ಕೋಲಾರ: ಜಿಲ್ಲೆಯಲ್ಲಿ ನಕಲಿ ಕ್ಲಿನಿಕ್ ಗಳು ಹಾಗೂ ನೋಂದಣಿ ಪಡೆಯದೇ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿರುವ ಆರೋಗ್ಯ ಸಂಸ್ಥೆಗಳನ್ನು ಏಕಕಾಲದಲ್ಲಿ ಕಾರ್ಯಾಚರಣೆ ಮಾಡಿ ಬೀಗಮುದ್ರೆಯನ್ನು ಹಾಕಲಾಗಿದೆ.
ಈ ಕುರಿತಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಇಂದು ಡಿಹೆಚ್ಓ ಡಾ.ಶ್ರೀನಿವಾಸ್.ಜಿ ನೇತೃತ್ವದಲ್ಲಿ ಜಿಲ್ಲೆಯಾಧ್ಯಂತ 5 ತಂಡಗಳನ್ನು ರಚನೆ ಮಾಡಿ, ನೋಂದಣಿ ಪಡೆಯದೇ ಅಕ್ರಮವಾಗಿ ನಡೆಸುತ್ತಿರುವಂತ ನಕಲಿ ಕ್ಲಿನಿಕ್ ಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಗಿರುವುದಾಗಿ ತಿಳಿಸಿದೆ.
ಶ್ರೀನಿವಾಸಪುರದಲ್ಲಿ ವೈದ್ಯಕೀಯ ವಿದ್ಯಾರ್ಹತೆ ಇಲ್ಲದಿದ್ದರೂ ನಡೆಸುತ್ತಿದ್ದಂತ ವೆಂಕಟೇಶ್ವರ ಕ್ಲಿನಿಕ್, ನಾರಾಯಣ ಕ್ಲಿನಿಕ್, ರಿಷಿ ವಿನಾಯಕ ಕ್ಲಿನಿಕ್, ಎಸ್ ಎಲ್ ಎನ್ ಕ್ಲಿನಿಕ್, ನವೀದ್ ಕ್ಲಿನಿಕಲ್ ಲ್ಯಾಬ್, ಮಂಜುನಾಥ್ ಕ್ಲಿನಿಕ್ ಗಳನ್ನು ಸೀಜ್ ಮಾಡಲಾಗಿದೆ.
ಕೋಲಾರದಲ್ಲಿ ಹರ್ಷಿತ ಕ್ಲಿನಿಕ್ ಅನ್ನು ವೈದ್ಯಕೀಯ ವಿದ್ಯಾರ್ಹತೆ ಹೊಂದಿಲ್ಲದೇ ನಡೆಸುತ್ತಿದ್ದಕ್ಕೆ ಸೀಜ್ ಮಾಡಿದ್ದರೇ, ಕೆಜಿಎಫ್ ನಲ್ಲಿನ ಆನಂದ್ ಕ್ಲಿನಿಕ್ ಎಂಬುದನ್ನು ಅದೇ ಕಾರಣಕ್ಕೆ ಬೀಗಮುದ್ರೆ ಜಡಿಯಲಾಗಿದೆ ಎಂಬುದಾಗಿ ಡಿಹೆಚ್ಓ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
BREAKING NEWS: ‘ಜಪಾನ್’ನಲ್ಲಿ 6.9 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ | Earthquake Strikes In Japan
BIG NEWS: ಬೆಂಗಳೂರಲ್ಲಿ ಅನಧಿಕೃತ ಜಾಹೀರಾತು ಅಳವಡಿಸುವವರ ಮೇಲೆ ‘FIR’ ದಾಖಲಿಸಿ: ತುಷಾರ್ ಗಿರಿನಾಥ್ ಖಡಕ್ ಸೂಚನೆ