ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸ್ಟಾರ್ ಚಂದ್ರು ಸೋಲು ಕಂಡಿದ್ದಾರೆ. ಹಾಗಾದರೆ ಈ ಗೆಲುವು, ಸೋಲಿಗೆ ಕಾರಣ ಏನು ಗೊತ್ತಾ.? ಮುಂದೆ ಓದಿ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗೆಲುವಿಗೆ ಕಾರಣಗಳು
* ಕುಮಾರಸ್ವಾಮಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಆಗಿದ್ದು.
* ಕುಮಾರಸ್ವಾಮಿ ಅವರ ವರ್ಚಸ್ಸು.
* ಮಂಡ್ಯ ಜೆಡಿಎಸ್ ನ ಭದ್ರಕೋಟೆ.
* ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಾಗಿದ್ದು.
* ಒಕ್ಕಲಿಗರು ಸೇರಿದಂತೆ ಇತರೆ ವರ್ಗದವರು ಕೈ ಹಿಡಿದಿದ್ದು.
* ದಳಪತಿಳ ಒಗ್ಗಟಿನ ಮಂತ್ರ ಪಠಣ.
* ಮೈತ್ರಿ ನಾಯಕರ ಸಾಂಘಿಕ ಹೋರಾಟ.
* ಮಾಜಿ ಶಾಸಕರ ಅವಿರತ ಶ್ರಮ.
* ಗೆದ್ದರೇ ಕೇಂದ್ರ ಸಚಿವರಾಗುತ್ತಾರೆ ಎಂಬ ಘೋಷಣೆ.
* ಆಡಳಿತ ವಿರೋಧಿ ಅಲೆ.
* ಹೃದಯ ಶಸ್ತ್ರ ಚಿಕಿತ್ಸೆ ಬಗ್ಗೆ ಅನುಕಂಪ ಹಾಗೂ ವಿರೋಧ ಪಕ್ಷದ ನಾಯಕರ ಹೇಳಿಕೆ.
* ಗ್ಯಾರಂಟಿ ಯೋಜನೆಗಳು ಕೈ ಹಿಡಿಯುವಲ್ಲಿ ವಿಫಲ.
* ಕಾವೇರಿ ಹೋರಾಟದಲ್ಲಿ ಕುಮಾರಸ್ವಾಮಿ ಭಾಗಿ ಹಾಗೂ ಕಾವೇರಿಗಾಗಿ ಕುಮಾರಸ್ವಾಮಿ ಅನಿರ್ವಾಯ ಎಂಬ ಪ್ರಚಾರ.
* ಕೆರೆಗೋಡು ಹನುಮಧ್ವಜ ವಿವಾದ.
* ಕಾಂಗ್ರೆಸ್ ಅಭ್ಯರ್ಥಿ ಹೊಸ ಮುಖ.
* ಪುತ್ರ ನಿಖಿಲ್ ಸೋಲಿನ ಸಿಂಪಥಿ.
ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಸೋಲಿಗೆ ಕಾರಣಗಳು
* ಅಭ್ಯರ್ಥಿ ಹೊಸ ಮುಖ.
* ಅತಿಯಾದ ಆತ್ಮವಿಶ್ವಾಸ
* ಗ್ಯಾರಂಟಿ ಯೋಜನೆಯ ಬಗ್ಗೆ ನಂಬಿಕೆ.
* ಕೈ ಕೊಟ್ಟ ಅಹಿಂದ ಮತ್ತು ಮಹಿಳೆ ಮತಗಳು.
* ಹಣ ಹಂಚಿಕೆ ಸರಿಯಾಗಿ ಜನರಿಗೆ ತಲುಪದೇ ಇದ್ದಿದ್ದು.
* ಆರಂಭದ ಉತ್ಸಾಹ ಕೊನೆಯಲ್ಲಿ ಕಾಣದೇ ಇದ್ದದ್ದು.
* ಭೀಕರ ಬರ, ನಾಲೆಗಳಿಗೆ ನೀರು ಬಿಡದೇ ಇದ್ದದ್ದು .
* ದೇವೇಗೌಡ, ಕುಮಾರಸ್ವಾಮಿ ಮೇಲೆ ನಿರಂತರ ವಾಗ್ದಾಳಿ.
* ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ.
* ಮೋದಿ ಮತ್ತು ಕುಮಾರಸ್ವಾಮಿಯ ವೈಯಕ್ತಿಕ ವರ್ಚಸ್ಸು.
* ತೀವ್ರ ಬರ ಮತ್ತು ರೈತರ ವಿರೋಧದ ನಡುವೆಯೂ ತಮಿಳುನಾಡಿಗೆ ನಿರಂತರವಾಗಿ ನೀರು ಬಿಟ್ಟಿದ್ದು.
* ಕೆರಗೋಡು ಧ್ವಜ ವಿವಾದ.
* ಕಾಂಗ್ರೆಸ್‌ನವರ ಅತಿಯಾದ ಮುಸ್ಲಿಮರ ಓಲೈಕೆ.
ವರದಿ: ಗಿರೀಶ್ ರಾಜ್, ಮಂಡ್ಯ