ಹಾಸನ: ಲೈಂಗಿಕ ದೌರ್ಜನ್ಯ, ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲು, ಬೇಲ್ ನಲ್ಲೇ ಅಲದಾಡಿ, ಜಾಮೀನು ಪಡೆದ ಬಳಿಕ 20 ದಿನಗಳ ನಂತ್ರ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಹಾಸನದ ಹೊಳೆನರಸೀಪುರದಲ್ಲಿನ ತಮ್ಮ ನಿವಾಸಕ್ಕೆ ಭೇಟಿಯಾಗಿದ್ದಾರೆ. ಅವರನ್ನು ದಾರಿಯುದ್ಧಕ್ಕೂ ಅದ್ದೂರಿಯಾಗಿ ಕಾರ್ಯಕರ್ತರು ಸ್ವಾಗತಿಸಿದ್ದಾರೆ.
ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಅವರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ಮಹಿಳೆ ಅಪಹರಣ ಕೇಸಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನು ಬಳಿಕ ಟೆಂಪಲ್ ರನ್ ಕೂಡ ಮಾಜಿ ಸಚಿವ ಹೆಚ್.ಡಿ ರೇವಣ್ಣ ನಡೆಸಿದ್ದರು.
ಇಂದು 20 ದಿನಗಳ ಬಳಿಕ ಅವರು ಹಾಸನ ಜಿಲ್ಲೆಗೆ ಎಂಟ್ರಿಕೊಟ್ಟಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿನ ತಮ್ಮ ನಿವಾಸಕ್ಕೆ ಶಾಸಕ ಹೆಚ್.ಡಿ ರೇವಣ್ಣ ಭೇಟಿ ನೀಡಿದ್ದಾರೆ.
ಹಾಸನದ ಹೊಳೆನರಸೀಪುರಕ್ಕೆ ಬರೋ ದಾರಿಯುದ್ಧಕ್ಕೂ ಅವರನ್ನು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಅದರಲ್ಲೂ ಕಿರಿಸಾವೆಯಲ್ಲಿ ಕಾರ್ಯಕರ್ತರ ಸ್ವಾಗತಕ್ಕೆ ಹೆಚ್.ಡಿ ರೇವಣ್ಣ ಭಾವುಕರಾದರು. ಜೊತೆಗೆ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಕಾರಿನಿಂದ ಕೆಳಗೆ ಇಳಿದು, ನಮಸ್ಕರಿಸಿ ತೆರಳಿದ್ದಾರೆ ತಿಳಿದು ಬಂದಿದೆ.
BREAKING : ವಿಜಯಪುರದಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು
ಪೆನ್ ಡ್ರೈವ್ ಮೊದಲು ತಲುಪಿದ್ದೇ ಡಿಕೆಶಿಗೆ, ತಂದುಕೊಟ್ಟಿದ್ದೇ ಚಾಲಕ ಕಾರ್ತಿಕ್: HDK ಸ್ಪೋಟಕ ಬಾಂಬ್