ಬೆಂಗಳೂರು : ರಾಜ್ಯದಲ್ಲಿ ಜಾನುವಾರುಗಳಿಗೆ ತಗಲುತ್ತಿರುವ ಗಂಟು ಚರ್ಮರೋಗ ಖಾಯಿಲೆಯಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಗಂಟುರೋಗದಿಂದ ಹಸುಗಳು ಸಾಯುತ್ತಿದೆ, ಈ ವಿಚಾರದ ಕುರಿತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಟು ಚರ್ಮರೋಗದಿಂದ ಜಾನುವಾರುಗಳು ಸಾಯುತ್ತಿದೆ. ಸಾವಿನ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ, ಹಸು ಸತ್ತರೆ 20 ಸಾವಿರ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಸತ್ತ ಹಸುಗಳ ಮರಣೋತ್ತರ ಪರೀಕ್ಷೆಗೆ ವೈದ್ಯರೇ ಇಲ್ಲ, ಇನ್ನೂ ನೀವು ಹೇಗೆ ರೋಗ ಪತ್ತೆ ಹಚ್ಚುತ್ತೀರಾ ಎಂದು ಹೆಚ್ಡಿಕೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸರ್ಕಾರ ಕೂಡಲೇ ಈ ಬಗ್ಗೆ ಮುತುವರ್ಜಿ ವಹಿಸಿ ರೋಗ ಪತ್ತೆ ಮಾಡಬೇಕು. ಪತ್ತೆ ಮಾಡಿ ಲಸಿಕೆ ನೀಡಬೇಕು, ಈ ವಿಚಾರವಾಗಿ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದರು.
ಪ್ರವಾಸಿಗರಿಗೆ ಗುಡ್ ನ್ಯೂಸ್ : ಕೊಡಚಾದ್ರಿ ಬೆಟ್ಟಕ್ಕೆ ರೋಪ್ ವೇ ; ಟೆಂಡರ್ ಕರೆಯಲು ಕೇಂದ್ರ ಸರ್ಕಾರ ನಿರ್ಧಾರ
‘’ಮೀಸಲಾತಿ ಹೆಚ್ಚಳ ಮಾಡಿದ ಗಂಡುಗಲಿ ಸಿಎಂ ಬೊಮ್ಮಾಯಿ, ನಿಮ್ಮ ಗುಲಾಮರಾಗಿ ಇರ್ತಿವಿ’’ : ಶಾಸಕ ರಾಜುಗೌಡ