ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದ ಮತ್ತೊಂದು ಸ್ಪೋಟಕವಾದಂತಹ ಅಂಶ ಬಹಿರಂಗವಾಗಿದೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುವಾಗ ಆತನ ಎಡಗಣ್ಣಿಗೆ ಗಂಭೀರವಾದ ಗಾಯವಾಗಿತ್ತು. ಇದೀಗ ಎಡಗಣ್ಣಿಗೆ ಹೇಗೆ ಗಾಯ ಆಗಿತ್ತು ಎಂಬುದರ ಕುರಿತು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಹಾಗಾದರೆ ಅಂದು ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾ ಸ್ವಾಮಿ ಎಡೆಗಣ್ಣಿಗೆ ಏಟು ಬಿದ್ದಿದ್ದು ಹೇಗೆ? ಅಂದು ದರ್ಶನ್ ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸುವಾಗ ಸಿನೆಮಾ ಸ್ಟೈಲ್ ನಲ್ಲಿ ರೇಣುಕಾ ಸ್ವಾಮಿ ಕಣ್ಣಿಗೆ ಪಂಚ್ ಕೊಟ್ಟಿದ್ದಾರೆ. ತಮ್ಮ ಪಟಾಲಂ ಮಾತು ಕೇಳಿ ಕಣ್ಣಿಗೆ ಪಂಚ್ ಕೊಟ್ಟಿದ್ದ ಆರೋಪಿ ದರ್ಶನ್.
ತಮ್ಮ ಸುತ್ತಲೂ ಇದ್ದ ಕೆಲವು ಆರೋಪಿಗಳಿಬ್ಬರ ಮಾತು ಕೇಳಿ ದರ್ಶನ್ ಎಡಗಣ್ಣಿಗೆ ಪಂಚ್ ಕೊಟ್ಟಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲೋ ಉಲ್ಲೇಖವಾಗಿದೆ. ಹೊಡಿರಿ ಬಾಸ್ ಹೊಡಿರಿ ಅತ್ತಿಗೆನ ಕೆಟ್ಟ ದೃಷ್ಟಿಯಲ್ಲಿ ನೋಡಿದ ಈ ಕಣ್ಣು ಇರಬಾರದು ಎಂದು ಇಬ್ಬರು ರೇಣುಕಾ ಸ್ವಾಮಿಯ ಎರಡು ಕೈಗಳನ್ನು ಹಿಡಿದುಕೊಂಡಿದ್ದರು. ಈ ವೇಳೆ ದರ್ಶನ್ ಸಿನಿಮಾ ಸ್ಟೈಲ್ ಅಲ್ಲಿ ಶ್ರೀ ರೇಣುಕಾ ಸ್ವಾಮಿ ಕಣ್ಣಿಗೆ ಪಂಚ್ ಕೊಟ್ಟಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.