ಉತ್ತರಕನ್ನಡ : ಇಂದು ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿದರು. ಈ ವೇಳೆ ಮಾಧ್ಯಮದವರಿಗೆ ಕುಮಾರಸ್ವಾಮಿ ಭೇಟಿ ನೀಡಿದನ್ನು ಸುದ್ದಿಯಾದಂತೆ ತಡೆಹಿಡಿದ್ದಕ್ಕೆ ಎಚ್ ಡಿ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾಡಿದರು.
ಈ ಕುರಿತು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರ್ಕಾರ ಹಾಗೂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದು, ಸಿದ್ದರಾಮಯ್ಯನ ಕೀಳುಮಟ್ಟದ ರಾಜಕೀಯ. ಕುಮಾರಸ್ವಾಮಿ ಭೇಟಿ ಸುದ್ದಿಯಾಗದಂತೆ ತಡೆ ಕೈ ಸರ್ಕಾರದ ಸಂವಿಧಾನ ವಿರೋಧಿ ನಡೆ! ಶಿರೂರಿನ ಗುಡ್ಡ ಕುಸಿತ ಪ್ರದೇಶಕ್ಕೆ ಕೇಂದ್ರ ಸಚಿವರಾದ @hd_kumaraswamy ಅವರು ಭೇಟಿ ನೀಡುವುದು ಸುದ್ದಿಯಾಗದಂತೆ ತಡೆಯಲು ಯತ್ನಿಸಿರುವುದು @siddaramaiah ಅವರ ಅಂಜು ಬುರುಕುತನ ತೋರಿಸುತ್ತದೆ.
ರಕ್ಷಣಾ ಕಾರ್ಯಾಚರಣೆ ಸ್ಥಳದಿಂದ ೫ ಕಿ.ಮೀ ದೂರದಲ್ಲೇ ಬ್ಯಾರಿಕೇಡ್ ಹಾಕಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ. ಮಾಧ್ಯಮಗಳ ಸ್ವತಂತ್ರ್ಯ ಹತ್ತಿಕ್ಕುವ ನಿಮ್ಮ ಈ ನಡೆ ಸಂವಿಧಾನ ವಿರೋಧಿ ಅಲ್ಲವೇ ಮುಖ್ಯಮಂತ್ರಿಗಳೇ..?ದುರಂತ ನಡೆದು ಇಷ್ಟು ದಿನಗಳಾದರೂ ಶಿರೂರಿಗೆ ನೀವಾಗಲಿ, ನಿಮ್ಮ ಸರ್ಕಾರದ ಯಾವುದೇ ಸಚಿವರಾಗಲಿ, ಸ್ಥಳಕ್ಕೆ ಭೇಟಿ ನೀಡಿಲ್ಲ. ಸಂತ್ರಸ್ಥರ ಸಂಕಷ್ಟ ಆಲಿಸಿಲ್ಲ. ಆದರೆ ಮಾನ್ಯ ಕುಮಾರಸ್ವಾಮಿ ಅವರು ಶಿರೂರು ಗ್ರಾಮಕ್ಕೆ ಭೇಟಿ ನೀಡುವ ವೇಳೆಯೂ ನಿಮ್ಮ ಸರ್ಕಾರದ ಈ ಸೇಡಿನ ರಾಜಕೀಯ ಥರವೇ..?
ಅದೇನೇ ಇರಲಿ, ಕುಮಾರಸ್ವಾಮಿ ಅವರಂತೂ ಪ್ರಚಾರಕ್ಕೆನೂ ಶಿರೂರಿಗೆ ಭೇಟಿ ನೀಡುತ್ತಿಲ್ಲ, ಜಿಲ್ಲಾಡಳಿತವನ್ನು ಬಳಸಿ ಮಾಧ್ಯಮದವರನ್ನು ತಡೆದ ಮಾತ್ರಕ್ಕೆ, ಕುಮಾರಸ್ವಾಮಿ ಅವರ ಭೇಟಿ ನಿಲ್ಲಿಸಲು ಸಾಧ್ಯವೇ? ಸಂತ್ರಸ್ಥರ ಕಷ್ಟ ಆಲಿಸುವುದನ್ನು ತಡೆಯಲು ಸಾಧ್ಯವೇ?
ಸಿದ್ದರಾಮಯ್ಯನ ಕೀಳುಮಟ್ಟದ ರಾಜಕೀಯ..!
ಕುಮಾರಸ್ವಾಮಿ ಭೇಟಿ ಸುದ್ದಿಯಾಗದಂತೆ ತಡೆ
ಕೈ ಸರ್ಕಾರದ ಸಂವಿಧಾನ ವಿರೋಧಿ ನಡೆ!ಶಿರೂರಿನ ಗುಡ್ಡ ಕುಸಿತ ಪ್ರದೇಶಕ್ಕೆ ಕೇಂದ್ರ ಸಚಿವರಾದ @hd_kumaraswamy ಅವರು ಭೇಟಿ ನೀಡುವುದು ಸುದ್ದಿಯಾಗದಂತೆ ತಡೆಯಲು ಯತ್ನಿಸಿರುವುದು @siddaramaiah ಅವರ ಅಂಜು ಬುರುಕುತನ ತೋರಿಸುತ್ತದೆ.
ರಕ್ಷಣಾ…
— Janata Dal Secular (@JanataDal_S) July 20, 2024