಭ್ಯವಿರುವ ವೈದ್ಯಕೀಯ ಸಿಬ್ಬಂದಿ

ಈ ಕೇಂದ್ರದಲ್ಲಿ ಪೂರ್ಣಾವಧಿ ವೈದ್ಯರು, ನರ್ಸ್ ಹಾಗೂ ಪ್ರಯೋಗಾಲಯ ತಂತ್ರಜ್ಞರು ಇರುತ್ತಾರೆ. ಪೂರ್ವನಿಗದಿಯಂತೆ ವಾರವಿಡೀ ರೊಟೇಷನ್ ಆಧಾರದಲ್ಲಿ ತಜ್ಞ ವೈದ್ಯರು ಭೇಟಿ ನೀಡುತ್ತಾರೆ. ಗ್ರಾಮೀಣ ಭಾರತದಲ್ಲಿ ಉಚಿತ, ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ವಿಸ್ತರಿಸುವ ಧ್ಯೇಯದೊಂದಿಗೆ ಈ ಮಹತ್ವದ ಹೆಜ್ಜೆ ಇರಿಸಲಾಗಿದೆ. ಈ ಉಪ್ರಕಮವು ಆಧುನಿಕ ವೈದ್ಯಕೀಯ ಪರಿಣತಿಯನ್ನು ಸಹಾನುಭೂತಿಯ ಸೇವೆಯೊಂದಿಗೆ ಸಂಯೋಜಿಸಲಿದೆ.

ಉದ್ಘಾಟನಾ ಸಮಾರಂಭ

ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಭಾಗವಹಿಸಲಿದ್ದಾರೆ. ಮನು ಭಾವಿ ಶಾ, ಡಾ ನಿತಿನ್ ಭಾಯಿ ಶಾ, ಎಂಎಎಸ್ಐ ಭಾರತದ ತಂಡದ ಸದಸ್ಯರು ಉಪಸ್ಥಿತರಿರುತ್ತಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ತಂಡವು ತಂಡ ವರ್ಚುವಲ್ ಆಗಿ ಭಾಗವಹಿಸುತ್ತದೆ. ಕಾರ್ಯಕ್ರಮವು ಸೆ 1 ರಂದು ಬೆಳಗ್ಗೆ 6 ಗಂಟೆಗೆ ಸಾಂಪ್ರದಾಯಿಕ ಪೂಜೆಯೂಂದಿಗೆ ಪ್ರಾರಂಭವಾಗುತ್ತದೆ. ನಂತರ ಸದ್ಗುರುಗಳ ಆಶೀರ್ವಚನ, ನಾಮಫಲಕ ಅನಾವರಣ ಹಾಗೂ ಕೇಂದ್ರದಲ್ಲಿರುವ ಸೌಲಭ್ಯಗಳು ಲೋಕಾರ್ಪಣೆಯಾಗಲಿವೆ.
ಸ್ಥಳ: ಶ್ರೀ ಲಕ್ಷ್ಮೀ ವೆಂಕಟೇಶ್ವರ ನಿಲಯ, ಡಿವಿಜಿ ರಸ್ತೆ, ಭಾಗ್ಯನಗರ (ಬಾಗೇಪಲ್ಲಿ), ಮಾಹಿತಿಗೆ 92402 62091, www.saiswasthya.org

ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ

ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. ‘ವಸುಧೈವ ಕುಟುಂಬಕಂ’ (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, ‘ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ’ (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.

ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.

ಬಿಬಿಎಂಪಿ ಹೊಸ ವಾರ್ಡ್ ರಚನೆ ಗೊಂದಲದ ಬಗ್ಗೆ ಮುಖ್ಯ ಆಯುಕ್ತರಿಂದ ಈ ಸ್ಪಷ್ಟನೆ

ಕೇವಲ 15 ಸೆಕೆಂಡುಗಳಲ್ಲಿ ‘AI-ಚಾಲಿತ ಸ್ಟೆತೊಸ್ಕೋಪ್’ ಹೃದಯದ ಸ್ಥಿತಿ ಪತ್ತೆ | AI-Powered Stethoscope

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ, ಬಾರ್ಕಿ `ST’ ಪಟ್ಟಿಗೆ ಸೇರಿಸಲು ಶಿಫಾರಸು : ಸಚಿವ ಪ್ರಿಯಾಂಕ್ ಖರ್ಗೆ

11/03/2026 8:40 PM1 Min Read

ಗ್ಯಾಸ್ ಇಲ್ಲದಿದ್ದರೂ ನಿಮಿಷಗಳಲ್ಲಿ ಅಡುಗೆ ರೆಡಿ : ಪ್ರತಿ ಮನೆಯಲ್ಲೂ ಇರಲೇಬೇಕು ಈ 5 ‘ಮ್ಯಾಜಿಕ್’ ಸ್ಟವ್‌’ ಗಳು !

11/03/2026 8:32 PM2 Mins Read

14 ವರ್ಷದ ಹೆಣ್ಣು ಮಕ್ಕಳಿಗೆ `HPV’ ಲಸಿಕೆ : ಪೋಷಕರೊಂದಿಗೆ ಬರುವುದು ಕಡ್ಡಾಯ !

11/03/2026 8:15 PM2 Mins Read
Recent News

ಭಾರತೀಯರ ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ, ಆದ್ರೆ ಕಾಂಗ್ರೆಸ್ ಯುದ್ಧವನ್ನ ರಾಜಕೀಯಗೊಳಿಸ್ತಿದೆ : ಪ್ರಧಾನಿ ಮೋದಿ

11/03/2026 10:12 PM

ಹಾರ್ಮುಜ್ ಜಲಸಂಧಿಯಲ್ಲಿ ಕಾಂಡ್ಲಾಗೆ ತೆರಳುತ್ತಿದ್ದ ಹಡಗಿನ ಮೇಲಿನ ದಾಳಿಗೆ ಭಾರತ ಖಂಡನೆ

11/03/2026 9:53 PM

‘ಗೂಗಲ್, ಮೈಕ್ರೋಸಾಫ್ಟ್’ನಂತಹ ಕಂಪನಿಗಳ ಮೇಲೆ ದಾಳಿ ಮಾಡುತ್ತೇವೆ ; ಅಮೆರಿಕ, ಇಸ್ರೇಲ್’ಗೆ ಇರಾನ್ ಎಚ್ಚರಿಕೆ

11/03/2026 9:08 PM

ರಾಜ್ಯದಲ್ಲಿ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ, ಬಾರ್ಕಿ `ST’ ಪಟ್ಟಿಗೆ ಸೇರಿಸಲು ಶಿಫಾರಸು : ಸಚಿವ ಪ್ರಿಯಾಂಕ್ ಖರ್ಗೆ

11/03/2026 8:40 PM
State News
KARNATAKA

ರಾಜ್ಯದಲ್ಲಿ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ, ಬಾರ್ಕಿ `ST’ ಪಟ್ಟಿಗೆ ಸೇರಿಸಲು ಶಿಫಾರಸು : ಸಚಿವ ಪ್ರಿಯಾಂಕ್ ಖರ್ಗೆ

By kannadanewsnow5711/03/2026 8:40 PM KARNATAKA 1 Min Read

ಬೆಂಗಳೂರು: ರಾಜ್ಯದ ಪ್ರಮುಖ ಸಮುದಾಯಗಳಾದ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಮತ್ತು ಬಾರ್ಕಿ ಸಮಾಜಗಳನ್ನು ಪರಿಶಿಷ್ಟ ಪಂಗಡ (ST) ಪಟ್ಟಿಗೆ…

ಗ್ಯಾಸ್ ಇಲ್ಲದಿದ್ದರೂ ನಿಮಿಷಗಳಲ್ಲಿ ಅಡುಗೆ ರೆಡಿ : ಪ್ರತಿ ಮನೆಯಲ್ಲೂ ಇರಲೇಬೇಕು ಈ 5 ‘ಮ್ಯಾಜಿಕ್’ ಸ್ಟವ್‌’ ಗಳು !

11/03/2026 8:32 PM

14 ವರ್ಷದ ಹೆಣ್ಣು ಮಕ್ಕಳಿಗೆ `HPV’ ಲಸಿಕೆ : ಪೋಷಕರೊಂದಿಗೆ ಬರುವುದು ಕಡ್ಡಾಯ !

11/03/2026 8:15 PM

BIG NEWS : ಕರ್ನಾಟಕದಲ್ಲಿ ₹6.70 ಲಕ್ಷ ಕೋಟಿ ಮೊತ್ತದ 117 ಹೂಡಿಕೆ ಒಪ್ಪಂದಗಳಿಗೆ ಸಹಿ : 2.47 ಲಕ್ಷ ಉದ್ಯೋಗಗಳ ಸೃಷ್ಟಿ

11/03/2026 7:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.