ಬೆಂಗಳೂರು : ಕೆ ಆರ್ ಎಸ್ ಆಣೆಕಟ್ಟಿಗೆ ದಕ್ಕೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕೆ ಆರ್ ಎಸ್ ಅಣೆಕಟ್ಟಿನ ಸುತ್ತಮುತ್ತ ಗಣಿಗಾರಿಕೆಗೆ ನಿರ್ಬಂಧ ಹೇರಿ ಸಿಜೆ ಪ್ರಸನ್ನ ಬಿ.ವರಾಳೆ ಹಾಗೂ ನ್ಯಾ. ಕೃಷ್ಣ ದೀಕ್ಷಿತ್ ಅವರಿಂದ ಪೀಠ ಆದೇಶ ಹೊರಡಿಸಿದೆ.
ಕೆಆರ್‌ಎಸ್ ಡ್ಯಾಮ್ ಬಳಿ ಹಲವು ಬಾರಿ ದೊಡ್ಡ ಶಬ್ದ ಕೇಳಿ ಬಂದಿದೆ. ಕೃಷ್ಣರಾಜಸಾಗರ ಅಣೆಕಟ್ಟು ಈಗಾಗಲೇ ಸಂಕಷ್ಟದಲ್ಲಿದೆ. ಅಣೆಕಟ್ಟಿನ ಬಳಿ ಗಣಿಗಾರಿಕೆ ನಡೆಸಿದರೆ ಗಂಭೀರ ಪರಿಣಾಮವಾಗಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಕೃಷ್ಣರಾಜಸಾಗರ ಅಣೆಕಟ್ಟಿಗೆ ಐತಿಹಾಸಿಕ ಮೌಲ್ಯವಿದೆ.ಮೈಸೂರು ಮಹಾರಾಜರು ಸರ್ ಎಂ ವಿಶ್ವೇಶ್ವರಯ್ಯರ ಕೊಡುಗೆ ಇದೆ.ಕೆ ಆರ್ ಎಸ್ ಡ್ಯಾಮ್ ನಿರ್ಮಾಣಕ್ಕೆ ಜನರು ರಕ್ತ ಬೆವರು ಹರಿಸಿದ್ದಾರೆ. ತಿತಾ ಶರ್ಮಾ ಅವರ ಸರ್ ಎಂ ವಿಶ್ವೇಶ್ವರಯ್ಯ ಕುರಿತ ಪುಸ್ತಕದಲ್ಲಿ ಉಲ್ಲೇಖವಿದೆ. ಕೆಆರ್‌ಎಸ್‌ಗೆ ಧಕ್ಕೆಯಾಗುವ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ ಎಂದು ಕೋರ್ಟ್ ತಿಳಿಸಿದೆ