ಕೆಎನ್ಎನ್ ಡಿಜಿಟಲ್ ಡೆಸ್ಕ್ : ದಾಳಿಂಬೆ ಹಣ್ಣು ಉತ್ಕೃಷ್ಠ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು,ದಾಳಿಂಬೆ ಆಯಂಟಿ ಆಕ್ಸಿಡೆಂಟ್, ಆಯಂಟಿ ವೈರಲ್, ಆಯಂಟಿ ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದೆ.
ವಿಟಮಿನ್ ಎ, ಸಿ, ಈ ಮತ್ತು ಪೋಲಿಕ್ ಆಮ್ಲ ಸೇರಿದಂತೆ ಅನೇಕ ಜೀವಸತ್ವಗಳನ್ನು ಒಳಗೊಂಡಿದೆ. ಪ್ಯುನಿಕಾಲಾಜಿನ್ ಮತ್ತು ಪ್ಯುನಿಕ್ ಆಸಿಡ್ ಎಂಬ ಎರಡು ಸಂಯುಕ್ತಗಳನ್ನು ಹೊಂದಿದ್ದು ಇವು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ.
ಪ್ರತಿದಿನ ದಾಳಿಂಬೆ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಧುಮೇಹ ಟೈಪ್ 2 ವಿರುದ್ಧ ಹೋರಾಡುತ್ತದೆ ಮತ್ತು ಜೀರ್ಣಶಕ್ತಿಯನ್ನು ಸುಮಗೊಳಿಸುತ್ತದೆ.
ದಾಳಿಂಬೆ ಹಣ್ಣಿನ ಆರೋಗ್ಯಕರ ಪ್ರಯೋಜನಗಳು
ಹೃದಯದ ಆರೋಗ್ಯ
ದಾಳಿಂಬೆ ಹಣ್ಣು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇದು ರಕ್ತವನ್ನು ತೆಳುವಾಗಿಸುತ್ತದೆ ಅನಗತ್ಯವಾಗಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ರಕ್ತ ಸೂಕ್ತ ರೀತಿಯ ಚಲನೆಗೆ ಸಹಾಯ ಮಾಡುತ್ತದೆ. ಇದು ಹೃದಯ ಸೂಕ್ತವಾಗಿ ಕಾರ್ಯನಿರ್ವಹಿಸುತ್ತದೆ.
ಸಂಧಿವಾತ ನಿವಾರಣೆ
ದಾಳಿಂಬೆ ಹಣ್ಣು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಆದ್ದರಿಂದ ಈ ಹಣ್ಣು ಸೇವಿಸುವುದರಿಂದ ಸಂಧಿವಾತ ನಿವಾರಣೆಗೆ ಸಹಾಯ ಮಾಡುತ್ತದೆ. ಮತ್ತು ಇದು ಹಾನಿ ಉಂಟು ಮಾಡುವ ಕಿಣ್ವಗಳ ವಿರುದ್ಧ ಹೋರಾಡುತ್ತದೆ
ರೋಗಗಳ ನಿಯಂತ್ರಣ
ಪಾರ್ಶ್ವವಾ ಮತ್ತು ಹೃದಯಾಘಾತದಲ್ಲಿ ಅಧಿಕ ರಕ್ತದೊತ್ತಡ ಪ್ರಮುಖ ಅಂಶವಾಗಿದೆ. ದಾಳಿಂಬೆಯಲ್ಲಿರುವ ಪ್ಯುನಿಕ್ ಆಮ್ಲ ದೇಹದಲ್ಲಿರುವ ಟ್ರೈಗ್ಲಿಸರೈಡ್ಸ್ ಕಡಿಮೆಯಾಗುತ್ತದೆ. ರಕ್ತದ ಹರಿವನ್ನು ನಿಯಂತ್ರಿಸುತ್ತದೆ.
ಟೈಪ್ 2 ಮಧುಮೇಹ ತಡೆ
ಕೆಲವು ಅಧ್ಯಯನದ ಪ್ರಕಾರ ಈ ಹಣ್ಣಿನಲ್ಲಿ ಪ್ಯುನಿಕಾಲಾಜಿನ್ ಮತ್ತು ಪ್ಯುನಿಕ್ ಆಸಿಡ್ ಎಲ್ಲಾಜಿಕ್, ಗ್ಯಾಲಿಕ್, ಒಲಿಯನೋಲಿಕ್, ಉರ್ಸೋಲಿಕ್, ಆಮ್ಲಗಳಿವೆ.ಈ ಆಮ್ಲಗಳು ಮಧುಮೇಹದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಟೈಪ್ 2 ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.
ಸೊಂಕುಗಳಿಂದ ದೂರವಿಡುತ್ತದೆ
ದಾಳಿಂಬೆ ಆಯಂಟಿ ಆಕ್ಸಿಡೆಂಟ್, ಆಯಂಟಿ ವೈರಲ್, ಆಯಂಟಿ ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದ್ದು ಶೀತ ಮತ್ತು ಜ್ವರದಂತಹ ಅನೇಕ ಸೋಂಕುಗಳನ್ನು ದೂರ ಮಾಡುತ್ತದೆ.
ಮೊಡವೆಗಳ ನಿವಾರಣೆ
ಉರಿಯೂತದ ವಿರೋಧಿ ಗುಣದಿಂದ ದಾಳಿಂಬೆ ಮೊಡವೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿರುವ ಆಯಂಟಿ ಆಕ್ಸಿಡೆಂಟ್ಗಳು ಮೊಡವೆಗೆ ಕಾರಣವಾಗುವ ರಾಸಾಯನಿಕಗಳು ವಿರುದ್ಧವಾಗಿರುತ್ತವೆ. ದಾಳಿಂಬೆ ಬೀಜಗಳನ್ನು ಅರಿಶಿನದೊಂದಿಗೆ ಪುಡಿಮಾಡಿ ಮೊಡವೆಗಳಾಗಿರುವ ಸ್ಥಳಕ್ಕೆ ಲೇಪಿಸಿದರೆ ಮೊಡವೆ ನಿವಾರಣೆಯಾಗುತ್ತದೆ.
ವಯಸ್ಸಾಗುವಿಕೆಯನ್ನು ಮರೆಮಾಚುತ್ತದೆ
ಅನಾರ್ ಹಣ್ಣು ಮುಪ್ಪಿನ ಸೂಚನೆಗಳ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ. ಇಲ್ಲ ಸುಕ್ಕುಗಳನ್ನು ತಡೆಗಟ್ಟುತ್ತದೆ. ಇದರಲ್ಲಿರವು ಕೊಲಾಜಾನ್ ಚರ್ಮದ ಮೃದುತ್ವಕ್ಕೆ ಸಹಾಯ ಮಾಡುತ್ತದೆ. ಅದರೊಂದಿಗೆ ಜೀವಕೋಶಗಳು ನಡೆಯುತ್ತವೆ.
ಸೂರ್ಯನ ಕಿರಣಗಳಿಂದ ರಕ್ಷಣೆ
ದಾಳಿಂಬೆ ಸಿಪ್ಪೆಯು ಅತ್ಯಂತ ಉಪಕಾರಿ. ದಾಳಿಂಬೆ ಹಣ್ಣಿನ ಸಿಪ್ಪೆ ಒಳ್ಳೆಯ ಸ್ಕ್ರಬ್ಬಿಂಗ್ ಫೇಸ್ ಪ್ಯಾಕ್ ಮತ್ತು ಎಸ್ಪೋಲಿಆಂಟ್ ಆಗಿ ಉಪಯೋಗಿಸಬಹುದು. ಇದು ನಿಮ್ಮ ಚರ್ಮವನ್ನು ಸೂರ್ಯನ ಅಪಾಯಕಾರಿ ಕಿರಣಗಳಿಂದ ರಕ್ಷಿಸುತ್ತದೆ.
ಬೆಳವಣಿಗೆ ಸಹಾಯಕ
ದಾಳಿ ಹಣ್ಣಿನಲ್ಲಿರುವ ಮಿಟಮಿನ್ಗಳು ನೈಸರ್ಗಿಕ ನೈಸರ್ಗಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕಪ್ಪು ಮತ್ತು ಉದ್ದನೆಯ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಕೂದಲು ಸೀಳುವುದು, ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ
ರಕ್ತ ಸಂಚಲನಕ್ಕೆ ಸಹಕಾರಿ
ದಾಳಿಂಬೆಯಲ್ಲಿರುವ ಪ್ಯುನಿಕ್ ಆಮ್ಲ ನಿಮ್ಮ ನೆತ್ತಿಗೆ ರಕ್ತ ಸಂಚಲನವನ್ನು ಸುಧಾರಿಸುತ್ತದೆ. ಇದರಿಂದ ನಿಮ್ಮ ಕೂದಲಿನ ಕಿರುಚೀಲಗಳು ಬಲವಾಗಿ ಕೂದಲು ಬಲವಾಗಿ ಬೆಳೆಯುತ್ತದೆ.
ಜೀರ್ಣಕ್ರಿಯೆ ಸುಧಾರಣೆ
ಹಣ್ಣಿನಲ್ಲಿರುವ ನಾನಾಂಶ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವುದರೊಂದಿಗೆ ಕರುಳಿನಲ್ಲಿ ಆಹಾರ ಹೀರುವಿಕೆ ಕಡಿಮೆಯಾಗುತ್ತದೆ. ಇದು ಅನಗತ್ಯ ಆಹಾರ ಸೇವನೆಯನ್ನು ತಡೆಗಟ್ಟುತ್ತದೆ. ಇದು ತೂಕ ಹೊಂದುವವರಿಗೆ ಸೂಕ್ತವಾದ ಹಣ್ಣು.
ರೋಗನಿರೋಧಕ ಶಕ್ತಿ ಹೆಚ್ಚಳ
ದಾಳಿಂಬೆ ಹಣ್ಣಿನಲ್ಲಿ ಆಯಂಟಿ ಆಕ್ಸಿಡೆಂಟ್ಗಳು ಹೆಚ್ಚಾಗಿದ್ದು ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಇದು ಎಲ್ಲಾ ರೀತಿಯ ವೈರಸ್ ಮತ್ತು ವಿರುದ್ಧ ಹೋರಾಡುತ್ತದೆ.