ಬೆಂಗಳೂರು : ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಕೊಠಡಿ ಒಳಗೆ ಗರ್ಭಿಣಿಯರನ್ನು ಹೊರತುಪಡಿಸಿ ಇತರೆ ಸಂಬಂಧಿಕರು ಹಾಗೂ ಹೆಚ್ಚುವರಿ ಮಾನಿಟರ್ ಅನ್ನು ನಿಷೇಧಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಗರ್ಭ ಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆಗೆ ಸಂಬಂಧಿಸಿದ ಕಾರ್ಯಗಾರದಲ್ಲಿ ರೆಡಿಯಾಲಜಿಸ್ಟ್, ಸೋನಾಲಜಿಸ್ಟ್ ಹಾಗೂ ಸ್ತ್ರೀ ರೋಗ ತಜ್ಞರು ಈ ಬಗ್ಗೆ ಚರ್ಚಿಸಿದ್ದರು.
ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಕೊಠಡಿಯೊಳಗೆ ಗರ್ಭಿಣಿಯರ ಜೊತೆಗೆ ಇರುವ ಸಂಬಂಧಿಗಳು ಅಲ್ಟ್ರಾ ಸೌಂಡ್ ಕಾರ್ಯ ವಿಧಾನಗಳ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ ಕೆಲವರು ಈ ವಿಡಿಯೋ ಮತ್ತು ಫೋಟೋಗಳನ್ನ ಭ್ರೂಣಲಿಂಗ ಪತ್ತೆಗೆ ಬಳಸಿಕೊಳ್ಳುತ್ತಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.