ಬೆಂಗಳೂರು : ಕೇವಲ ರೈಲಿನ ಹೆಸರನ್ನು ಬದಲಾವಣೆ ಮಾಡುವುದರಿಂದ ಬಡವರಿಗೆ ಸಹಾಯ ಆಗುವುದಿಲ್ಲ, ನಮ್ಮ ದೇಶದಲ್ಲಿ ಬ್ರಿಟಿಷರ ಹೆಸರಿನಲ್ಲಿ ಈಗಲೂ ಕೂಡ ಹಲವು ಕಟ್ಟಡ, ಸ್ಥಳಗಳಿದೆ. ಇದರಿಂದ ಬಡವರಿಗೆ ಏನೂ ಸಹಾಯ ಆಗುವುದಿಲ್ಲ ಎಂದರು.
ಟಿಪ್ಪು ಎಕ್ಸ್ ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್ ಪ್ರೆಸ್ ಎಂದು ಮರುನಾಮಕರಣ ಮಾಡಿದ ವಿಚಾರಕ್ಕೆ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ನಮ್ಮ ದೇಶದಲ್ಲಿ 23 ಕೋಟಿಗಿಂತ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಆರ್ ಎಸ್ ಎಸ್ ಮುಖಂಡರೇ ಹೇಳಿದ್ದಾರೆ. ಸರ್ಕಾರ ಮೊದಲು ಅದರ ಬಗ್ಗೆ ಗಮನ ಹರಿಸಬೇಕು ಎಂದರು. ಬರೀ ರೈಲುಗಳ ಹೆಸರು ಬದಲಾವಣೆ ಮಾಡಿದ ಮಾತ್ರಕ್ಕೆ ಬಡವರಿಗೆ ಸಹಾಯ ಆಗುವುದಿಲ್ಲ ಎಂದು ಜರಿದರು.
ಎಸ್ಸಿ, ಎಸ್ಟಿ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡುವುದಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಈ ಮೂಲಕ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯನ್ನು ಒಪ್ಪಿಕೊಂಡಿದೆ. “SC ಮೀಸಲಾತಿಯನ್ನು ಶೇ 15 ರಿಂದ ಶೇ 17ಕ್ಕೆ ಹೆಚ್ಚಿಸಲು ಮತ್ತು ST ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ. ಈ ಕುರಿತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಎಸ್ ಸಿ , ಎಸ್ ಟಿ ಮೀಸಲಾತಿ ಹೆಚ್ಚಳ ಮಾಡಿದ್ರೆ ನಿಮಗೆ ಓಟು ಸಿಗೋದಿಲ್ಲ ಎಂದು ವಾಗ್ಧಾಳಿ ನಡೆಸಿದರು.
ನ್ಯಾ.ನಾಗಮೋಹನ್ ದಾಸ್ ಅವರು ಎರಡು ವರ್ಷದ ಹಿಂದೆಯೇ ಮೀಸಲಾತಿ ಹೆಚ್ಚಳದ ವರದಿ ನೀಡಿದ್ದರು. ಈಗಅದನ್ನು ಅನುಷ್ಟಾನ ಮಾಡುತ್ತಿದ್ದಾರೆ. ಅದರ ಅರ್ಥ ಏನೆಂದು ಎಲ್ಲರಿಗೂ ಗೊತ್ತಿದೆ ಎಂದರು.
SC, ST ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ನಿಗಮ ರಚಿಸಲು ತೀರ್ಮಾನ – ಸಿಎಂ ಬೊಮ್ಮಾ ಯಿ ಘೋಷಣೆ
BIG NEWS: ‘ಓಲಾ, ಉಬರ್ ಆಟೋ’ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ‘ರಾಜ್ಯ ಸರ್ಕಾರ’ ಆದೇಶ | Ola, Uber Autorickshaw