ಬೆಂಗಳೂರು : ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ವೀರಗಾಸೆ ಕಲಾವಿದರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ವೀರಶೈವರ ಸಾಂಪ್ರದಾಯಿಕ ಕುಣಿತವಾಗಿರುವ ವೀರಗಾಸೆಗೆ ಅಪಮಾನ ಮಾಡಲಾಗಿದೆ. ಕೂಡಲೇ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂಬ ಆಗ್ರಹ ಕೇಳಿಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬಾಯ್ ಕಾಟ್ ಹೆಡ್ ಬುಷ್ ಅಭಿಯಾನ ಪ್ರಾರಂಭವಾಗಿದೆ.
ಸಿನಿಮಾ ವಿವಾದದ ಬಗ್ಗೆ ಹಲವು ಕಡೆಗಳಲ್ಲಿ ನಟ ಧನಂಜಯ್ ಸ್ಪಷ್ಟನೆ ನೀಡಿದರೂ ಈ ಸಿನಿಮಾ ವಿರುದ್ಧ, ತಂಡದ ವಿರುದ್ಧ ಅನೇಕರು ಧ್ವನಿ ಎತ್ತುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಇದು ಧನಂಜಯ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಧನಂಜಯ್ ಅವರ ಸಿನಿಮಾದಲ್ಲಿ ಬರುವ ‘ಬಡವರ ಮಕ್ಕಳು ಬೆಳೀಬೇಕ್ ಕಣ್ರಯ್ಯ’ ಎಂಬ ಡೈಲಾಗ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ.ಇದರ ನಡುವೆ ಹಲವರು ಡಾಲಿ ಧನಂಜಯ್ ಬೆಂಬಲಕ್ಕೆ ನಿಂತಿದ್ದು, ನಾವು ಡಾಲಿ ಧನಂಜಯ್ ಪರವಾಗಿದ್ದೇವೆ ಎಂಬ ಧ್ವನಿ ಸದ್ದು ಮಾಡುತ್ತಿದೆ. ಕನ್ನಡದ ಇತರ ಸ್ಟಾರ್ ನಟ ಜೊತೆಗಿರುವ ಡಾಲಿ ಧನಂಜಯ್ ಫೋಟೋ ಹಾಗೂ ಅವರು ಮಾತನಾಡಿರುವ ವೀಡಿಯೋಗಳ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ, #WeStandWithDhananjaya ಹ್ಯಾಷ್ ಟ್ಯಾಗ್ ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗಿದೆ.
We Dboss fans are always with you
@Dhananjayaka anna , Stay Strongಬಡವರ ಮನೆ ಮಕ್ಕಳು ಬೆಳಿಬೇಕು – ಧನಂಜಯ @dasadarshan#D56 #Kranti #DBoss𓃰#HeadBush #Dhananjaya #KFI #WeStandWithDhananjaya pic.twitter.com/CpRTnhbJRq
— tarak shashi M (@ShashimTarak) October 26, 2022
ದರ್ಶನ್, ಕಿಚ್ಚ ಸುದೀಪ್, ನಟ ಯಶ್ ಸೇರಿದಂತೆ ಅನೇಕ ಸ್ಯಾಂಡಲ್ವುಡ್ ಖ್ಯಾತ ಕಲಾವಿದರ ಜೊತೆ ಡಾಲಿ ಧನಂಜಯ್ ಇರುವ ಫೋಟೋ ಜೊತೆ #WeStandWithDhananjaya ಹ್ಯಾಷ್ ಟ್ಯಾಗ್ ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗಿದೆ. ಸಿನಿಮಾದಲ್ಲಿ ರಾಜಕೀಯ/ಧರ್ಮ ಪ್ರೇರಿತ ಕೆಸರು ಎರಚುವುದು ನಿಲ್ಲಬೇಕಿದೆ.. ಯಾವ ವಿವಾದವೂ ನಿಮ್ಮನ್ನು ತುಳಿಯಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಈ ಕುರಿತು ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ನೀಡಿದ್ದು, ತಾನೂ ಕೂಡ ವೀರಭದ್ರ ದೇವರ ಆರಾಧಕ ಆಗಿರುವುದರಿಂದ ಯಾವುದೇ ಕಾರಣಕ್ಕೂ ಅವಮಾನ ಮಾಡಿಲ್ಲ ಎಂದು ಹೇಳಿದ್ದಾರೆ. ಇಂದು ವೀರಗಾಸೆ ಕಲಾವಿದರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುತ್ತಿದ್ದೇನೆ. ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇನೆ. ನನಗೂ ವೀರಭದ್ರ ದೇವರ ಮೇಲೆ ಅಪಾರ ಭಕ್ತಿ.. ಹಾಗಾಗಿ ನನ್ನಿಂದ ಯಾವುದೇ ಅವಮಾನ ಆಗುವಂತಹ ಕೆಲಸ ಆಗಲ್ಲ ಎಂದಿದ್ದಾರೆ ಧನಂಜಯ್. ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ವೀರಗಾಸೆ ಕಲಾವಿದರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸಾಹಸ ಸನ್ನಿವೇಶದಲ್ಲಿ ವೀರಗಾಸೆ ಕಲಾವಿದರಿಗೆ ಒದೆಯಲಾಗಿದೆ. ಅದು ಕಲೆ ಮತ್ತು ವೀರಭದ್ರ ದೇವರಿಗೆ ಮಾಡಿದ ಅಪಮಾನ ಎಂದು ಕಲಾವಿದರು ಆಕ್ಷೇಪಿಸಿದ್ದಾರೆ.
Vastu Tips: ನಿಮ್ಮ ಮನೆ ಮುಖ್ಯದ್ವಾರದ ಬಳಿ ಏನೆಲ್ಲಾ ವಸ್ತು ಇಡಬೇಕು..! ವಾಸ್ತು ಸಲಹೆಗಳೇನು?