ಬೆಂಗಳೂರು : ಮಹಿಳೆ ಕಿಡ್ನಾಪ್ ಕೇಸ್ ನಲ್ಲಿ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣರನ್ನು SIT ಅಧಿಕಾರಿಗಳು ಬಂಧಿಸಿದ್ದರು.ಇದೀಗ ಇಂದು ಅವರ ಎಸ್ಐಟಿ ಕಸ್ಟಡಿ ಅಂತ್ಯವಾಗಿದ್ದು, ಹಾಗಾಗಿ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅಧಿಕಾರಿಗಳು ಹಾಜರುಪಡಿಸಿದ್ದಾರೆ.
ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ಅಪಹರಣಕ್ಕೆ ಒಳಗಾದ ಮಹಿಳೆಯ ಮಗ ದೂರು ದಾಖಲಿಸಿದ್ದನು ಶಾಸಕ ಎಚ್ ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಸಂಬಂಧಿಯಾಗಿರುವ ಸತೀಶ ಬಾಬು ವಿರುದ್ಧ ಮಹಿಳೆಯ ಮಗ ದೂರು ಸಲ್ಲಿಸಿದ್ದನು. ದೂರನ್ನು ಆಧರಿಸಿದ ಸೊಸೈಟಿ ಅಧಿಕಾರಿಗಳು ಎಚ್ಡಿ ರೇವಣ್ಣ ಅವರನ್ನು ಇತ್ತೀಚಿಗೆ ಬಂಧಿಸಿತ್ತು.
ನಂತರ ಎಚ್ ಡಿ ರೇವಣ್ಣ ಅವರ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳು ಸಂತ್ರಸ್ತೆಯ ಮಹಿಳೆಯನ್ನು ಕರೆದುಕೊಂಡು ಹೋಗಿ ಸ್ಥಳ ಮಹಾಜರು ಹಾಗೂ ಪರಿಶೀಲನೆ ನಡೆಸಿದರು ತದನಂತರ ನಿನ್ನೆ ಅವರ ಆರೋಗ್ಯದಲ್ಲಿ6 ಏರುಪೇರು ಉಂಟಾಗಿದ್ದರಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸತತವಾಗಿ 2 ಗಂಟೆಗಳ ಕಾಲ ಚಿಕಿತ್ಸೆ ಪಡೆದಿದ್ದರು.
ಇದೀಗ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರೇವಣ್ಣ ಅವರ ಎಸ್ಐಟಿಕ ಸ್ಟಡಿ ಅಂತ್ಯವಾಗಿರುವ ಹಿನ್ನೆಲೆಯಲ್ಲಿ ಇದೀಗ ರೇವಣ್ಣರನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಇದೀಗ ವಿಚಾರಣೆ ಆರಂಭವಾಗಲಿದ್ದು ಎಚ್ ಡಿ ರೇವಣ್ಣ ಅವರಿಗೆ ಬಿಲ್ ಸಿಗುತ್ತಾ ಅಥವಾ ಜೈಲು ಸೇರುತ್ತಾರ ಎನ್ನುವುದನ್ನು ಕಾದುನೋಡಬೇಕಿದೆ.