ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಯಾವಾಗ ಅಲ್ಲಿ ಅವರಿಗೆ ರಾಜಾತಿಥ್ಯ ನೀಡುವ ವಿಚಾರ ಬಹಿರಂಗವಾಯಿತೋ, ಅಲ್ಲಿಂದ ನಟ ದರ್ಶನ್ ಸೇರಿದಂತೆ ಇತರರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲಾಯಿತು. ಇದೀಗ ನಟ ದರ್ಶನ್ ಜೊತೆಗೆ ಕುಳಿತುಕೊಂಡು ತಂಬಾಕು ಜಗಿದಿದ್ದ ಆರೋಪದ ಅಡಿ ಶ್ರೀನಿವಾಸ್ ಅಲಿಯಾಸ್ ಕುಳ್ಳ ಸೀನನ ವಿರುದ್ಧದ ಕೇಸ್ ಗೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿ ತಡೆ ನೀಡಿದೆ.
ಶ್ರೀನಿವಾಸ ಅಲಿಯಾಸ್ ಕುಳ್ಳ ಸೀನ ವಿರುದ್ಧದ ಕೇಸ್ ಗೆ ಹೈಕೋರ್ಟ್ ತಡೆ ನೀಡಿದೆ. ಕರ್ನಾಟಕ ಜೈಲು ಅದಿನಿಯಮ 2022ರ ಸೆ.42 ಉಲ್ಲಂಘನೆ ಕೇಸ್ ದಾಖಲಾಗಿದ್ದು, ಫೋಟೋ ವೈರಲ್ ಆಗಿದ್ದಕ್ಕೆ ಕೇಸ್ ಹಾಕಲಾಗಿದೆ.ಆದರೆ ಯಾವುದೇ ಶಿಕ್ಷಾರ್ಹ ಅಪರಾಧ ಮಾಡಿಲ್ಲವೆಂದು ಶ್ರೀನಿವಾಸ್ ಪರ ಹಿರಿಯ ವಕೀಲ ಸಂದೇಶ ಚೌಟ ವಾದಿಸಿದರು.
ಜೈಲು ಕೈಪಿಡಿಯಲ್ಲಿ ಒಂದೆಡೆ ಧೂಮಪಾನ ನಿಷೇಧವಿದೆ. ನಿಯಮದ ಮತ್ತೊಂದೆಡೆ ಸ್ಮೋಕಿಂಗ್ ಜೋನ್ ಬಗ್ಗೆ ಹೇಳಲಾಗಿದೆ. ನಿಯಮದಲ್ಲೇ ವೈರುಧ್ಯವಿರುವ ಹಿನ್ನೆಲೆ ಕೇಸ್ ಗೆ ಹೈಕೋರ್ಟ್ ತಡೆ ನೀಡಿದೆ. ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.