ಮಂಡ್ಯ : ಮಂಡ್ಯ ಕ್ಷೇತ್ರವು ವಿಧಾನಸಭೆ ಚುನಾವಣೆ ಯಾಗಲಿ ಅಥವಾ ಲೋಕಸಭೆ ಚುನಾವಣೆ ಆಗಲಿ ಅಲ್ಲಿ ಒಕ್ಕಲಿಗರ ಮತಗಳೇ ಪ್ರಮುಖವಾಗಿದೆ. ಏಕೆಂದರೆ 2018ರಲ್ಲಿ ಮೈತ್ರಿ ಸರ್ಕಾರವಾಗಲೂ 7ಕ್ಕೆ 7 ಸ್ಥಾನವನ್ನು ಜೆಡಿಎಸ್ ಪಕ್ಷಕ್ಕೆ ನೀಡಿದರು.ಅಲ್ಲದೆ 2013ರಲ್ಲಿ ಕೂಡ ಡಿಕೆ ಶಿವಕುಮಾರ್ ಸಿಎಂ ಆಗಲೆಂದು 6 ಸ್ಥಾನಗಳನ್ನು ಗೆಲ್ಲಿಸಿದ್ದರು.
ಸುಳ್ಳು, ದುರುದ್ದೇಶಪೂರಿತ: ಪಾಕ್ ನಲ್ಲಿ ಹತ್ಯೆಗಳ ವರದಿ ನಿರಾಕರಿಸಿದ ಭಾರತ
ಇದೀಗ ಹೆಚ್ ಡಿ ಕುಮಾರಸ್ವಾಮಿ ಕೂಡ ಅದೇ ರೀತಿ ಒಂದು ಯೋಜನೆಗೆ ಮುಂದಾಗಿದ್ದು ಕೇಂದ್ರ ಸಚಿವನಾದರೆ ಜಿಲ್ಲೆ ಅಭಿವೃದ್ಧಿ ಎಂಬ ಪ್ರಚಾರದ ಮೂಲಕ ಒಕ್ಕಲಿಗರ ಮತದಾರ ಸೆಳೆಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಮಂಡ್ಯದಲ್ಲಿ ಒಕ್ಕಲಿಗರ ಮತ ಸೆಳೆಯಲು ಕುಮಾರಸ್ವಾಮಿ ರಣತಂತ್ರ ಹೆಣೆದಿದ್ದು, ಮಂಡ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ಗೆದ್ದರೆ ಕೇಂದ್ರ ಸಚಿವ ಸ್ಥಾನಕ್ಕೆ ಏರುವ.ಪ್ಲಾನ್ ಮಾಡಲಾಗಿದೆ. ಸೆಂಟ್ರಲ್ ಮಿನಿಸ್ಟರ್ ಆದರೆ ಮಂಡ್ಯದಲ್ಲೂ ಅಭಿವೃದ್ಧಿ ಎಂದು ಪ್ರಚಾರ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಮಾಡುವಂತೆ ಪ್ರಚಾರ ಮಾಡಿದ್ರು ಲೋಕಸಭಾ ಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವ ಅಸ್ತ್ರ ಬಳಸಿದ್ದಾರೆ ಎನ್ನಲಾಗಿದೆ.
‘ಎಕ್ಸ್ಚೇಂಜ್-ಟ್ರೇಡೆಡ್ ಡೆರಿವೇಟಿವ್’ ನಿಯಮಗಳ ಅನುಷ್ಠಾನವನ್ನು ಮೇ 3 ರವರೆಗೆ ಮುಂದೂಡಿದ RBI
2018ರಲ್ಲಿ ಎಚ್ ಡಿ ಕುಮಾರಸ್ವಾಮಿ ಸಿಎಂ ಮಾಡಲು 7ಕ್ಕೆ 7 ಸ್ಥಾನ ಜನರು ಗೆಲ್ಲಿಸಿದ್ದರು. 2023 ರಲ್ಲಿ ಡಿಕೆ ಶಿವಕುಮಾರ್ ಸಿಎಂ ಪಟ್ಟಕ್ಕೆ ಏರಲಿ ಎಂದು ಆರು ಕ್ಷೇತ್ರದಲ್ಲಿ ಗೆಲುವು ಹೀಗಾಗಿ ಭಾವನಾತ್ಮಕವಾಗಿ ಒಕ್ಕಲಿಗರ ಮತ ಬೇಟೆಗೆ ಹೆಚ್ ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.