ಕಲಬುರ್ಗಿ: ಒಂದೆಡೆ ಕಾಂಗ್ರೆಸ್ 40% ಸರ್ಕಾರ ಎಂಬುದಾಗಿ ರಾಜ್ಯ ಸರ್ಕಾರದ ವಿರುದ್ಧ ಸರಣಿ ಕಿಡಿಕಾರುತ್ತಿದೆ. ಮತ್ತೊಂದೆಡೆ ಈ ಸಂದರ್ಭದಲ್ಲಿಯೇ ನಾಳೆ ಸದನದಲ್ಲಿಯೇ ರಾಜ್ಯ ಬಿಜೆಪಿ ಸರ್ಕಾರದ ಸಚಿವರೊಬ್ಬರ ಅಕ್ರಮವನ್ನು ದಾಖಲೆ ಸಹಿತ ಬಹಿರಂಗ ಪಡಿಸೋದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
“ನಾವು ಹೋಗುತ್ತಿದ್ದೇವೆ, ಕ್ಷಮಿಸಿ” : ಮಂಗಳೂರಿನಲ್ಲಿ ಹಾಸ್ಟೆಲ್ ಕಿಟಕಿ ಮುರಿದು ಪರಾರಿಯಾದ ಮೂವರು ವಿದ್ಯಾರ್ಥಿನಿಯರು
ಇಂದು ಕಲಬುರ್ಗಿ ವಿಮಾನ ನಿಲ್ದಾಣದ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯ ಸರ್ಕಾರದ ಸಚಿವರೊಬ್ಬರು ನಿಯಮ ಉಲ್ಲಂಘಿಲಸಿ, ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ಅಕ್ರಮವನ್ನು ಎಸಗಿದ್ದಾರೆ. ಅದರ ಬಗ್ಗೆ ನಾಳೆ ದಾಖಲೆ ಸಹಿತ ಸದನದಲ್ಲಿಯೇ ಬಹಿರಂಗ ಪಡಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ.
BREAKING NEWS : `PAYCM’ ಪೋಸ್ಟರ್ ಅಂಟಿಸಿದ ಕೇಸ್ : ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ನಾಳೆಯವರೆಗೆ ಕಾಯಿರಿ. ಯಾವ ಸಚಿವರು, ಅವರ ಹೆಸರು ಏನು ಎಂಬುದು ಸದನದಲ್ಲಿಯೇ ಬಹಿರಂಗವಾಗಲಿದೆ. ನಾನು ಗಾಳಿಯಲ್ಲಿ ಗುಂಡು ಹಾರಿಸುತ್ತಾ ಇಲ್ಲ. ಅಲ್ಲದೇ ಹಿಟ್ ಅಂಡ್ ರನ್ ಕೆಲಸವನ್ನು ಮಾಡ್ತಾ ಇಲ್ಲ ಎಂದರು.
ಲಂಚವಿಲ್ಲದೇ ಯಾವ ಕೆಲಸವೂ ನಡೆಯುವುದಿಲ್ಲ, ಬಿಜೆಪಿ ಸರ್ಕಾರ ಅಂದರೇನೇ ಲಂಚದ ಸರ್ಕಾರ – ಕಾಂಗ್ರೆಸ್
ನನ್ನ ಬಗ್ಗೆ ಹಗುರವಾಗಿ ಏಕವಚನದಲ್ಲಿ ಮಾತನಾಡಿದಂತ ಆ ಸಚಿವರಿಗೆ ನಾಳೆ ಸದನದಲ್ಲಿಯೇ ಅವರ ಅಕ್ರಮಗಳನ್ನು ದಾಖಲೆಗಳ ಸಹಿತ ಬಹಿರಂಗ ಪಡಿಸಿ, ಉತ್ತರ ನೀಡಲಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹಗರಣಗಳ ದಾಖಲೆ ಬಿಡುಗಡೆ ಮಾಡುವೆ ಎಂದು ಹೇಳಿದರು.