ಬೆಳಗಾವಿ : ಇಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಅಪಘಾತವಾಗಿದ್ದು, ಈ ಒಂದು ಅಪಘಾತದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್, ಸಹೋದರ ಚೆನ್ನರಾಜ ಹಟ್ಟಿಹೊಳಿ ಹಾಗೂ ಚಾಲಕ, ಗನ್ ಮ್ಯಾನ್ ಎಲ್ಲರೂ ಗಾಯಗೊಂಡಿದ್ದ ಘಟನೆ ನಡೆದಿತ್ತು. ಈಗ ಈ ಒಂದು ಘಟನೆಯ ಸಂಭಂದಿಸಿದಂತೆ ಸಹೋದರ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡಿದ ಜನರ ಜೊತೆ ಹೋಳಿ ಮನೆಯಲ್ಲಿ ದುರ್ಘಟನೆ ನಡೆಯುವ ಸಂಭವವಿದೆ ಎಂದು ನಮಗೆ ಬೇಕಾದ ಅವರು ಭವಿಷ್ಯ ನುಡಿದಿದ್ದರು ಎಂದು ತಿಳಿಸಿದರು.
ಆಸ್ಪತ್ರೆಗೆ ಭೇಟಿ ನೀಡಿ ಸಹೋದರಿಯನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನೆಯಲ್ಲಿ ದುರ್ಘಟನೆ ನಡೆಯುವ ಸಂಭವವಿದೆ ಹೀಗಂತ ನಮಗೆ ಬೇಕಾದವರು ಭವಿಷ್ಯ ಹೇಳಿದ್ದರು. ಸಂಕ್ರಾಂತಿ ಮುಗಿಯುವವರೆಗೆ ಕಾಳಜಿ ಇರಲಿ ಅಂತ ಹೇಳಿದ್ದರು. ನಮ್ಮ ಬೆಳಗಾವಿ ಡ್ರೈವರ್ ನನ್ನು ದಾವಣಗೆರೆ ತನಕ ಕರೆಸಿದ್ರೆ ಈ ಒಂದು ಘಟನೆ ಸಂಭವಿಸುತ್ತಿರಲಿಲ್ಲ.
ನಾನು ಡ್ರೈವರ್ ಇಂದಿನ ಸೀಟ್ನಲ್ಲಿ ಕುಳಿತಿದ್ದರೆ ಸಹೋದರಿ ಗನ್ ಮ್ಯಾನ್ ಹಿಂದಿನ ಸೀಟಲ್ಲಿ ಕುಳಿತುಕೊಂಡಿದ್ದರು. ಬೆಳಗ್ಗೆ 5 ಗಂಟೆಗೆ ಒಂದರ ಹಿಂದೆ ಒಂದು ನಾಯಿ ಅಡ್ಡ ಬಂದ ಪರಿಣಾಮ ಚಾಲಕ ಏನು ಮಾಡಲು ಆಗದೆ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಹೀಗಾಗಿ ಈ ಒಂದು ಅಪಘಾತ ಸಂಭವಿಸಿದ್ದು, ಇದರಲ್ಲಿ ಚಾಲಕನದ್ದು ಏನು ತಪ್ಪಿಲ್ಲ. ತುಂಬಾ ಒಳ್ಳೆಯ ಡ್ರೈವರ್. ಚಾಲಕನಿಗೆ ಹಾಗೂ ಗನ್ ಮ್ಯಾನ್ ಗೆ ಗಾಯಗಳಾಗಿದ್ದು ಸಹೋದರಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಗಂಭೀರವಾದ ಗಾಯಗಳಾಗಿವೆ ಎಂದು ತಿಳಿಸಿದರು.
ನಿನ್ನೆ ಸಿ ಎಲ್ ಪಿ ಸಭೆಯನ್ನು ಮುಗಿಸಿ ನಾವು ಬೆಳಗಾವಿಗೆ ಹೊರಟಿದ್ದೆವು. ರಾತ್ರಿ ತರಾತುರಿಯಲ್ಲಿ 11ಗಂಟೆಗೆ ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದೆವು ವೀರಭದ್ರ ದೇವಸ್ಥಾನಕ್ಕೆ ಹೋಗಲು ನಿರ್ಧಾರ ಮಾಡಿದ್ದೆವು ರಾತ್ರಿಯ ತರಾತುರಿಯಲ್ಲಿ ಬೆಂಗಳೂರು ನಿವಾಸವನ್ನು ಬಿಟ್ಟೆವು ಇಂದು ಮುಂಜಾನೆ 5 ಗಂಟೆಗೆ ಅಪಘಾತ ಸಂಭವಿಸಿದೆ. ಎರಡು ನಾಯಿಗಳು ಒಂದರ ಹಿಂದೆ ಒಂದು ಅಡ್ಡ ಬಂದಿದ್ದವು ಚಾಲಕ ಏನು ಮಾಡಲು ಸಾಧ್ಯವಾಗಲಿಲ್ಲ. ನಾಯಿ ರಕ್ಷಣೆ ಮಾಡಲು ಹೋಗಿ ಎಡಕ್ಕೆ ಕಾರನ್ನು ತೆಗೆದುಕೊಂಡ. ಹೈವೇ ರಸ್ತೆಯ ಬದಿ ಇದ್ದ ಮರಕ್ಕೆ ಕಾರುಡಿಕ್ಕಿ ಹೊಡೆದಿದೆ. ಮನೆಯಲ್ಲಿ ಗಾಬರಿ ಆಗಿದ್ದರಿಂದ ನಾನು ಚಿಕಿತ್ಸೆ ಪಡೆದ ಬಳಿಕ ಮನೆಗೆ ಹೋಗಿದ್ದೆ ಎಂದು ತಿಳಿಸಿದರು.