ಬೆಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ವಿರುದ್ಧದ ಕಿಡ್ನ್ಯಾಪ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯ ವೇಳೆಯಲ್ಲಿ, ಕೋರ್ಟ್ ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ಬಗ್ಗೆ ಮೆಮೋ ಸಲ್ಲಿಸಲಾಗಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದೆ. ಈ ವೇಳೆಯಲ್ಲಿ ಹೆಚ್.ಡಿ ರೇವಣ್ಣ ಪರ ಹಿರಿಯ ವಕೀಲ ಮೂರ್ತಿ ಡಿ ನಾಯಕ್ ಅವರು, ಉಪ ಮುಖ್ಯಮಂತ್ರಿ ಹೇಳಿಕೆ ಉಲ್ಲೇಖಿಸಿದರು. ಡಿಕೆ ಶಿವಕುಮಾರ್ ಅವರು 2 ತಿಂಗಳು ಕಸ್ಟಡಿಯಲ್ಲಿ ಇರಿಸಿ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ. ಈ ರೀತಿಯ ಹೇಳಿಕೆ ನೀಡುವುದು ತನಿಖೆಯ ಧಿಕ್ಕು ತಪ್ಪಿಸುತ್ತದೆ. ಇದರ ಹಿಂದಿನ ಉದ್ದೇಶವೇನು ಎಂಬುದಾಗಿ ಪ್ರಶ್ನಿಸಿದಂತ ಅವರು, ಡಿಸಿಎಂ ಡಿಕೆಶಿ ಹೇಳಿಕೆಯ ಬಗ್ಗೆ ಎಸ್ ಪಿಪಿ, ಕೋರ್ಟ್ ಗೆ ಮೆಮೋ ಸಲ್ಲಿಸಿದರು.
ಅಲ್ಲದೇ ನಿರೀಕ್ಷಣಾ ಜಾಮೀನು ನೀಡಿದ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳ ಮುಂದೆ ತನಿಖೆಗೆ ಹಾಜರಾಗಲಿದ್ದಾರೆ. ರಾಜಕೀಯ ಉದ್ದೇಶಕ್ಕಾಗಿ ಪ್ರಕರಣ ಬಳಸಿಕೊಳ್ಳುತ್ತಿರುವಾಗ ಹೇಗೆ ನಿರೀಕ್ಷಣಾ ಜಾಮೀನು ಇಲ್ಲದೇ ವಿಚಾರಣೆಗೆ ಹಾಜರಾಗೋದು? ಚುನಾವಣೆ ವೇಳೆ ರಾಜಕೀಯ ಲಾಭ ಪಡೆಯಲು ಪ್ರಯತ್ನ ನಡೆಸಲಾಗುತ್ತದೆ. ಬಂಧಿದಿಂದ ರಕ್ಷಣೆ ಸಿಗದಿದ್ದರೇ ವಿಚಾರಣೆಗೆ ಹಾಜರಾಗುವುದು ಹೇಗೆ ಎಂದರು. ನಾನು ಜವಾಬ್ದಾರನಾಗಿ ಈ ಹೇಳಿಕೆ ನೀಡಿತತ್ತಿದ್ದೇನೆ. ಎಸ್ಐಟಿ ತನಿಘೆ ಸಹಕರಿಸಲು ಹೆಚ್ ಡಿ ರೇವಣ್ಣ ಸಿದ್ಧರಿದ್ದಾರೆ. ದಸ್ತಗಿರಿ ಮಾಡುತ್ತೇವೆಂದು ಸ್ಪಷ್ಟರಡಿಸಿದ್ದಾರೆ. ಆಕ್ಷೇಪಣೆಯಲ್ಲಿ ಎಸ್ಐಟಿ ಬಂಧನ ಸ್ಪಷ್ಟ ಪಡಿಸಿದ್ದಾರೆ. ಬಂಧನಕ್ಕೂ ಅಧಿಕಾರಕ್ಕೂ ವ್ಯತ್ಯಾಸವಿದೆ. ತನಿಖಾಧಿಕಾರಿಗಳು ಬಂಧಿಸೋದಾಗಿ ಹೇಳಿದ್ದಾರೆ. ರಕ್ಷಣೆ ಬೇಕು ಎಂದರು.
ಶಾಲಾ ಆರಂಭಕ್ಕೂ ಮುನ್ನವೇ ವಿದ್ಯಾರ್ಥಿಗಳಿಗೆ ‘ಪಠ್ಯಪುಸ್ತಕ ವಿತರಣೆ’ಗೆ ಬಗ್ಗೆ ಗುಡ್ ನ್ಯೂಸ್